ಆ್ಯಪ್ನಗರ

ರಾಜ್ಯದ ರೈತರೇ ಗಮನಿಸಿ: ತಡ ಮಾಡಬೇಡಿ, ಬೆಳೆ ಸಮೀಕ್ಷೆಗೆ ಸೆ.23 ಕಡೆಯ ದಿನ!

ರೈತರು ಬೆಳೆದ ಬೆಳೆಯನ್ನು ಸಮೀಕ್ಷೆ ಮಾಡಿ ಮಾಹಿತಿಯನ್ನು ನೀಡಲು ಸೆ.23 ಕಡೆಯ ದಿನವಾಗಿದೆ. ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ಗೆ ನಿಗದಿತ ಅವಧಿಯೊಳಗೆ ಅಪ್‌ಲೋಡ್‌ ಮಾಡಲು ಅವಕಾವಿದ್ದು, ಜಿಲ್ಲೆಯ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತುಮಕೂರು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ತಿಳಿಸಿದ್ದಾರೆ.

Vijaya Karnataka Web 16 Sep 2020, 2:06 pm
ತುಮಕೂರು: ರೈತರು ತಾವು ಬೆಳೆದ ಬೆಳೆಯ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ಗೆ ಅಪ್‌ಲೋಡ್‌ ಮಾಡಲು ಸೆ.23 ಕಡೆಯ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ತಿಳಿಸಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ರೈತರೇ ಸ್ವತಂತ್ರವಾಗಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ಗೆ ನಿಗದಿತ ಅವಧಿಯೊಳಗೆ ಅಪ್‌ಲೋಡ್‌ ಮಾಡಲು ಅವಕಾವಿದ್ದು, ಜಿಲ್ಲೆಯ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬೆಳೆ ಮಾಹಿತಿ ನೀಡದ ರೈತರ ಸವಲತ್ತುಗಳಿಗೆ ಕತ್ತರಿ: ಬೆಳೆ ಸಮೀಕ್ಷೆ ಯೋಜನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ಗೆ ತಮ್ಮ ಬೆಳೆಗಳ ವಿವರಗಳನ್ನು ಅಪ್‌ಲೋಡ್‌ ಮಾಡಿದಲ್ಲಿ ಬೆಳೆ ವಿಮೆ ಯೋಜನೆ, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಹಾಗೂ ನಫೆಡ್‌ ಮೂಲಕ ಕೊಬ್ಬರಿ ಖರೀದಿ ನೋಂದಣಿಗೆ ಬೆಳೆ ಸಮೀಕ್ಷೆ ಆಧಾರದ ಮೇಲೆ ಅವಕಾಶ ದೊರೆಯಲಿದೆ.
ಬೆಳೆ ಸಮೀಕ್ಷೆಗೆ ಮುಂದಾಗದ ರೈತರು, ರಾಜ್ಯದ ಪ್ರಗತಿ ಶೇ. 32.87 ಮಾತ್ರ!

ಅಲ್ಲದೆ, ಸೆ.12ರಿಂದ ಖಾಸಗಿ ನಿವಾಸಿಗಳನ್ನು ಬಳಸಿಕೊಂಡು ರೈತರೇ ಖುದ್ದು ತಮ್ಮ ಬೆಳೆ ವಿವರಗಳನ್ನು ಅಪ್‌ಲೋಡ್‌ ಮಾಡುವ ಅವಕಾಶವನ್ನು ಸಹ ಕಲ್ಪಿಸಲಾಗಿದ್ದು, ರೈತ ಬಾಂಧವರು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ನಲ್ಲಿ ನಿಗದಿತ ಅವಧಿಯೊಳಗೆ ಅಪ್‌ಲೋಡ್‌ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಕೊಡಗಿನಲ್ಲಿ ಬೆಳೆ ಸಮೀಕ್ಷೆ: ರೈತರಿಗೆ ಮಾಹಿತಿ ಕೊರತೆ, ಕಚೇರಿ ಅಲೆದಾಟದಲ್ಲೇ ಸುಸ್ತು!

ಜಿಲ್ಲೆಗೆ 17.16 ಲಕ್ಷ ಭೂಮಿ ತಾಕುಗಳ ಗುರಿಯನ್ನು ನಿಗದಿಪಡಿಸಲಾಗಿದೆ. ಈವರೆಗೆ 7,62,763 ತಾಕುಗಳ ಗುರಿ ಸಾಧಿಸಲಾಗಿದ್ದು, ಶೇ.44.487 ಪ್ರಗತಿಯಾಗಿರುತ್ತದೆ. ಪಾವಗಡ ತಾಲೂಕಿನಲ್ಲಿ ಗರಿಷ್ಠ ಶೇ.57.96 ಮತ್ತು ಮಧುಗಿರಿ ತಾಲೂಕಿನಲ್ಲಿ ಕನಿಷ್ಠ ಶೆ.39.87 ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ