ಆ್ಯಪ್ನಗರ

ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಅಮಾನುಷ

ಬಸ್‌ ಪಾಸ್‌ ನೀಡಬೇಕೆಂದು ಒತ್ತಾಯಿಸಿ ನ್ಯಾಯಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ಲಾಠಿ ಚಾರ್ಜ್‌ ಅಮಾನುಷವಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಖಂಡನೀಯ ವ್ಯಕ್ತಪಡಿಸಿದರು.

Vijaya Karnataka 9 Jul 2018, 4:41 pm
ತುಮಕೂರು: ಬಸ್‌ ಪಾಸ್‌ ನೀಡಬೇಕೆಂದು ಒತ್ತಾಯಿಸಿ ನ್ಯಾಯಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ಲಾಠಿ ಚಾರ್ಜ್‌ ಅಮಾನುಷವಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಖಂಡನೀಯ ವ್ಯಕ್ತಪಡಿಸಿದರು.
Vijaya Karnataka Web the lathi charge is unacceptable on students
ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಅಮಾನುಷ


ನಗರದ ಗಾಂಧಿನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಂತಿಯಿಂದ ನ್ಯಾಯಯುತವಾಗಿ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ನಡೆಸಿಕೊಂಡ ಪೊಲೀಸರ ನಡೆ ಹೇಯ ಕೃತ್ಯವಾಗಿದೆ. ಪೊಲೀಸ್‌ ಇಲಾಖೆ ತಕ್ಷಣ ಅಮಾಯಕ ವಿದ್ಯಾರ್ಥಿಗಳ ಮೇಲೆ ಹಾಗೂ ವಿದ್ಯಾಸಂಸ್ಥೆಯ ಮೇಲೆ ದಾಖಲಿಸಿರುವ ಕೇಸನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪೊಲೀಸರು ತಮ್ಮ ಸಾಮರ್ಥ್ಯ‌ವನ್ನು ಮುಗ್ದ ವಿದ್ಯಾರ್ಥಿಗಳ ಮೇಲೆ ತೋರಿಸದೇ ನಿತ್ಯ ನಗರದಲ್ಲಿ ಸಮಾಜಘಾತುಕ ಶಕ್ತಿಗಳಂತೆ ವರ್ತಿಸುತ್ತಾ, ನಗರದ ನಾಗರಿಕರ ನೆಮ್ಮದಿ ಕೆಡಿಸಿರುವ ಕಳ್ಳರ ಮೇಲೆ, ಬೈಕ್‌ ವೀಲಿಂಗ್‌ ಮಾಡುವ, ಕಾಲೇಜು ಆವರಣಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ-ಪೋಕರಿಗಳ ಮೇಲೆ ತೋರಿಸಿ ಎಂದು ಅವರು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ ವಸತಿ ಮತ್ತು ನಿವೇಶನ ರಹಿತರಿಗೆ 2022ರ ವೇಳೆಗೆ ಪ್ರತಿಯೊಬ್ಬರಿಗೂ ಸ್ವÜಂತ ಸೂರು ಒದಗಿಸುವ ಪ್ರಧಾನಮಂತ್ರಿ ಆವಾಸ್‌ ಯೋಜನೆ, ಹೌಸಿಂಗ್‌ ಫಾರ್‌ ಆಲ್‌-2022 ಯೋಜನೆ ಜಾರಿಗೊಳಿಸಿದ್ದಾರೆ ಎಂದು ಶಾಸಕರು ತಿಳಿಸಿದರು.

ನಗರದಲ್ಲಿ ವಾಸಿಸುವ ಕಡು ಬಡವನಿಂದ ಆರಂಭಿಸಿ ಶ್ರೀಮಂತನೂ ಸಹ ಒಂದು ಸ್ವಂತ ಮನೆ ನಿರ್ಮಿಸಿಕೊಳ್ಳುವುದು, ಅವರ ಹಕ್ಕು ಮತ್ತು ಅವರಿಗೆ ನೆರವು ನೀಡುವುದು ಸರಕಾರದ ಕರ್ತವ್ಯ. ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ ಮತ್ತು ಹೌಸಿಂಗ್‌ ಬೋರ್ಡ್‌, ಕುಶಲ ಕರ್ಮಿಗಳಿಗೆ ಲಿವಿಂಗ್‌ ಕಮ್‌ ವರ್ಕ್‌ ಶೆಡ್‌ ನಿರ್ಮಿಸಿಕೊಡುವ ಕೈಗಾರಿಕಾ ಇಲಾಖೆಗಳು ಮತ್ತು ಎಲ್ಲಾ ವಸತಿಗೆ ಸಂಬಂಧಿಸಿ ಇಲಾಖೆಗಳು ಸಹ ಕಟ್ಟು ನಿಟ್ಟಿನಲ್ಲಿ ಬೇಡಿಕೆ ಆಧಾರಿತ ಸಮೀಕ್ಷೆ ನಡೆಸಲು ಎಲ್ಲಾ ಇಲಾಖೆಗಳಿಗೆ ಸೂಚಿಸಿದ್ದೇನೆ ಎಂದು ನುಡಿದರು.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅನವಶ್ಯಕ ಕಾಮಗಾರಿಗಳಿಗೆ ತಡೆ ನೀಡಿ ಆ ಹಣವನ್ನು ತುಮಕೂರು ಅಮಾನಿಕೆರೆ, ಮರಳೂರು ಕೆರೆಗೆ ಹೇಮಾವತಿ ನೀರನ್ನು ತುಂಬಿಸಿಕೊಳ್ಳಲು ಪೈಪ್‌ ಲೈನ್‌ ವ್ಯವಸ್ಥೆ ಮಾಡಿಕೊಂಡರೆ ತುಮಕೂರು ನಗರದ ನೀರಿನ ಸಮಸ್ಯೆಗೆ ಶಾಶತ್ವ ಪರಿಹಾರ ಸಿಗುವಂತಾಗಲಿದೆ. ಆಗ ತುಮಕೂರು ನಗರ ಸ್ಮಾರ್ಟ್‌ ನಗರವಾಗುತ್ತದೆ ಎಂದ ಅವರು, ಬುಗುಡನಹಳ್ಳಿ ಕೆರೆ, ಹೆಬ್ಬಾಕ ಕೆರೆ, ಕುಪ್ಪ್ಪೂರು ಕೆರೆ, ತುಮಕೂರು ಅಮಾನಿಕೆರೆ, ಮರಳೂರು ಕೆರೆ ಹಾಗೂ ಗಂಗಸಂದ್ರ ಕೆರೆಗೆ ನೀರನ್ನು ತುಂಬಿಸುವ ಕೆಲಸವಾದರೆ ಮಾತ್ರ 24*7 ನೀರನ್ನು ಸಾರ್ವಜನಿಕರು ಬಳಸಲು ಉಪಯೋಗವಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿ.ಎನ್‌. ರಮೇಶ್‌, ನಗರ ವಕ್ತಾರ ಶಂಭುಲಿಂಗಸ್ವಾಮಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಕಾರ್ಯದರ್ಶಿ ರಕ್ಷಿತ್‌, ಜಿಲ್ಲಾ ಕಚೇರಿ ಕಾರ್ಯದರ್ಶಿ ಸಂದೀಪ್‌ ಗೌಡ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಗೌಡ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ