ಆ್ಯಪ್ನಗರ

ಎಸ್‌ಬಿಐ ಗ್ರಾಹಕರ ಹಣ ವಂಚನೆ; ಆರೋಪಿ ಬಂಧನ

ಎಸ್‌ಬಿಐ ಬ್ಯಾಂಕಿನ ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಚಂದ್ರಶೇಖರ್‌ನನ್ನು ಶುಕ್ರವಾರ ಮುಂಜಾನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಆತನ ಚಿಕ್ಕಪ್ಪನ ಮನೆಯಲ್ಲಿ ಕೊರಟಗೆರೆ ಪಿಎಸ್ಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡದ ಅತಿಥಿಯಾಗಿರುವ ಘಟನೆ ನಡೆದಿದೆ.

Vijaya Karnataka 22 Sep 2018, 3:49 pm
ಕೊರಟಗೆರೆ: ಎಸ್‌ಬಿಐ ಬ್ಯಾಂಕಿನ ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಚಂದ್ರಶೇಖರ್‌ನನ್ನು ಶುಕ್ರವಾರ ಮುಂಜಾನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಆತನ ಚಿಕ್ಕಪ್ಪನ ಮನೆಯಲ್ಲಿ ಕೊರಟಗೆರೆ ಪಿಎಸ್ಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡದ ಅತಿಥಿಯಾಗಿರುವ ಘಟನೆ ನಡೆದಿದೆ.
Vijaya Karnataka Web sbi consumer money fraud accused arrested
ಎಸ್‌ಬಿಐ ಗ್ರಾಹಕರ ಹಣ ವಂಚನೆ; ಆರೋಪಿ ಬಂಧನ


ತಾಲೂಕಿನ ಹೊಳವನಹಳ್ಳಿ ಕೇಂದ್ರಸ್ಥಾನದ ಎಸ್‌ಬಿಐ ಬ್ಯಾಂಕಿನಲ್ಲಿ ಕಳೆದ 13 ವರ್ಷಗಳಿಂದ ಬ್ಯಾಂಕಿನ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್‌ ಅಲಿಯಾಸ್‌ ಚಂದ್ರು, ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಕಳೆದ 40 ದಿನಗಳ ಹಿಂದೆ ಪರಾರಿಯಾಗಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಎನ್ನಲಾಗಿದೆ.

ಹೊಳವನಹಳ್ಳಿ ಎಸ್‌ಬಿಐ ಬ್ಯಾಂಕಿನ ನೂತನ ವ್ಯವಸ್ಥಾಪಕ ಗಂಗಾಧರಪ್ಪ ಎಂಬುವರು ಕಳೆದ 2013ರಿಂದ 2018ರವರೆಗೆ 6 ವರ್ಷ ಈ ಹಿಂದೆ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಿದ ಮೂವರು ಮ್ಯಾನೇಜರ್‌, ಮೂರು ಕೇಸ್‌ವರ್ಕರ್‌, ಇಬ್ಬರು ಕ್ಯಾಷಿಯರ್‌, ಗುಮಾಸ್ತ ಚಂದ್ರು ಸೇರಿ ಒಟ್ಟು 9 ಜನರ ಮೇಲೆ ಗ್ರಾಹಕರ 16 ಲಕ್ಷ 50 ಸಾವಿರ ಹಣ ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.

ರೈತರು ಮತ್ತು ಬ್ಯಾಂಕಿನ ಗ್ರಾಹಕರಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಖಾತೆಯಲ್ಲಿನ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡ ಆರೋಪಿ ಚಂದ್ರಶೇಖರ್‌ 11 ಲಕ್ಷ 50 ಸಾವಿರ ಹಣದ ತಪೊ್ಪಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಚಂದ್ರಶೇಖರ್‌ನನ್ನು ವಶಕ್ಕೆ ಪಡೆದಿದ್ದು, ಉಳಿದ 8 ಜನರ ಪತ್ತೆ ಮಾಡಿ ಬಂಧಿಸಲು ಈಗಾಗಲೇ ಕೊರಟಗೆರೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ