ಆ್ಯಪ್ನಗರ

ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಿ‌ ದುರಂತ; ನಾಲ್ವರು ಪ್ರಾಣಾಪಯಾದಿಂದ ಪಾರು

ಮೀನುಗಾರರು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾಗ ಪಕ್ಕದಲ್ಲೇ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರ ತಂಡವೊಂದು ನಾಲ್ವರನ್ನೂ ರಕ್ಷಿಸಿದೆ. ಬೋಟ್‌ ನೀರಿನಲ್ಲಿ ಮುಳುಗಿದೆ. ಎಂಜಿನ್‌, ಬಲೆ ಸೇರಿದಂತೆ ಸುಮಾರು 5 ಲಕ್ಷ ರೂ. ಮೌಲ್ಯದ ಸೊತ್ತು ನೀರುಪಾಲಾಗಿದೆ.

Vijaya Karnataka Web 29 Jan 2021, 7:16 am
ಮರವಂತೆ: ಮೀನುಗಾರಿಕೆಗೆ ತೆರಳಿದ ಬೋಟೊಂದು ಮಗುಚಿ ಬಿದ್ದು, ಗುರುರಾಜ್‌ ಖಾರ್ವಿ, ಮಿಥುನ್‌ ಖಾರ್ವಿ, ಚಂದ್ರ ಖಾರ್ವಿ, ರೋಶನ್‌ ಖಾರ್ವಿ ಪವಾಡಸದೃಶವಾಗಿ ಪಾರಾದ ಘಟನೆ ಗುರುವಾರ ಬೆಳಗ್ಗೆ ಗಂಗೊಳ್ಳಿಯಲ್ಲಿ ನಡೆದಿದೆ.
Vijaya Karnataka Web fibre_boat


ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುರುರಾಜ್‌ ಖಾರ್ವಿ ಮಾಲೀಕತ್ವದ ಸೌಮ್ಯ ಹೆಸರಿನ ಬೋಟ್‌ನಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮಾಡುತ್ತಿದ್ದಾಗ 7.30ರ ಸುಮಾರಿಗೆ ಲಾಂಬಾರು ಮತ್ತು ಗಾಳಿಯ ರಭಸಕ್ಕೆ ದೋಣಿ ಮಗುಚುತ್ತಿರುವುದನ್ನು ಅರಿತ ಗುರುರಾಜ್‌ ಖಾರ್ವಿ ಮತ್ತು ಮಿಥುನ್‌ ಖಾರ್ವಿ ನೀರಿಗೆ ಹಾರಿ ಈಜಿ ಪ್ರಾಣ ರಕ್ಷಿಸಿಕೊಂಡರು.
‘ನಾನು ಕೂಲಿ ಕಾರ್ಮಿಕನಾಗಿದ್ದವನು, ಕಾರ್ಮಿಕರ ಪಾಡು ಹತ್ತಿರದಿಂದ ಕಂಡಿದ್ದೇನೆ’; ಸಚಿವ ಎಸ್‌ ಅಂಗಾರ
ಈಜು ತಿಳಿಯದ ಚಂದ್ರ ಖಾರ್ವಿ, ರೋಶನ್‌ ಖಾರ್ವಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾಗ ಪಕ್ಕದಲ್ಲೇ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರ ತಂಡವೊಂದು ನಾಲ್ವರನ್ನೂ ರಕ್ಷಿಸಿದೆ. ಬೋಟ್‌ ನೀರಿನಲ್ಲಿ ಮುಳುಗಿದೆ. ಎಂಜಿನ್‌, ಬಲೆ ಸೇರಿದಂತೆ ಸುಮಾರು 5 ಲಕ್ಷ ರೂ. ಮೌಲ್ಯದ ಸೊತ್ತು ನೀರುಪಾಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ