ಆ್ಯಪ್ನಗರ

ತುಮಕೂರಲ್ಲಿ ಎರಡು ಚಿರತೆ ಸೆರೆ: ಇವೇ ನರಭಕ್ಷಕಗಳೆಂಬ ಶಂಕೆ ವ್ಯಕ್ತ!

ತುಮಕೂರಿನ ಕಸಬಾ ಹೋಬಳಿಯಲ್ಲಿ ನೀರಿನ ಕಾಲುವೆ ಸುರಂಗದಲ್ಲಿ ಅಡಗಿದ್ದ ಚಿರತೆಯನ್ನು ಬುಧವಾರ ಅರಣ್ಯ ಇಲಾಖೆಯ 25ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ‌ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

Vijaya Karnataka Web 18 Mar 2020, 6:52 pm
ತುಮಕೂರು: ತಾಲೂಕಿನ ಕಸಬಾ ಹೋಬಳಿ ಆಲನೂರು ಗ್ರಾಮದ ಆಚಾರಪಾಳ್ಯ ರಸ್ತೆಯ ಹೇಮಾವತಿ ಚಾನಲ್ ಟನಲ್‌ನಲ್ಲಿ ಅಡಗಿದ್ದ ಚಿರತೆಯನ್ನು ಬುಧವಾರ ಅರಣ್ಯ ಇಲಾಖೆಯ 25ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ‌ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
Vijaya Karnataka Web cheetha tumakuru


ಡಾ. ಸನ್ನತ್ ಅವರ ಮುಂದಾಳತ್ವದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಚಿರತೆಯು ನರಭಕ್ಷಕ ಚಿರತೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ.

ಚಿರತೆಯನ್ನು ಸೆರೆ ಹಿಡಿದ ಸ್ಥಳವು ಇತ್ತೀಚೆಗೆ ಮಾನವ ಹತ್ಯೆ ಸಂಭವಿಸಿದ ಸ್ಥಳದಿಂದ ಸುಮಾರು 10 ರಿಂದ 12 ಕಿ.ಮೀ. ದೂರದಲ್ಲಿದ್ದು, ಸಾರ್ವಜನಿಕರ ಮಾಹಿತಿ ಹಾಗೂ ಕ್ಯಾಮೆರಾ ಟ್ರಾಪ್‌ಗಳಲ್ಲಿ ಸೆರೆಯಾಗಿರುವ ಛಾಯಾಚಿತ್ರಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಇರುವುದು ತಿಳಿದು ಬಂದಿದೆ.

ತುಮಕೂರಿನಲ್ಲಿ ಚಿರತೆ ದಾಳಿಗೆ ಮೂರು ವರ್ಷದ ಮಗು ಬಲಿ: ಮನೆಯವರ ಎದುರೇ ಕಂದಮ್ಮನನ್ನು ಹೊತ್ತೊಯ್ದ ಮೃಗ

ಶಂಕಿತ ನರಭಕ್ಷಕ ಚಿರತೆಗಳನ್ನು ತ್ವರಿತವಾಗಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಚಿರತೆ ದಾಳಿ ಬಾಧಿತ ಪ್ರದೇಶಗಳ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು. ತಮ್ಮ ಸಾಕು ಪ್ರಾಣಿ, ಜಾನುವಾರುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರ ಬಗ್ಗೆ ಕಾಳಜಿ ವಹಿಸಬೇಕು. ಮುಸ್ಸಂಜೆ ಹಾಗೂ ಬೆಳಗಿನ ಜಾವದಲ್ಲಿ ಹೊಲ, ಗದ್ದೆ, ತೋಟಗಳಿಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು.

ತುಮಕೂರಿನಲ್ಲಿ ಮಗುವನ್ನು ಕೊಂದ ಚಿರತೆ, ನರಭಕ್ಷಕನಿಗೆ ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಆದೇಶ

ಅದೇ ರೀತಿ ತುಮಕೂರು ವಿಭಾಗ ವ್ಯಾಪ್ತಿ ಬುಕ್ಕಾಪಟ್ಟಣ ವಲಯದ ಜಾನಕಲ್ ಗಸ್ತಿನ ಜಾನಕಲ್ ಗ್ರಾಮದ ಬಳಿ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದ ಚಿರತೆಯನ್ನೂ ಸಹ ಮಾರ್ಚ್ 17ರಂದು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ