ಆ್ಯಪ್ನಗರ

ಸಭೆಗೆ ಬರದ ಅಧಿಕಾರಿಗಳಿಗೆ ನೋಟಿಸ್‌ ಕೊಡಿ

ಪ್ರತಿಸಭೆಯಲ್ಲೂ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌ನ್ನು ಇಲ್ಲಿಯವರೆಗೂ ನೀಡಿಲ್ಲ. ಆದ್ದರಿಂದ ಸಭೆಗೆ ಅಧಿಕಾರಿಗಳು ಬರುವುದಿಲ್ಲ. ಸಭೆಗೆ ಬಾರದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್‌ ನೀಡಿ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ತಾಪಂ ಅಧ್ಯಕ್ಷೆ ಅನುಸೂಯಾ ಸೂಚಿಸಿದರು.

Vijaya Karnataka 6 Oct 2018, 3:45 pm
ಗುಬ್ಬಿಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ
Vijaya Karnataka Web notice to the officers who do not attend the meeting
ಸಭೆಗೆ ಬರದ ಅಧಿಕಾರಿಗಳಿಗೆ ನೋಟಿಸ್‌ ಕೊಡಿ


ಗುಬ್ಬಿ: ಪ್ರತಿಸಭೆಯಲ್ಲೂ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌ನ್ನು ಇಲ್ಲಿಯವರೆಗೂ ನೀಡಿಲ್ಲ. ಆದ್ದರಿಂದ ಸಭೆಗೆ ಅಧಿಕಾರಿಗಳು ಬರುವುದಿಲ್ಲ. ಸಭೆಗೆ ಬಾರದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್‌ ನೀಡಿ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ತಾಪಂ ಅಧ್ಯಕ್ಷೆ ಅನುಸೂಯಾ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಕೊಳವೆ ಬಾವಿಯಿಂದ ಸಾರ್ವಜನಿಕರಿಗೆ ನೀಡುವ ನೀರನ್ನು ಸ್ವಂತ ತೋಟಗಳಿಗೆ ಬಳಕೆ ಮಾಡಿಕೊಳ್ಳುವ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲಾಖೆಗಳಿಂದ ಬರುವ ಸೌಲಭ್ಯಗಳ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಪಶುಪಾಲನ ಇಲಾಖೆಯಲ್ಲಿ 20ನೇ ಜಾನುವಾರು ಗಣತಿ ವಿಶೇಷವಾಗಿ ಈ ಬಾರಿ ನಡೆಯುತ್ತಿದ್ದು, ಜಾನುವಾರುಗಳಿಗೆ ಮಾತ್ರೆ ವಿತರಣೆ ಮಾಡುವ ಜತೆಗೆ ಜಿಪಿಆರ್‌ಎಸ್‌ ಮಾಡಲಾಗುತ್ತದೆ. ಗಿರಿರಾಜ ಕೋಳಿ ವಿತರಣೆಗೆ ಜಿಪಂ ಸದಸ್ಯರಿಂದ ಪಟ್ಟಿ ಪಡೆದು ವಿತರಣೆ ಮಾಡಲಾಗುವುದು. 5770 ಗಿರಿರಾಜ ಕೋಳಿಗಳನ್ನು ವಿತರಿಸಲಾಗುವುದು ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜು ತಿಳಿಸಿದರು.

ಟಾರ್ಪಲ್‌ ಕಥೆ ಏನು: ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿ ತಮ್ಮ ವರದಿ ಹೇಳಲು ನಿಂತಾಗ ತಾಪಂ ಉಪಾಧ್ಯಕ್ಷೆ ಕಲ್ಪನಾ, ಟಾರ್ಪಲ್‌ ಕಥೆಯೇನು. ರೈತರಿಂದ ಟಾರ್ಪಲ್‌ ನೀಡುವುದಾಗಿ ನಿಗದಿಪಡಿಸಿದ ಹಣಕಿಂತ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತಾಲೂಕಿಗೆ 1330 ಟಾರ್ಪಲ್‌ ಬಂದಿವೆ. ಪ್ರತಿ ಹೋಬಳಿಗೆ 216ರಂತೆ ಹಂಚಲಾಗಿದೆ. ಇದಕ್ಕಾಗಿ ಹೆಚ್ಚು ಹಣ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ತೆಗೆದುಕೊಂಡ ಹಣಕ್ಕೆ ರಸೀದಿ ನೀಡಲಾಗುತ್ತಿದೆ ಎಂದು ಉತ್ತರ ನೀಡಿದರು.

ಸಭೆಯಲ್ಲಿ ಇಒ ಜಗದೀಶ್‌ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ