ಆ್ಯಪ್ನಗರ

ಆ್ಯಂಬುಲೆನ್ಸ್‌ ಚಾಲಕ, ಸ್ಟಾಫ್‌ ನರ್ಸ್‌ನ‌ ಸಮಯಪ್ರಜ್ಞೆಯಿಂದ ಉಳಿಯಿತು ಬಾವಿಗೆ ಬಿದ್ದವನ ಪ್ರಾಣ!

ಬಾವಿಯೊಳಗೆ ಆಮ್ಲಜನಕದ ಕೊರತೆಯಿಂದ ಒದ್ದಾಡುತ್ತಿರುವಾಗ ತಕ್ಷಣ ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್‌ ಚಾಲಕ ಮತ್ತು ಸ್ಟಾಫ್‌ ನರ್ಸ್ ಅವರನ್ನ ರಕ್ಷಿಸುವ ಮೂಲಕ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದಾರೆ.

Vijaya Karnataka Web 30 May 2020, 10:44 am
ಉಡುಪಿ: ಆಯ ತಪ್ಪಿ ಬಾವಿಗೆ ಬಿದ್ದ ಸಹೋದರನನ್ನು ರಕ್ಷಿಸಲು ಹೋದ ವ್ಯಕ್ತಿ ಕೂಡ ಬಾವಿಯೊಳಗೆ ಆಮ್ಲಜನಕದ ಕೊರತೆಯಿಂದ ಒದ್ದಾಡುತ್ತಿರುವಾಗ ತಕ್ಷಣ ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್‌ ಚಾಲಕ ಮತ್ತು ಸ್ಟಾಫ್‌ ನರ್ಸ್ ಅವರನ್ನರಕ್ಷಿಸಿದ್ದಾರೆ. ಇವರಿಬ್ಬರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Vijaya Karnataka Web 61973277


ಉಡುಪಿಯ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ಬುಧವಾರ ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ವೇಳೆ ಆಯ ತಪ್ಪಿ ಸಹೋದರ ಬಾವಿಗೆ ಬಿದ್ದಿದ್ದಾನೆ. ಸಹೋದರ ವಾಲ್ಟರ್‌ ಡಿ ಅಲ್ಮೇಡ ಅವರನ್ನು ರಕ್ಷಿಸಲು ಮತ್ತೊಬ್ಬ ಸಹೋದರ ಅಲ್ಭನ್‌ ಬಾವಿಗೆ ಹಾರಿದ್ದಾನೆ. ಆದ್ರೆ ಬಾವಿಯೊಳಗೆ ಆಮ್ಲಜನಕದ ಕೊರತೆಯಿಂದ ಒದ್ದಾಡಿ ವಾಲ್ಟರ್‌ ಡಿ ಅಲ್ಮೇಡ ಮೃತಪಟ್ಟಿದ್ದರು. ಆದ್ರೆ ಅಲ್ಬನ್‌ ಕೂಡ ಬಾವಿಯೊಳಗೆ ಒದ್ದಾಡುತ್ತಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಿರಿಮಂಜೇಶ್ವರದ 108 ಪೈಲಟ್‌ ಆ್ಯಂಬುಲೆನ್ಸ್‌ ಚಾಲಕ ಶ್ರೀಧರ್ ತಕ್ಷಣ ಬಾವಿಗೆ ಹಾರಿದ್ದಾನೆ. ಇದಕ್ಕೆಸ್ಟಾಫ್‌ ನರ್ಸ್‌ ಸಹನಾ ಕೂಡ ಸಹಕರಿಸಿದ್ದು, ಇವರಿಬ್ಬ ಸಮಯ ಪ್ರಜ್ಞೆಯಿಂದಾಗಿ ಬಾವಿಯಲ್ಲಿಒದ್ದಾಡುತ್ತಿದ್ದ ಅಲ್ಭನ್‌ ಅಲ್ಮೇಡ ಅವರನ್ನು ಬದುಕಿಸಲು ಸಾಧ್ಯವಾಗಿದೆಡ. ಇನ್ನು ಇವರಿಬ್ಬರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಇಲ್ಲ ಲಾಕ್‌ಡೌನ್‌, ಎಂದಿನಂತಿರಲಿದೆ ದೈನಂದಿನ ಚಟುವಟಿಕೆ!


ಆ್ಯಂಬುಲೆನ್ಸ್‌ ಚಾಲಕರು ಈ ರೀತಿಯ ಸಾಹಸ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವೊಂದನ್ನ ಕೇವಲ ನಾಲ್ಕು ಗಂಟೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂತಹ ಅನೇಕ ನಿದರ್ಶನಗಳನ್ನ ನಾವು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ