ಆ್ಯಪ್ನಗರ

ಜೋಗ ಜಲಪಾತಕ್ಕೆ ರಾಜಹಂಸ ಕಾರ್ಯಾಚರಣೆ ಆರಂಭ

ಈ ವಿಶೇಷ ಪ್ಯಾಕೇಜ್‌ನಡಿ ಆ.7ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತದ ವೀಕ್ಷಣೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆಸಕ್ತರು ಕರಾರಸಾ ನಿಗಮದ ಅವತಾರ್‌ ತಂತ್ರಾಂಶದಲ್ಲಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿಕೊಂಡು ಪ್ರವಾಸ ಕೈಗೊಳ್ಳಬಹುದಾಗಿದೆ.

Vijaya Karnataka Web 31 Jul 2021, 8:09 pm
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ವಿಶೇಷ ಪ್ಯಾಕೇಜ್‌ ಕಾರ್ಯಕ್ರಮದಡಿ ರಾಜಹಂಸ ಹಾಗೂ ವೇಗದೂತ ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Vijaya Karnataka Web ರಾಜಹಂಸ ಬಸ್‌
ರಾಜಹಂಸ ಬಸ್‌


ಈ ವಿಶೇಷ ಪ್ಯಾಕೇಜ್‌ನಡಿ ಆ.7ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತದ ವೀಕ್ಷಣೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆಸಕ್ತರು ಕರಾರಸಾ ನಿಗಮದ ಅವತಾರ್‌ ತಂತ್ರಾಂಶದಲ್ಲಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿಕೊಂಡು ಪ್ರವಾಸ ಕೈಗೊಳ್ಳಬಹುದಾಗಿದೆ. ವೇಗದೂತ ಪ್ರಯಾಣ ದರವನ್ನು ವಯಸ್ಕರಿಗೆ 650 ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 400 ರೂ., ರಾಜಹಂಸ ಪ್ರಯಾಣ ದರವನ್ನು ವಯಸ್ಕರಿಗೆ 850 ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 600 ರೂ.ಗಳನ್ನು ನಿಗದಿಪಡಿಸಲಾಗಿದೆ.

ವೇಗದೂತ ಸಾರಿಗೆಯು ತುಮಕೂರಿನಿಂದ ಬೆಳಗ್ಗೆ 6 ಗಂಟೆಗೆ ನಿರ್ಗಮಿಸಿ ಸಾಗರ, ವರದ ಮೂಲ, ಇಕ್ಕೇರಿ, ಜೋಗ ಜಲಪಾತಕ್ಕೆ ಮಧ್ಯಾಹ್ನ 2.45 ಗಂಟೆಗೆ ತಲುಪಿ ಸಂಜೆ 5.30 ಗಂಟೆಗೆ ಜೋಗ ಜಲಪಾತದಿಂದ ಹೊರಟು ಮಧ್ಯರಾತ್ರಿ 12.45 ಗಂಟೆಗೆ ತುಮಕೂರಿಗೆ ಮರಳಿ ಬರಲಿದೆ. ಇದೇ ಮಾರ್ಗದಲ್ಲಿ ರಾಜಹಂಸ ಸಾರಿಗೆಯು ತುಮಕೂರಿನಿಂದ ಬೆಳಗ್ಗೆ 6 ಗಂಟೆಗೆ ನಿರ್ಗಮಿಸಿ ಮಧ್ಯಾಹ್ನ 2.15 ಗಂಟೆಗೆ ಜೋಗ ತಲುಪಿ ಜೋಗದಿಂದ ಸಂಜೆ 5.30 ಗಂಟೆಗೆ ಜೋಗ ಜಲಪಾತದಿಂದ ಹೊರಟು ಮಧ್ಯರಾತ್ರಿ 12.15 ಗಂಟೆಗೆ ತುಮಕೂರಿಗೆ ಮರಳಿ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ