ಆ್ಯಪ್ನಗರ

ಕಾಡುಕೋಣಕ್ಕೆ ಸಾಕು ಕುದುರೆ ಬಲಿ ; ಮಾಲೀಕನ ನೋವು

ಕುಂದಾಪುರ ತಾಲೂಕಿನ ಸಿದ್ದಾಪುರದ ಅಂಪಾರು ಗ್ರಾಪಂ ವ್ಯಾಪ್ತಿಯ ಪ್ರಾಣಿ ಪ್ರಿಯ ಶಂಕರ್ ಎಂಬವರ ರಾಜಾ ಎಂಬ ಹೆಸರಿನ ಗಂಡು ಕುದುರೆಯು ಕಾಡುಕೋಣಗಳ ದಾಳಿಯಿಂದ ಮೃತಪಟ್ಟಿದ್ದು , ಶಂಕರ್ ಅವರ ಕುಟುಂಬ ದುಃಖದ ಮಡುವಿನಲ್ಲಿದೆ.

ವಿಕ ಸುದ್ದಿಲೋಕ 23 Mar 2016, 3:30 pm
ಸಿದ್ದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರದ ಅಂಪಾರು ಗ್ರಾಪಂ ವ್ಯಾಪ್ತಿಯ ಪ್ರಾಣಿ ಪ್ರಿಯ ಶಂಕರ್ ಎಂಬವರ ರಾಜಾ ಎಂಬ ಹೆಸರಿನ ಗಂಡು ಕುದುರೆಯು ಕಾಡುಕೋಣಗಳ ದಾಳಿಯಿಂದ ಮೃತಪಟ್ಟಿದ್ದು , ಶಂಕರ್ ಅವರ ಕುಟುಂಬ ದುಃಖದ ಮಡುವಿನಲ್ಲಿದೆ.
Vijaya Karnataka Web
ಕಾಡುಕೋಣಕ್ಕೆ ಸಾಕು ಕುದುರೆ ಬಲಿ ; ಮಾಲೀಕನ ನೋವು


ಎಂದಿನಂತೆ ಶುಕ್ರವಾರವೂ ಮನೆಯ ವಠಾರಿಂದ ಕಾಡಿಗೆ ಮೇವು ಅರಸಿ ಹೊರಟ ರಾಜಾ ಮರುದಿನ ಪತ್ತೆಯಾಗಿದ್ದು ಶವವಾಗಿ.

ಕೆಲವು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಕಾಡುಕೋಣಗಳು ಏಕಾಏಕಿಯಾಗಿ ಕುದುರೆಗೆ ತಿವಿದ ಸಮಯದಲ್ಲಿ ದೇಹದ ಭಾಗಕ್ಕೆ ಬಲವಾದ ಏಟು ಬಿದ್ದ ಕಾರಣ ನಂತರ ಅದೇ ಸ್ಥಳದಲ್ಲಿ ರಾಜಾ ಮತಪಟ್ಟಿದೆ.

ವತ್ತಿಯಲ್ಲಿ ಅಟೊ ಚಾಲಕರಾಗಿರುವ ಶಂಕರ್‌ಗೆ ಸಣ್ಣ ವಯಸ್ಸಿನಲ್ಲಿಯೇ ಪ್ರಾಣಿ ಪಕ್ಷಿಗಳೆಂದರೆ ಪ್ರೀತಿ. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಹಲವಾರು ಸಾಕು ಪ್ರಾಣಿಗಳು ಪೋಷಿಸುವುದರಲ್ಲಿ ಹವ್ಯಾಸವನ್ನು ಬೆಳೆಸಿಕೊಂಡವರು. ಅಂಪಾರಿನ ಸುತ್ತ ಮುತ್ತಲಿನ ಪರಿಸರದಲ್ಲಿ ರಾಜ ಎಂಬ ಹೆಸರಿನ ಗಂಡು ಕುದುರೆ ಎಲ್ಲರಿಗೂ ಚಿರಪರಿಚಿತವಾಗಿತ್ತು.

ಕೋಲಾರದಿಂದ ಕುದುರೆ ತಂದಿದ್ದರು !: ಶಂಕರ್ ಅವರು 3 ವರ್ಷದ ಹಿಂದೆ ಕೋಲಾರದಿಂದ 50 ಸಾವಿರ ರೂ. ಮೊತ್ತಕ್ಕೆ ಕುದುರೆ ಖರೀದಿಸಿ ತಂದಿದ್ದು , ದಿನಂಪ್ರತಿ 200ರಿಂದ 250 ರೂ ವರೆಗೆ ತಿನ್ನುವ ಆಹಾರಕ್ಕೆ ಖರ್ಚು ಮಾಡುತ್ತಿದ್ದರು. ದಿನಗಳು ಕಳೆದಂತೆ ಕುದುರೆಗೆ ತುಂಬಾ ಬೇಡಿಕೆ ಇದ್ದರೂ ಕುದುರೆಯನ್ನು ಕೊಡಲೊಪ್ಪಲಿಲ್ಲ. ಕಾರಣ ಶಂಕರರಿಗೆ ಕುದುರೆ ಮೇಲಿರುವ ಅಪಾರವಾದ ಪ್ರೀತಿ.

ಕುದುರೆ ಮತಪಟ್ಟ ಸುದ್ದಿ ತಿಳಿದಾಕ್ಷಣ ಗ್ರಾಮದ ನೂರಾರು ಮಂದಿ ಆಗಮಿಸಿದ್ದರು. ಅಂಪಾರಿನ ರಾಜ (ಕುದುರೆ) ಇನ್ನಿಲ್ಲ್ಲ ಎಂದು ಕಂಬನಿ ಇಟ್ಟರು. ಬಳಿಕ ಅದನ್ನು ಊರವರೆಲ್ಲ ಸೇರಿ ದಫನ ಮಾಡಲಾಯಿತು ಎಂದು ಶಂಕರ್ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಸಣ್ಣ ವಯಸ್ಸಿನಲ್ಲೆ ಸಾಕು ಪ್ರಾಣಿಗಳ ಪೋಷಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೆ. ಉಳಿದ ಪ್ರಾಣಿಗಳ ಜೊತೆ ಕುದುರೆಯನ್ನೂ ಸಾಕುತ್ತಿದ್ದೆ ,ಖರ್ಚು ವೆಚ್ಚಗಳ ವಿಚಾರಗಿಂತ ಯಾವುದೆ ಪ್ರಾಣಿಯಾಗಿರಲಿ. ನಾವು ಪ್ರೀತಿಸಿದರೆ ಮಾತ್ರ ಅವು ನಮ್ಮನ್ನು ಪ್ರೀತಿಸುತ್ತವೆ -.ಶಂಕರ್ ಅಂಪಾರು ಅಟೋ ಚಾಲಕ ಹಾಗೂ ಪ್ರಾಣಿ ಪ್ರಿಯ.

ಸಾಕುಪ್ರಾಣಿಗಳಿಗೆ ವನ್ಯಪ್ರಾಣಿಗಳ ದಾಳಿಯಿಂದ ಹಾನಿ ಅಥವಾ ಸಾವು ಸಂಭವಿಸಿದರೆ ಸರಕಾರದಿಂದ ಪರಿಹಾರ ನೀಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕುದುರೆ ಮಾಲೀಕರು ನಮ್ಮ ಇಲಾಖೆಯ ಗಮನಕ್ಕೆ ತಂದಿಲ್ಲ . ಕುದುರೆಯ ಮೃತದೇಹದ ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ಪರಿಹಾರ ಸಾಧ್ಯವಿಲ್ಲ . -ಬ್ರಿಜೇಶ್ ವಿನಯಕುಮಾರ್, ವಲಯ ಅರಣ್ಯಾಧಿಕಾರಿ ಶಂಕರನಾರಾಯಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ