ಆ್ಯಪ್ನಗರ

ಮಧುಗಿರಿ: ಕರಡಿ-ಚಿರತೆಯ ದರ್ಶನದಿಂದ ಬೆಚ್ಚಿಬಿದ್ದ ಗ್ರಾಮಸ್ಥರು

ಮಧುಗಿರಿ ಕಸಬ ಹೋಬಳಿ ವ್ಯಾಪ್ತಿಯ ಚಿಕ್ಕಣ್ಣ ಪಾಳ್ಯದ ಬಳಿ 5 ಕರಡಿಗಳ ಗುಂಪೊಂದು ಪ್ರತಿ ದಿನ ರಾತ್ರಿ 8 ಗಂಟೆಯ ನಂತರ ದಿನ ಜಮೀನುಗಳಲ್ಲಿ ಪ್ರತ್ಯಕ್ಷ ವಾಗುತ್ತಿದ್ದು ಹೊಲಗದ್ದೆಗಳ ಇಂದ ಕೃಷಿ ಕೆಲಸ ಮಾಡಿ ಹಿಂತಿರುಗುವಾಗ ರೈತರಿಗೆ ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇನ್ನೊಂದು ಕಡೆ ಚಿರತೆ ಕೂಡ ಕಾಣಿಸಿಕೊಳ್ಳುತ್ತಿದೆ.

Vijaya Karnataka Web 9 Jan 2021, 12:59 pm
ಕೊಡಿಗೇನಹಳ್ಳಿ: ಮಧುಗಿರಿ ಪಟ್ಟಣದ ವಿದ್ಯಾನಗರದಲ್ಲಿನ ಬಾಲಕಿಯರ ವಿದ್ಯಾರ್ಥಿ ನಿಲಯದ ಸುತ್ತಾ ಮುತ್ತಾ ಕಳೆದ ಮೂರು ದಿನಗಳಿಂದ ಚಿರತೆಯೊಂದು ಪ್ರತಕ್ಷವಾಗುತ್ತಿದ್ದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಇತ್ತೀಚಿಗೆ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮೀಪ ಸರಣಿಯಾಗಿ ನಾಯಿ, ಹಂದಿಗಳ ಮರಿಗಳನ್ನು ಚಿರತೆ ಹೊತ್ತೊಯ್ದಿದ್ದು ಬೆಟ್ಟದ ಸಮೀಪವಿರುವ ಮನೆಯ ಮುಂದೆ ಇದ್ದ ಮೇಕೆಯೊಂದು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.
Vijaya Karnataka Web Leopard


ಬಾಲಕಿಯರ ಹಾಸ್ಟೆಲ್ ಸಮೀಪ ಸರಿಯಾದ ರಸ್ತೆಯಾಗಲಿ, ವಿದ್ಯುತ್ ದೀಪದ ವ್ಯವಸ್ಥೆಯಾಗಲಿ ಇಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಚಿರತೆಯ ದಾಳಿಯ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಹಾಸ್ಟೆಲ್‌ ಸಿಬ್ಬಂದಿಗಳು ಭಯದಲ್ಲೇ ಹಾಸ್ಟಲ್‍ಗೆ ತೆರಳಿ ಬಯೋಮೆಟ್ರಿಕ್ ಹಾಜರಾತಿ ನೀಡಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗಳಿಗೆ ಎದುರಾಗಿದೆ.

ಇನ್ನು ಈ ಸಮಸ್ಯೆ ನಿವಾರಣೆ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಕಳೆದ ಹಲವಾರು ತಿಂಗಳಿನಿಂದ ಹಾಗೂ ಶುಕ್ರವಾರ ಸಂಜೆ ಸುಮಾರು 5ರ ಸಮಯದಲ್ಲಿ ಸಮಯದಲ್ಲಿ ಪಟ್ಟಣದ ಲಿಂಗೇನಹಳ್ಳಿಯ ಸಮೀಪವಿರುವ ಕಾರಮರಡಿ ಗುಡ್ಡೆಯಲ್ಲಿನ ದೊಡ್ಡ ಗುಂಡಿನ ಮೇಲೆ ಚಿರತೆ ಕಂಡು ಬರುತ್ತಿದ್ದು ಆದಷ್ಟೂ ಬೇಗ ಈ ಚಿರತೆಯನ್ನು ಹಿಡಿಯುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳನ್ನು ಬಿಟ್ಟು ಹೋದ ಚಾಲಕ; ಕೆಎಸ್‌ಆರ್‌ಟಿಸಿ ಬಸ್‌ ತಡೆದು ಶಿಕ್ಷಣ ಸಚಿವರ ತರಾಟೆ..!

ಕರಡಿ ದರ್ಶನಕ್ಕೆ ಬೆಚ್ಚಿಬಿದ್ದ ಜನತೆ!
ಮಧುಗಿರಿ ಕಸಬ ಹೋಬಳಿ ವ್ಯಾಪ್ತಿಯ ಚಿಕ್ಕಣ್ಣ ಪಾಳ್ಯದ ಬಳಿ 5 ಕರಡಿಗಳ ಗುಂಪೊಂದು ಪ್ರತಿ ದಿನ ರಾತ್ರಿ 8 ಗಂಟೆಯ ನಂತರ ದಿನ ಜಮೀನುಗಳಲ್ಲಿ ಪ್ರತ್ಯಕ್ಷ ವಾಗುತ್ತಿದ್ದು ಹೊಲಗದ್ದೆಗಳ ಇಂದ ಕೃಷಿ ಕೆಲಸ ಮಾಡಿ ಹಿಂತಿರುಗುವಾಗ ರೈತರಿಗೆ ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ