ಆ್ಯಪ್ನಗರ

ಶಿಕ್ಷ ಣದ ಮೂಲಕ ಮೌಲ್ಯಗಳನ್ನು ವರ್ಗಾಯಿಸಿ

ಶಿಕ್ಷ ಣದ ಮೂಲಕ ಭವಿಷ್ಯದ ತಲೆಮಾರಿಗೆ ಮೌಲ್ಯಗಳನ್ನು ವರ್ಗಾಯಿಸುವುದು ಇಂದಿನ ಅನಿವಾರ್ಯತೆ. ಆ ಮೂಲಕ ಯುವ ಜನತೆ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗುವಂತಾಗಬೇಕು ಎಂದು ಹಿರಿಯ ಯೋಗಪಟು ಎಂ.ಕೆ.ನಾಗರಾಜರಾವ್‌ ಹೇಳಿದರು.

Vijaya Karnataka 13 Nov 2018, 3:54 pm
ತುಮಕೂರು: ಶಿಕ್ಷ ಣದ ಮೂಲಕ ಭವಿಷ್ಯದ ತಲೆಮಾರಿಗೆ ಮೌಲ್ಯಗಳನ್ನು ವರ್ಗಾಯಿಸುವುದು ಇಂದಿನ ಅನಿವಾರ್ಯತೆ. ಆ ಮೂಲಕ ಯುವ ಜನತೆ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗುವಂತಾಗಬೇಕು ಎಂದು ಹಿರಿಯ ಯೋಗಪಟು ಎಂ.ಕೆ.ನಾಗರಾಜರಾವ್‌ ಹೇಳಿದರು.
Vijaya Karnataka Web transfer values through education
ಶಿಕ್ಷ ಣದ ಮೂಲಕ ಮೌಲ್ಯಗಳನ್ನು ವರ್ಗಾಯಿಸಿ


ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರ ಜನ್ಮದಿನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯದ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷ ಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಆಧುನಿಕ ಸಮಾಜವನ್ನು ನೋಡಿದಾಗ ನಮ್ಮ ಶಿಕ್ಷ ಣ ನಿಜಕ್ಕೂ ಜನತೆಯನ್ನು ಸುಶಿಕ್ಷಿತರನ್ನಾಗಿ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಶಿಕ್ಷ ಣದಲ್ಲಿ ಮೌಲ್ಯಗಳ ಕೊರತೆಯೇ ಇದಕ್ಕೆ ಕಾರಣ. ಶಿಕ್ಷ ಣದಲ್ಲಿ ಮೌಲ್ಯಗಳನ್ನು ಬಿಂಬಿಸುವ ಕಾರ್ಯ ಪ್ರಾಥಮಿಕ ಶಾಲಾ ಹಂತದಿಂದಲೇ ಆರಂಭವಾಗಬೇಕು ಎಂದರು.

ಶಿಕ್ಷ ಣದ ಸುಧಾರಣೆಗೆ ಸಾಕಷ್ಟು ಆಯೋಗಗಳು ಬಂದಿವೆ. ಅವು ಒಳ್ಳೆಯ ವರದಿಗಳನ್ನೂ ನೀಡಿವೆ. ಆದರೆ ಯಾವ ಆಯೋಗದ ವರದಿಯೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಹೊಸ ಸರಕಾರ ಬಂದ ಕೂಡಲೇ ಹೊಸದೊಂದು ಆಯೋಗವನ್ನು ರಚಿಸುವ ಚಾಳಿಯಿಂದಾಗಿ ನಮ್ಮ ಶಿಕ್ಷ ಣದ ಇತಿಹಾಸದಲ್ಲಿ ಬರೀ ವರದಿಗಳೇ ತುಂಬಿಕೊಂಡಿವೆ ಎಂದು ವಿಷಾದಿಸಿದರು.

ಭಾರತೀಯ ಶಿಕ್ಷ ಣ ಪದ್ಧತಿಗೆ ತನ್ನದೇ ಸ್ಥಾನಮಾನವಿದೆ. ಆದರೆ ಬ್ರಿಟಿಷರು ಗುಮಾಸ್ತರನ್ನು ತಯಾರಿಸುವ ಶಿಕ್ಷ ಣ ಪದ್ಧತಿಯನ್ನು ಭಾರತದಲ್ಲಿ ಜಾರಿಗೆ ತಂದರು. ಭಾರತೀಯ ಶಿಕ್ಷ ಣ ಪದ್ಧತಿಯ ಶ್ರೇಷ್ಠ ಅಂಶಗಳ ಬಗ್ಗೆ ನಾವು ಮರುಚಿಂತನೆ ನಡೆಸುವ ಅಗತ್ಯವಿದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಮಾತನಾಡಿ, ಇಚ್ಛಾಶಕ್ತಿಯ ಕೊರತೆ ಯಾವುದೇ ಕ್ಷೇತ್ರದ ಪ್ರಗತಿಗೆ ಬಹು ದೊಡ್ಡ ತೊಡಕು ಎಂದರು.

ನೈತಿಕ ನಾಯಕತ್ವವುಳ್ಳ ಸೃಜನಶೀಲ ಮನಸ್ಸು ಇಂದಿನ ಅವಶ್ಯಕತೆಯಾಗಿದೆ. ನಾಯಕರಲ್ಲಿ ಸಂಪೂರ್ಣ ವಿಶ್ವಾಸವಿರಿಸಿ ಅವರನ್ನು ಹಿಂಬಾಲಿಸುವ ಪರಿಸ್ಥಿತಿ ಈಗ ಇಲ್ಲ ಎಂದರು.

ಮೌಲಾನಾ ಅವರು ಗಾಂಧೀಜಿಯವರ ಅಪ್ಪಟ ಅನುಯಾಯಿಯಾಗಿದ್ದರು. ಸುಭಾಷ್‌ ಅವರ ಹೋರಾಟದ ಬಗೆಗೂ ಗೌರವ ಹೊಂದಿದ್ದರು. ಅವರಿಗೆ ತಮ್ಮ ಚಿಂತನೆಗಳ ಬಗ್ಗೆ ಸ್ಪಷ್ಟತೆಯಿತ್ತು. ಶಿಕ್ಷ ಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.

ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ.ಎಂ.ಕೊಟ್ರೇಶ್‌, ಪ್ರಭಾರ ಕುಲಸಚಿವ ಪ್ರೊ.ಪಾಟೀಲ್‌ ಮಲ್ಲಿಕಾರ್ಜುನ, ಸಹಾಯಕ ಪ್ರಾಧ್ಯಾಪಕಿ ಎಂ.ಮಂಗಳಾಗೌರಿ, ಉಪ ಕುಲಸಚಿವ ಡಾ.ಡಿ. ಸುರೇಶ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ