ಆ್ಯಪ್ನಗರ

ಉಡುಪಿ: ಜು.2ರಂದು ಜಿಲ್ಲೆಯಲ್ಲಿ ಬರೋಬ್ಬರಿ 14 ಮಂದಿಗೆ ಕೊರೊನಾ ದೃಢ!

ಜು. 2ರಂದು ಗುರುವಾರ 14 ಹೊಸ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟು 1,242 ಕೊರೊನಾ ಪ್ರಕರಣ ದೃಢಪಟ್ಟಂತೆ ಆಗಿದೆ. ಇನ್ನು ಈವರೆಗೆ ಆಸ್ಪತ್ರೆಯಿಂದ ಒಟ್ಟು 1,090 ಮಂದಿ ಗುಣಮುಖರಾಗಿ ಬಿಡುಗಡೆಗೊಂಡು ಮನೆ ಸೇರಿದ್ದಾರೆ.

Vijaya Karnataka Web 2 Jul 2020, 7:39 pm
ಉಡುಪಿ: ಲಾಕ್‌ಡೌನ್‌ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜು. 2ರಂದು ಗುರುವಾರ 14 ಹೊಸ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟು 1,242 ಕೊರೊನಾ ಪ್ರಕರಣ ದೃಢಪಟ್ಟಂತೆ ಆಗಿದೆ. ಇನ್ನು ಈವರೆಗೆ ಆಸ್ಪತ್ರೆಯಿಂದ ಒಟ್ಟು 1,090 ಮಂದಿ ಗುಣಮುಖರಾಗಿ ಬಿಡುಗಡೆಗೊಂಡು ಮನೆ ಸೇರಿದ್ದಾರೆ.
Vijaya Karnataka Web 18


ಈವರೆಗೆ ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಒಟ್ಟು ಮೂರು ಸಾವು ಸಂಭವಿಸಿದೆ. ಕೊರೊನಾ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ, ಈವರೆಗೆ ಒಟ್ಟು 15,630 ಮಂದಿಯ ಗಂಟಲು ಸ್ರಾವದ ಮಾದರಿ ಕಲೆಕ್ಟ್ ಮಾಡಿದೆ. ಈ ಪೈಕಿ 13,450 ಮಂದಿಯ ವರದಿ ನೆಗೆಟಿವ್‌ ಎಂದು ಬಂದಿದೆ. ಇನ್ನು 938 ಮಂದಿಯ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ನಿರಂತರ ಶ್ರಮಿಸುತ್ತಿದೆ. ಈ ಸಂಬಂಧ ಯಶಸ್ವಿಯು ಆಗಿದೆ.ಯಾಕೆಂದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿರುವ ಸಂಖ್ಯೆಯು ಉತ್ತಮ ಸ್ಥಿತಿಯಲ್ಲಿದೆ. ಅಲ್ಲದೇ ಸಾವಿನ ಸಂಖ್ಯೆಯೂ ಏನು ಹೆಚ್ಚಿಲ್ಲ. ಜಿಲ್ಲಾಡಳಿತ ವೈದ್ಯಕೀಯ ಪರಿಣಿತರೊಂದಿಗೆ ಮಾತುಕತೆ ನಡೆಸಿಕೊಂಡು ಹೆಜ್ಜೆಯನ್ನ ಇಡುತ್ತಿದ್ದು, ಇದರಲ್ಲಿ ಯಶಸ್ವಿಯಾಗಿದೆ.

ಚಿಕ್ಕಮಗಳೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ: ಸಚಿವ ಶೆಟ್ಟರ್ ಭರವಸೆ

ಬೀಜಾಡಿ 3 ಮನೆ ಸೀಲ್‌ ಡೌನ್!
ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ನೇ ವಾರ್ಡಿನ ದೇವಾಡಿಗರ ಬೆಟ್ಟು ಪರಿಸರದಲ್ಲಿ ಕುವೈಟ್‌ನಿಂದ ಆಗಮಿಸಿದ 40 ವರ್ಷ ಪ್ರಾಯದ ವ್ಯಕ್ತಿಗೆ ಕೊರೊನಾ ಪಾಸಿಟಿವ್‌ ವರದಿ ಬಂದ ಬಳಿಕ ಪರಿಸರದ 2 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಈ ವ್ಯಕ್ತಿ ಕುವೈಟ್‌ನಿಂದ ಆಗಮಿಸಿ 14 ದಿನಗಳ ಕ್ವಾರೆಂಟೈನ್‌ ಕೊಚ್ಚಿಯಲ್ಲಿ ಮುಗಿಸಿಕೊಂಡು ಹುಟ್ಟೂರಿಗೆ ಆಗಮಿಸಿದ 4 ದಿನಗಳ ಬಳಿಕ ವರದಿ ಕೈ ಸೇರಿದೆ.

7 ವರ್ಷದ ಬಾಲಕಿಗೆ ಪಾಸಿಟಿವ್‌!
ಬೀಜಾಡಿ ಗ್ರಾಮದ 3ನೇ ವಾರ್ಡಿನ ಬ್ಯಾಲಿ ಹಿತ್ಲು ಪರಿಸರದಲ್ಲಿ 7 ವರ್ಷದ ಬಾಲಕಿಗೆ ಪಾಸಿಟಿವ್‌ ವರದಿ ಬಂದ ಬಳಿಕ ಈ ಪರಿಸರದಲ್ಲಿ ಯಾವುದೇ ವಸತಿಗಳು ಇಲ್ಲದ ಕಾರಣದಿಂದಾಗಿ ಒಂದು ಮನೆ ಮಾತ್ರ ಸೀಲ್‌ ಡೌನ್‌ ಮಾಡಲಾಗಿದೆ. ಈ ಬಾಲಕಿ ತನ್ನ ಅಜ್ಜಿ, ತಾಯಿ, ಸಹೋದರಿಯೊಂದಿಗೆ ಮುಂಬೈಯಿಂದ ಆಗಮಿಸಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದು, ಇದೀಗ ಬಾಲಕಿ ಪಾಸಿಟಿವ್‌ ವರದಿ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ