ಆ್ಯಪ್ನಗರ

14ರಿಂದ 16: ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವ

ಭಂಡಾರಕೇರಿ, ಪಲಿಮಾರು ಉಭಯ ಮಠಾಧೀಶರಾಗಿದ್ದ ಕೀರ್ತಿಶೇಷ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವ ಮೇ 14, 15, 16ರಂದು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.

Vijaya Karnataka 14 May 2019, 5:00 am
ಉಡುಪಿ: ಭಂಡಾರಕೇರಿ, ಪಲಿಮಾರು ಉಭಯ ಮಠಾಧೀಶರಾಗಿದ್ದ ಕೀರ್ತಿಶೇಷ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವ ಮೇ 14, 15, 16ರಂದು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.
Vijaya Karnataka Web 14th to 16th srividya vidyartha adharana festival
14ರಿಂದ 16: ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವ


ಪೂರ್ವಾರಾಧನೆ ಅಂಗವಾಗಿ ಮೇ 14ರಂದು ಬೆಳಗ್ಗೆ 10ರಿಂದ 11.30ರ ತನಕ ವಿದ್ವಾನ್‌ ಉಮರ್ಜಿ ಶ್ರೀನಿವಾಸಾಚಾರ್ಯ ಬೆಂಗಳೂರು, ಧನಂಜಯಾಚಾರ್ಯ ಹೈದರಾಬಾದ್‌, ಶ್ರೀಪಾದಾಚಾರ್ಯ ಕಳಲೆ ಬೆಂಗಳೂರು, ರಾಮಚಂದ್ರಾಚಾರ್ಯ ಉಜಿರೆ ಶಾಸ್ತ್ರ ಚಿಂತನೆ ಮಾಡಲಿದ್ದಾರೆ.

ಮಧ್ಯಾಹ್ನ 2ರಿಂದ 4ರ ತನಕ ವಿದ್ವಾನ್‌ ಹನುಮೇಶಾಚಾರ್ಯ ಮಂತ್ರಾಲಯ, ಬದರೀ ಆಚಾರ್ಯ ಕಡ್ಡಿ ಬೆಂಗಳೂರು, ಸಿ.ಆರ್‌.ಆನಂದತೀರ್ಥಾಚಾರ್ಯ ಬೆಂಗಳೂರು, ಕನಕಾಚಾರ್ಯ ರಾಮನಾಥಪುರ ಶಾಸ್ತ್ರ ಚಿಂತನೆ ಮಾಡುವರು.

ಮಧ್ಯಾರಾಧನೆ ಅಂಗವಾಗಿ ಮೇ 15ರಂದು ಬೆಳಗ್ಗೆ 10ರಿಂದ ಸಂಜೆ 5 ರ ತನಕ ಸರಸಭಾರತೀ ವಿಲಾಸದಂಗವಾಗಿ ವಿದ್ವಾನ್‌ ಆನಂದಾಚಾರ್ಯ ಚೆನ್ನೈ, ಗುರುರಾಜಾಚಾರ್ಯ ಕಲ್ಕೂರ್‌, ಪಿ.ಪಿ. ಶ್ರೀಧರ ಉಪಾಧ್ಯಾಯ ಚೆನ್ನೈ, ನಾಗೇಂದ್ರಾಚಾರ್ಯ ಹೈದರಾಬಾದ್‌, ನರಸಿಂಹಾಚಾರ್ಯ ಕೊರ್ಲಹಳ್ಳಿ, ಶ್ರೀಕಾಂತಾಚಾರ್ಯ ಕಳಶಾಪುರ, ಸಗ್ರಿ ರಾಘವೇಂದ್ರ ಉಪಾಧ್ಯಾಯ, ಪಿ. ಸತ್ಯನಾರಾಯಣಾಚಾರ್ಯ ಬೆಂಗಳೂರು, ಬಿ.ಎನ್‌. ವಿಜಯೀಂದ್ರಾಚಾರ್ಯ ಮೈಸೂರು, ರಾಮ ವಿಠ್ಠಲಾಚಾರ್ಯ ಬೆಂಗಳೂರು, ನಾರಾಯಣಾಚಾರ್ಯ ತಿರುಪತಿ, ಹಯವದನ್‌ ಪುರಾಣಿಕ್‌ ಬೆಂಗಳೂರು ಉಪನ್ಯಾಸ ನೀಡುವರು.

ಉತ್ತರಾರಾಧನೆ ಅಂಗವಾಗಿ ಮೇ 16ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ತನಕ ವೇದವ್ಯಾಸ ತಂತ್ರಿ ಶಿಬರೂರು, ಬಲರಾಮ ಭಟ್‌ ಉಡುಪಿ, ಗಣಪತಿ ಆಚಾರ್ಯ ಪೀಣ್ಯ, ಜಯತೀರ್ಥಾಚಾರ್ಯ ರಾಯಚೂರು, ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ, ಪ್ರಶಾಂತ ಭಾರ್ಗವಾಚಾರ್ಯ ಶಾಸ್ತ್ರಚಿಂತನೆ ಮಾಡುವರು.

ಮಧ್ಯಾಹ್ನ 2ರಿಂದ ಸಂಜೆ 4 ರ ತನಕ ವಿದ್ವಾನ್‌ ಜಿ.ವಿ. ರಾಘವೇಂದ್ರ ಆಚಾರ್ಯ ಉಡುಪಿ, ರಾಘವೇಂದ್ರ ದೇಶಪಾಂಡೆ ಬೆಂಗಳೂರು, ಕೃಷ್ಣಾಚಾರ್ಯ ಬೆಂಗಳೂರು, ಪದ್ಮನಾಭ ವರಖೇಡಿ ಮೈಸೂರು, ವಿಜಯಾಚಾರ್ಯ ಮುಕ್ಕುಂದಿ, ರಾಘವೇಂದ್ರ ಪ್ರಭು ಬೆಂಗಳೂರು ಶಾಸ್ತ್ರಚಿಂತನೆ ಮಾಡಲಿದ್ದಾರೆ. ಆರಾಧನೆಯ ಮೂರೂ ದಿನಗಳಲ್ಲಿ ವಿದ್ವಾಂಸರಿಂದ ಸರ್ವಮೂಲಗ್ರಂಥ ಪಾರಾಯಣ ನೆರವೇರಲಿದೆ ಎಂದು ಶ್ರೀಕೃಷ್ಣ ಮಠದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ