ಆ್ಯಪ್ನಗರ

ಲಂಚ ಪಡೆದ ಸರ್ವೇಯರ್‌ಗೆ ಮೂರು ವರ್ಷ ಜೈಲು ಶಿಕ್ಷೆ

ಜಮೀನಿನ ಸರ್ವೆ ಮಾಡಿಕೊಡಲು 3 ಸಾವಿರ ರೂ. ಲಂಚ ಪಡೆದಿದ್ದ ತುಮಕೂರು ತಾಲೂಕು ಭೂಮಾಪನಾ ಇಲಾಖೆ ಸರ್ವೇಯರ್‌ ಒಬ್ಬರಿಗೆ ಇಲ್ಲಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Vijaya Karnataka 24 Jun 2019, 5:00 am
ತುಮಕೂರು: ಜಮೀನಿನ ಸರ್ವೆ ಮಾಡಿಕೊಡಲು 3 ಸಾವಿರ ರೂ. ಲಂಚ ಪಡೆದಿದ್ದ ತುಮಕೂರು ತಾಲೂಕು ಭೂಮಾಪನಾ ಇಲಾಖೆ ಸರ್ವೇಯರ್‌ ಒಬ್ಬರಿಗೆ ಇಲ್ಲಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Vijaya Karnataka Web tumkur court orders 3 years jail for corrupt surveyor
ಲಂಚ ಪಡೆದ ಸರ್ವೇಯರ್‌ಗೆ ಮೂರು ವರ್ಷ ಜೈಲು ಶಿಕ್ಷೆ


ಬೆಂಗಳೂರು ನಾಯಂಡಹಳ್ಳಿಯ ಶ್ರೀನಾಥ್‌ ಎಂಬುವರು ತಮ್ಮ ಪತ್ನಿ ಹೆಸರಿನಲ್ಲಿ ತುಮಕೂರು ತಾಲೂಕು ಮಾದಗೊಂಡನಹಳ್ಳಿಯಲ್ಲಿ ಜಮೀನು ಪಡೆದಿದ್ದರು. ಈ ಜಮೀನಿನ ಹದ್ದುಬಸ್ತ್‌ ಮಾಡಿಕೊಡಲು ತುಮಕೂರು ಸರ್ವೇ ಇಲಾಖೆಗೆ 2013 ರಲ್ಲಿ ಅರ್ಜಿ ಸಲ್ಲಿಸಿದ್ದರು. ಭೂಮಾಪನಾ ಇಲಾಖೆಯ ಶಿವಶಂಕರ್‌, ಈ ಜಮೀನು ಅದಲು ಬದಲಾಗಿದ್ದು, ಇದನ್ನು ಸರಿಪಡಿಸಿಕೊಡಲು 6 ಸಾವಿರ ರೂ. ನೀಡಬೇಕಾಗುತ್ತದೆ ಎಂದು ಹೇಳಿದ್ದರು. 6 ಸಾವಿರ ರೂ. ಪೈಕಿ 3 ಸಾವಿರವನ್ನು ತುಮಕೂರಿನ ತಮ್ಮ ಕಚೇರಿಯಲ್ಲಿಯೇ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

ಈ ಪ್ರಕರಣದ ವಿಚಾರಣೆಯು ತುಮಕೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವೂ ಆಗಿರುವ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸರ್ವೇಯರ್‌ ಶಿವಶಂಕರ್‌ಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 7ರ ಅಡಿಯಲ್ಲಿ 1 ವರ್ಷ ಶಿಕ್ಷೆ, ಕಲಂ 13ರ ಅಡಿಯಲ್ಲಿ 2 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಸ್‌.ಸುಧೀಂದ್ರನಾಥ್‌ ತೀರ್ಪು ಪ್ರಕಟಿಸಿದ್ದಾರೆ. ಜೈಲು ಶಿಕ್ಷೆಯ ಜತೆಗೆ ಎರಡು ಕಲಂಗಳ ಅಡಿಯಲ್ಲಿ ತಲಾ 5 ಸಾವಿರ ರೂ.ಗಳಂತೆ ಒಟ್ಟು 10 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕ ಎನ್‌.ಬಸವರಾಜು ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ