ಆ್ಯಪ್ನಗರ

ತುಮಕೂರು: ಮದುವೆಯಾದ 21ನೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

ಮದುವೆಯಾದ 21 ದಿನಕ್ಕೆ ತವರು ಮನೆಗೆ ಆಗಮಿಸಿದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಳವನಹಳ್ಳಿ ಹೋಬಳಿ ದುಗ್ಗೇನಹಳ್ಳಿಯಲ್ಲಿ ನಡೆದಿದೆ.

Vijaya Karnataka Web 23 Jun 2020, 10:51 am
ಕೊರಟಗೆರೆ: ಮದುವೆಯಾಗಿ ಕೇವಲ 21 ದಿನಕ್ಕೆ ಆಷಾಢ ಮಾಸದ ಪ್ರಯುಕ್ತ ತವರು ಮನೆಗೆ ಆಗಮಿಸಿದ್ದ ಪೂಜಾ, ತಂದೆ ಮನೆಯಲ್ಲಿನ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ತಾಲೂಕಿನ ಹೊಳವನಹಳ್ಳಿ ಹೋಬಳಿ ದುಗ್ಗೇನಹಳ್ಳಿಯ ವೀರೇಗೌಡ ಅವರ ಪುತ್ರಿ ಪೂಜಾ(19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮದುವೆಯಾದ ನಂತರ ಮೊದಲ ಸಲ ತವರು ಮನೆಗೆ ಆಗಮಿಸಿದ್ದ ಪೂಜಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೋಳಾಲ ಹೋಬಳಿ ವ್ಯಾಪ್ತಿಯ ಲಕ್ಕಮುತ್ತನಹಳ್ಳಿಯ ಹನುಮಂತರಾಯಪ್ಪನ ಮಗ ಪ್ರದೀಪ್‌ ಜತೆ ಕಳೆದ 21 ದಿನದ ಹಿಂದಷ್ಟೆ ಮದುವೆಯಾಗಿತ್ತು.

ಸ್ಥಳಕ್ಕೆ ತಹಸೀಲ್ದಾರ್‌ ಗೋವಿಂದರಾಜು, ಸಿಪಿಐ ನದಾಫ್‌, ಪಿಎಸೈ ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ