ಆ್ಯಪ್ನಗರ

ಕಟ್ಟಡ ನಿರ್ಮಾಣದಲ್ಲಿ ಭೂಕಂಪನ ನಿರೋಧಕ ತಂತ್ರಜ್ಞಾನ ಬಳಕೆ ಅವಶ್ಯ

ಪ್ರಸ್ತುತ ಕಟ್ಟಡ ನಿರ್ಮಾಣಗಳಲ್ಲಿ ಭೂಕಂಪನ ನಿರೋಧಕ ವ್ಯವಸ್ಥೆ ಇಲ್ಲ್ಲದೆ ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿವೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಯುವಿಸಿಇ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಭೂಕಂಪನ ನಿರೋಧಕ ತಂತ್ರಜ್ಞಾನ ಪರಿಣಿತ ಡಾ.ಎಲ್‌.ಗೋವಿಂದರಾಜು ಹೇಳಿದರು.

Vijaya Karnataka 22 Nov 2018, 5:00 am
ತುಮಕೂರು: ಪ್ರಸ್ತುತ ಕಟ್ಟಡ ನಿರ್ಮಾಣಗಳಲ್ಲಿ ಭೂಕಂಪನ ನಿರೋಧಕ ವ್ಯವಸ್ಥೆ ಇಲ್ಲ್ಲದೆ ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿವೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಯುವಿಸಿಇ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಭೂಕಂಪನ ನಿರೋಧಕ ತಂತ್ರಜ್ಞಾನ ಪರಿಣಿತ ಡಾ.ಎಲ್‌.ಗೋವಿಂದರಾಜು ಹೇಳಿದರು.
Vijaya Karnataka Web use of earthquake resistant technology in building construction is must
ಕಟ್ಟಡ ನಿರ್ಮಾಣದಲ್ಲಿ ಭೂಕಂಪನ ನಿರೋಧಕ ತಂತ್ರಜ್ಞಾನ ಬಳಕೆ ಅವಶ್ಯ


ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭೂಕಂಪನ ಪ್ರಕೋಪ ಮತ್ತು ಪರಿಹಾರಿಕ ತಂತ್ರಜ್ಞಾನ ಕುರಿತ ಪರಿಣಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದೆಲ್ಲೆಡೆ ಭಾರೀ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ, ಜನಸಂಖ್ಯಾ ಸ್ಫೋಟ, ಮೂಲ ಸೌಕರ್ಯಗಳ ವಿಸ್ತರಣೆಯ ಕಾರಣದಿಂದಾಗಿ ಪ್ರಕೃತಿ ಮತ್ತು ಪರಿಸರದ ಮೇಲೆ ಅಗಾಧ ಒತ್ತಡದಿಂದಾಗಿ ಭೂಕಂಪನದ ಸಂಭವಗಳು ಹೆಚ್ಚಾಗುತ್ತಿವೆ. ಈವರೆಗೂ ನಡೆದಿರುವ ಭೂಕಂಪನದ ಅಧ್ಯಯನಗಳಿಂದ ಭೂಕಂಪನಗಳ ಸಂಭವನೀಯತೆ ಮತ್ತು ತಡೆಗಟ್ಟುವಿಕೆ ಸಾಧ್ಯವಿಲ್ಲವೆಂದು ತಿಳಿದು ಬಂದಿದೆ ಎಂದರು.

ಎಲ್ಲಿಯವರೆಗೂ ಭೂಗೋಳದ ಚಲನೆಯಿರುತ್ತದೋ ಅಲ್ಲಿಯವರೆಗೆ ಭೂಶಿಲಾ ಪದರಗಳ ಚಲನೆ ಅನುಷಂಗಿಕವಾಗಿ ನಡೆಯುತ್ತದೆ. ಘರ್ಷಣೆಗಳು ಅಂತರಂಗದಲ್ಲಿ ನಡೆಯುತ್ತಲೇ ಇರುವುದರಿಂದ ಭೂಕಂಪನಗಳನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಆದರೆ ಉತ್ತಮ ಭೂಕಂಪನ ನಿರೋಧಕ ತಂತ್ರಜ್ಞಾನ ವ್ಯವಸ್ಥೆಯಿಂದ ಕಟ್ಟಡ ನಿರ್ಮಾಣ ಮಾಡಿದರೆ ಭೂಕಂಪನದಿಂದಾಗುವ ನಷ್ಟವನ್ನು ತಡೆಯಲು ಸಾಧ್ಯವಿದೆ ಎಂದರು.

ಭಾರತದಲ್ಲಿ ಭೂಕಂಪನ ಅಧ್ಯಯನ ಮತ್ತು ನಿರೋಧಕ ತಂತ್ರಜ್ಞಾನದ ಅಳವಡಿಕೆಯ ಬಗೆಗಿನ ಅರಿವು 2001ರ ಭುಜ್‌ ಭೂಕಂಪÜನದ ನಂತರ ಹೆಚ್ಚಾಗಿ ಎಂಜಿನಿಯರಿಂಗ್‌ ಪಠ್ಯಗಳಲ್ಲಿ ಮತ್ತು ಭಾರತೀಯ ಮಾನಕ ಬ್ಯೂರೋದ ಕೋಡ್‌ ಪುಸ್ತಕಗಳಲ್ಲಿ ಭೂಕಂಪನ ನಿರೋಧಕ ತಂತ್ರಜ್ಞಾನದ ಬಳಕೆ ಮತ್ತು ಅಳವಡಿಕೆ ವಿಧಾನಗಳನ್ನು ಸೇರಿಸಲಾಗಿದೆ. ವಿಶೇಷವಾಗಿ ಭಾರತದ ಉತ್ತರ ಭೂಭಾಗಗಳಾದ ಕಾಶ್ಮೀರ, ಹಿಮಾಲಯದ ತಪ್ಪಲು ಪ್ರದೇಶಗಳು, ಗುಜರಾತ್‌, ಈಶಾನ್ಯ ಭಾರತದ ರಾಜ್ಯಗಳು ಹೆಚ್ಚು ಭೂಕಂಪನಗಳಿಗೆ ಒಳಗಾಗುತ್ತಿದ್ದು, ಈ ಪ್ರದೇಶಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳು, ಹೆದ್ದಾರಿ, ರಸ್ತೆ, ಜಲಾಶಯಗಳು ಮುಂತಾದವುಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.

ಪ್ರಿನ್ಸಿಪಾಲ್‌ ಡಾ.ಟಿ.ಹೇಮಾದ್ರಿ ನಾಯ್ಡು ಮಾತನಾಡಿ, ಭೂಕಂಪನದಿಂದ ಹಾನಿಯುಂಟಾಗುವುದಿಲ್ಲ. ಆದರೆ ಅಸಮರ್ಪಕ ಕಟ್ಟಡ ಮತ್ತು ನಿರ್ಮಾಣಗಳ ಕುಸಿತದಿಂದ ಅಪಾರ ಜೀವಹಾನಿ ಮತ್ತು ಆಸ್ತಿ ಪಾಸ್ತಿಯ ನಷ್ಟ ಉಂಟಾಗುತ್ತದೆ. ಆದ್ದರಿಂದ ಅಮೂಲ್ಯ ಜೀವರಕ್ಷ ಣೆ ಮತ್ತು ಸಂಪನ್ಮೂಲಗಳ ರಕ್ಷ ಣೆ ಸಿವಿಲ್‌ ಎಂಜಿನಿಯರುಗಳ ಆದ್ಯ ಕರ್ತವ್ಯವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಕೋಮಲ್‌ ರಾಣಿ, ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ.ಜಿ.ಮಹೇಶ್‌ ಕುಮಾರ್‌, ಸಂಯೋಜಕ ಪ್ರೊ.ಸಿ.ನಾಗರಾಜ್‌, ಕಾಲೇಜಿನ ಸಂಶೋಧನಾ ಡೀನ್‌ ಡಾ.ಸಿ.ಪಿ ಚಂದ್ರಪ್ಪ, ಸಿವಿಲ್‌ ವಿಭಾಗದ ಬೋಧಕ ಬೋಧಕೇತರ ಸಿಬ್ವಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ