ಆ್ಯಪ್ನಗರ

ರಾಜ್ಯದಲ್ಲಿ 18ರಲ್ಲಿ 14 ವರ್ಷ ಬರಗಾಲ: ದೇಶಪಾಂಡೆ

ಕಳೆದ 18 ವರ್ಷಗಳಲ್ಲಿ ರಾಜ್ಯವು 14 ವರ್ಷಗಳ ಕಾಲ ಬರಗಾಲ ಕಂಡಿದ್ದು ಕರಾವಳಿಯಲ್ಲೂ ಈ ಬಾರಿ 'ಮೇಘರಾಜ' ಆಶೀರ್ವಾದ ಮಾಡಿಲ್ಲ ಎಂದು ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಹೇಳಿದ್ದಾರೆ.

Vijaya Karnataka 19 Jun 2019, 5:00 am
ಉಡುಪಿ: ಕಳೆದ 18 ವರ್ಷಗಳಲ್ಲಿ ರಾಜ್ಯವು 14 ವರ್ಷಗಳ ಕಾಲ ಬರಗಾಲ ಕಂಡಿದ್ದು ಕರಾವಳಿಯಲ್ಲೂ ಈ ಬಾರಿ 'ಮೇಘರಾಜ' ಆಶೀರ್ವಾದ ಮಾಡಿಲ್ಲ ಎಂದು ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಹೇಳಿದ್ದಾರೆ.
Vijaya Karnataka Web 14 year drought in 18 states deshpande
ರಾಜ್ಯದಲ್ಲಿ 18ರಲ್ಲಿ 14 ವರ್ಷ ಬರಗಾಲ: ದೇಶಪಾಂಡೆ


ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಕುಡಿಯಲು ಟ್ಯಾಂಕರ್‌ ನೀರು, ಜಾನುವಾರುಗಳಿಗೆ ನೀರು ಮತ್ತು ಮೇವು ಹಾಗೂ ಜನರು ಗುಳೆ ಹೋಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿ. ಪಂ. ಸಿಇಒಗಳಿಗೆ ನಾಲ್ಕೈದು ಪತ್ರ ಬರೆದಿದ್ದೇನೆ ಎಂದು ನುಡಿದರು.

ಉಡುಪಿ ಜಿಲ್ಲಾಡಳಿತಕ್ಕೆ ಬರ ಪರಿಹಾರ, ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ 24 ಕೋಟಿ ರೂ. ಬಿಡುಗಡೆ ಮಾಡಿದ್ದು ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಟ್ಯಾಂಕರ್‌ ನೀರು ಪೂರೈಸಬಹುದಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ತೀರ್ಮಾನ ಕೈಗೊಳ್ಳಬೇಕಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರಕಾರ ಬೇಕಿದ್ದಷ್ಟು ಅನುದಾನ ನೀಡಿದೆ, ನೀಡಲು ಸಿದ್ಧವಿದೆ. ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಸ ಮಾಡಬೇಕು, ಜನಸಂಪರ್ಕ ಹೊಂದಬೇಕು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬರಕ್ಕೆ ಜಾತಿ, ಪಕ್ಷವಿಲ್ಲ ಎಂದರು.

ಮಾಜಿ ಸಿಎಂ ಸಿದ್ದು ದಿಲ್ಲಿಗೆ ತೆರಳಿದ ಕುರಿತ ಪ್ರಶ್ನೆಗೆ ಹೋಗೋದು ಬರೋದು ನಡೀತಿರ್ತದೆ. ಅದಕ್ಕೆ ನೀವ್ಯಾಕೆ ತಲೆ ಕೆಡಿಸ್ಕೋತೀರಿ. ಎಚ್‌. ಡಿ. ಕುಮಾರಸ್ವಾಮಿ ಸರಕಾರಕ್ಕೆ ನೀವೆಲ್ಲಾ ಸಹಕರಿಸಬೇಕು ಎಂದು ದೇಶಪಾಂಡೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ