ಆ್ಯಪ್ನಗರ

ಮಣಿಪಾಲ ಆಸ್ಪತ್ರೆಗೆ ಶಿವಸುಜ್ಞಾನತೀರ್ಥ ಶ್ರೀಪಾದರ ಭೇಟಿ : ಪೇಜಾವರ ಶ್ರೀ ಆರೋಗ್ಯ ವಿಚಾರಣೆ

ಹಾಸನದ ಅರೆಮಾದನಹಳ್ಳಿ ಮಠ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಶನಿವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿ, ಪೇಜಾವರಶ್ರೀಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದರು.

Vijaya Karnataka Web 28 Dec 2019, 1:56 pm
ಉಡುಪಿ: ಹಾಸನದ ಅರೆಮಾದನಹಳ್ಳಿ ಮಠ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಶನಿವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿದರು. ಪೇಜಾವರಶ್ರೀಗಳ ಶೀಘ್ರ ಚೇತರಿಕೆಗೆ ಹಾರೈಸಿ, ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಜತೆ ಚರ್ಚಿಸಿ, ಯೋಗ ಕ್ಷೇಮ ವಿಚಾರಿಸಿ, ಭಗವಂತನ ಅನುಗ್ರಹಕ್ಕಾಗಿ ಪ್ರಾರ್ಥಿಸಿದರು.
Vijaya Karnataka Web aremadanahalli swamiji


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ವಿಶ್ವಕರ್ಮ ಯುವ ಸಂಘಟನೆ ಅಧ್ಯಕ್ಷ ರವಿಚಂದ್ರ ಆಚಾರ್ಯ, ಕಾರ್ಯದರ್ಶಿ ಮಹೇಶ್ ಆಚಾರ್ಯ, ಪ್ರಕಾಶ್ ಆಚಾರ್ಯ ಕಾಡೂರು ಬೆಳ್ತಾಡಿ ಉಪಸ್ಥಿತರಿದ್ದರು.

ಗಣ್ಯರ ಭೇಟಿಗೆ ನಿರ್ಬಂಧ
ಪೇಜಾವರಶ್ರೀಗಳು ಡಿ. 20ರಂದು ಉಸಿರಾಟದ ಗಂಭೀರ ಸಮಸ್ಯೆ ಹಿನ್ನೆಲೆಯಲ್ಲಿ ದಾಖಲಾದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐಸಿಯುಗೆ ಗಣ್ಯರ ಭೇಟಿಯ ಅವಕಾಶ ನೀಡದಿರಲು ತಜ್ಞ ವೈದ್ಯರು ಶುಕ್ರವಾರ ನಿರ್ಧರಿಸಿದ್ದಾರೆ. ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಸಹಿತ ಗಣ್ಯರು ಬಂದಾಗ ಶ್ರೀಗಳ ದರ್ಶನಕ್ಕೆ ಐಸಿಯು ಬಾಗಿಲು ತೆರೆಯುವುದರಿಂದ ಹೊರಗಿನ ಸೋಂಕು ತಗಲುವ ಅಪಾಯವಿದ್ದು ಈ ಹಿನ್ನೆಲೆಯಲ್ಲಿ ಗಣ್ಯರ ಭೇಟಿ ಅವಕಾಶವನ್ನು ಕಡ್ಡಾಯವಾಗಿ ನೀಡದಿರಲು ತೀರ್ಮಾನಿಸಲಾಗಿದೆ.

ಪೇಜಾವರ ಶ್ರೀ ಆರೋಗ್ಯ ಸ್ಥಿತಿ ತೀರಾ ಗಂಭೀರ; ಮಾಹಿತಿ ಪಡೆದ ಯಡಿಯೂರಪ್ಪ; ಶ್ರೀಗಳ ಭೇಟಿಗೆ ಅವಕಾಶ ನಿರಾಕರಣೆ

ಉಮಾಭಾರತಿ ಪ್ರಾರ್ಥನೆ
ಸನ್ಯಾಸದೀಕ್ಷೆ ನೀಡಿದ ಪೇಜಾವರಶ್ರೀಗಳ ಆರೋಗ್ಯಕ್ಕಾಗಿ ಬನ್ನಂಜೆಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಜಪ, ಪ್ರಾರ್ಥನೆಯಲ್ಲಿ ನಿರತರಾಗಿದ್ದು ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಶನಿವಾರ ದಿಲ್ಲಿಗೆ ತೆರಳಬೇಕಿದ್ದವರು ಮೊಕ್ಕಾಂ ಮುಂದೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ