ಆ್ಯಪ್ನಗರ

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ತೊಂದರೆ ಇಲ್ಲ: ಅನ್ವರ್‌ ಮಾಣಿಪ್ಪಾಡಿ

'ಭಾರತದ ಮೂಲ ನಿವಾಸಿಗಳಾದ ನಾಗರಿಕರಿಗೆ ವಿಶೇಷವಾಗಿ ಮುಸಲ್ಮಾನರಿಗೆ ಯಾವುದೇ ಸಂದೇಹ ಬೇಡ. ಅವರಿಗೆ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ' - ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಭರವಸೆ

Vijaya Karnataka Web 27 Dec 2019, 4:48 pm
ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆಯು ರಾಷ್ಟ್ರದ ಸುಭದ್ರತೆಗೆ ತುಂಬಾ ಅವಶ್ಯಕವಾದದ್ದು ಎಂದು ಬಿಜೆಪಿ ರಾಜ್ಯ ಸಹ ವಕ್ತಾರ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web ANVAR MANIPPADI
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ತೊಂದರೆ ಇಲ್ಲ: ಅನ್ವರ್‌ ಮಾಣಿಪ್ಪಾಡಿ


ಬಿಜೆಪಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಪ್ರಬುದ್ಧರ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅನ್ವರ್ ಮಾಣಿಪ್ಪಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ಪಾಕಿಸ್ತಾನ, ಬಾಂಗ್ಲಾ, ಆಫ್ಘಾನಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಒಳನುಸುಳಿರುವವರನ್ನು ಹೊರ ಹಾಕುವುದಕ್ಕೆ ಮತ್ತು ಅವರಿಂದ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ಸಹಕಾರಿಯಾಗುತ್ತದೆ ಎಂದರು.

ನೆರೆಯ ಶತ್ರು ದೇಶದಲ್ಲಿಅಲ್ಪಸಂಖ್ಯಾತರಾಗಿರುವ ಹಿಂದು, ಜೈನ, ಪಾರ್ಸಿ, ಬೌದ್ದ ಸಮುದಾಯದವರು ಹಲವು ಸಂಕಷ್ಟಗಳನ್ನು ಎದುರಿಸಿ, ನಿರಾಶ್ರಿತರಾಗಿರುವವರು ಈ ಕಾಯ್ದೆಯಿಂದ ನಮ್ಮ ದೇಶದಲ್ಲಿ ನೆಲೆಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿನ ಮೂಲ ನಿವಾಸಿಗಳಾದ ನಾಗರಿಕರಿಗೆ ವಿಶೇಷವಾಗಿ ಮುಸಲ್ಮಾನರಿಗೆ ಯಾವುದೇ ಸಂದೇಹ ಬೇಡ. ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದರು.

ಸಾರ್ವಜನಿಕರ ಆಸ್ತಿ ಹಾನಿ ಮಾಡಿದರೆ ಯುಪಿ ಮಾದರಿಯಲ್ಲಿ ಆಸ್ತಿ ಮುಟ್ಟುಗೋಲು ಚಿಂತನೆ: ಆರ್.ಅಶೋಕ್‌

ಕಾಂಗ್ರೆಸ್‌ ಮತ್ತು ಕಮ್ಯೂನಿಸ್ಟ್‌ ಪಕ್ಷದವರು ಅಮಾಯಕರನ್ನು ಪ್ರಚೋದಿಸಿ ಪ್ರತಿಭಟನೆ ಮಾಡಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಸ್‌.ಶಿವಪ್ರಸಾದ್‌, ಸಿ.ಎನ್‌ ರಮೇಶ್‌, ಮಲ್ಲಿಕಾರ್ಜುನಯ್ಯ, ಜೈಪ್ರಕಾಶ್‌ ಮತ್ತಿತರರಿದ್ದರು.

ಯುಟಿ‌ ಖಾದರ್ ಒಬ್ಬ ಹುಚ್ಚ, ಪಾಗಲ್, ದೇಶದ್ರೋಹಿ: ರೇಣುಕಾಚಾರ್ಯ ವಾಗ್ದಾಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ