ಆ್ಯಪ್ನಗರ

ಸರಣಿ ಕಳವು: ಬಂಗಾರ, ನಗದು ಕಳ್ಳತನ

ಗ್ರಾಮೀಣ ಪ್ರದೇಶವನ್ನೇ ಟಾರ್ಗೆಟ್‌ ಮಾಡಿರುವ ಕಳ್ಳರ ತಂಡ ಹಗಲಿನಲ್ಲಿ ಬಾಗಿಲು ಹಾಕಿರುವ ಮನೆಗಳ ಮಾಹಿತಿ ಸಂಗ್ರಹ ಮಾಡಿಕೊಂಡು ಇರುಳಿನಲ್ಲಿ ಬೀಗ ಮುರಿದು ಪ್ರತ್ಯೇಕ ಎರಡು ಕಡೆಯ ಮೂರು ಮನೆಯಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.

Vijaya Karnataka 5 Dec 2018, 5:00 am
ಕೊರಟಗೆರೆ: ಗ್ರಾಮೀಣ ಪ್ರದೇಶವನ್ನೇ ಟಾರ್ಗೆಟ್‌ ಮಾಡಿರುವ ಕಳ್ಳರ ತಂಡ ಹಗಲಿನಲ್ಲಿ ಬಾಗಿಲು ಹಾಕಿರುವ ಮನೆಗಳ ಮಾಹಿತಿ ಸಂಗ್ರಹ ಮಾಡಿಕೊಂಡು ಇರುಳಿನಲ್ಲಿ ಬೀಗ ಮುರಿದು ಪ್ರತ್ಯೇಕ ಎರಡು ಕಡೆಯ ಮೂರು ಮನೆಯಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
Vijaya Karnataka Web series stolen gold cash theft
ಸರಣಿ ಕಳವು: ಬಂಗಾರ, ನಗದು ಕಳ್ಳತನ


ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದ ಶಾರದಮ್ಮ, ರವಿಕುಮಾರ್‌ ಮತ್ತು ಅರಸಾಪುರ ಗ್ರಾಮದ ಪ್ರಕಾಶ್‌ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬೀಗ ಮುರಿದು ಒಳಗಡೆ ಪ್ರವೇಶಿಸಿ ಲಕ್ಷಾಂತರ ರೂ. ಮೌಲ್ಯದ ಬಂಗಾರ ಮತ್ತು ನಗದು ಎರಡನ್ನೂ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಬೈರೇನಹಳ್ಳಿ ಗ್ರಾಮದ ಬನಶಂಕರಿ ಬೇಕರಿಯ ಮಾಲೀಕರಾದ ಶಾರದಮ್ಮ ಎಂಬುವರು ಮನೆಯಿಂದ ರಾತ್ರಿ 3 ಗಂಟೆ ವೇಳೆಗೆ ಕೆಲಸ ಮಾಡಲು ಬೇಕರಿಗೆ ಬಂದ ನಂತರ ಮನೆಯ ಬೀಗ ಒಡೆದು 30 ಗ್ರಾಂ ನೆಕ್‌ಲೇಸ್‌, 5 ಉಂಗುರ, 25 ಗ್ರಾಂ ಚಿಕ್ಕ ನೆಕ್ಲೇಸ್‌, 2 ಕೆನ್ನೆ ಚೈನ್‌, 1 ಬ್ರೆಸ್ಲೇಟ್‌ ಮತ್ತು 50 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.

ನಂತರ ಇದೇ ಬೈರೇನಹಳ್ಳಿ ಗ್ರಾಮದ ರವಿಕುಮಾರ್‌ ಎಂಬುವರು ಸಂಬಂಧಿಕರ ಮನೆಗೆ ತೆರಳುವ ಮಾಹಿತಿ ಪಡೆದ ಕಳ್ಳರು ಸೋಮವಾರ ಮಧ್ಯರಾತ್ರಿ ಇವರ ಮನೆಯ ಬೀಗ ಒಡೆದು ಬೀರಿನಲ್ಲಿ ಮನೆ ನಿರ್ಮಾಣಕ್ಕಾಗಿ ಕೊಡಿಟ್ಟಿದ್ದ 2 ಲಕ್ಷ ಹಣ, 1 ಜತೆ ಯಾಂಗೀಸ್‌, 4 ಉಂಗುರ ಕದ್ದು ಪರಾರಿ ಆಗಿದ್ದಾರೆ ಎನ್ನಲಾಗಿದೆ.

ಅರಸಾಪುರ ಗ್ರಾಮದ ಪ್ರಕಾಶ್‌ ಎಂಬುವರ ಮನೆಯ ಬೀಗ ಒಡೆದ ಕಳ್ಳರು ಬೀರಿನಲ್ಲಿದ್ದ 65 ಗ್ರಾಂ ಬಂಗಾರ, 30 ಸಾವಿರ ರೂ. ಬೆಲೆ ಬಾಳುವ ಎರಡು ಜತೆ ವಾಲೆ, 30 ಸಾವಿರ ನಗದು, ಟಿವಿ, ಹೋಂ ಥಿಯೇಟರ್ಸ್‌ ಸೇರಿದಂತೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಸಂಪೂರ್ಣವಾಗಿ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ತುಮಕೂರು ಬೆರಳಚ್ಚು ತಜ್ಞ ಮತ್ತು ಶ್ವಾನದಳ ಸಿಬ್ಬಂದಿಗಳ ತಂಡ ಕಳ್ಳತನ ನಡೆದ ಮೂರೂ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಕೊರಟಗೆರೆ ಸಿಪಿಐ ಮುನಿರಾಜು, ಪಿಎಸ್ಸೈ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ. ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ