ಆ್ಯಪ್ನಗರ

ದೇಶದೆಲ್ಲೆಡೆ ಅನ್‌ಲಾಕ್‌ ಬಳಿಕ ಶ್ರೀ ಕೃಷ್ಣ ದರ್ಶನಕ್ಕೆ ಅವಕಾಶ: ಪರ್ಯಾಯ ಶ್ರೀ

ಉಡುಪಿ ಶ್ರೀಕೃಷ್ಣ ಮಠದ ಪರಂಪರೆ ಉಳಿಸುವುದು ನಮ್ಮ ಗುರಿಯಾಗಿದ್ದು ಭಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಸಲ್ಲಿಸಿದರೆ ಋುತ್ವಿಜರು ಶ್ರೀಕೃಷ್ಣ ಮಠದಲ್ಲಿದೇಶ, ಜನತೆಯ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

Vijaya Karnataka Web 3 Jul 2020, 1:54 pm
ಉಡುಪಿ: ದೇಶದ ಪರಿಸ್ಥಿತಿ ನೋಡಿ, ಎಲ್ಲೆಡೆ ಅನ್‌ಲಾಕ್‌ ಆದ ಬಳಿಕವಷ್ಟೇ ಸಾರ್ವಜನಿಕರಿಗೆ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka Web ಉಡುಪಿ ದೇಗುಲ
ಉಡುಪಿ ದೇಗುಲ


ಉಡುಪಿ ಶ್ರೀಕೃಷ್ಣ ಮಠದ ಪರಂಪರೆ ಉಳಿಸುವುದು ನಮ್ಮ ಗುರಿಯಾಗಿದ್ದು ಭಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಸಲ್ಲಿಸಿದರೆ ಋುತ್ವಿಜರು ಶ್ರೀಕೃಷ್ಣ ಮಠದಲ್ಲಿದೇಶ, ಜನತೆಯ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆಯುರ್ವೇದದ ಪ್ರಕಾರ ರಾಗ, ಮೋಹ ಸಹಿತ ಮನಸ್ಸಿನ ದೋಷಗಳೇ ರೋಗಕ್ಕೆ ಕಾರಣವಾಗಿದ್ದು ಗಟ್ಟಿ ಮನಸ್ಸಿನಿಂದ ಎಂತಹ ರೋಗವನ್ನಾದರೂ ಗೆಲ್ಲಬಹುದು, ಹೀಗಾಗಿ ಉತ್ತಮ ಚಿಂತನೆ ಮುಖ್ಯ ಎಂದು ಸಂದೇಶ ನೀಡಿದ್ದಾರೆ..

ಮನಸ್ಸು ಚೆನ್ನಾಗಿದ್ದರೆ ರೋಗನಿರೋಧಕ ಶಕ್ತಿ ವೃದ್ಧಿ ಸಾಧ್ಯ. ಆಯುರ್ವೇದ ಸಹಿತ ಭಾರತೀಯ ಚಿಕಿತ್ಸಾ ಪದ್ಧತಿ ಫಲಕಾರಿಯಾಗಿದ್ದು ಇದನ್ನು ಉಳಿಸಿ, ಬೆಳೆಸಲು ಚಿಂತನೆ ಮಾಡೋಣ ಎಂದು ಶ್ರೀಪಾದರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ