ಆ್ಯಪ್ನಗರ

ಸುಬ್ರಹ್ಮಣ್ಯ ಮಠಾಧೀಶರ ನಿರಶನಕ್ಕೆ ಅಷ್ಟ ಮಠಾಧೀಶರ ಕಳವಳ

ಉಪವಾಸ ಕೈ ಬಿಡದ ಸುಬ್ರಹ್ಮಣ್ಯ ಶ್ರೀ , ಸಮಸ್ಯೆ ಇತ್ಯರ್ಥಕ್ಕೆ ದೇಗುಲದ ಆಡಳಿತ ಸ್ಪಂದಿಸಲಿ ಎಂದ ಪೇಜಾವರ ಶ್ರೀ.

Vijaya Karnataka 15 Oct 2018, 11:04 am
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಶನಿವಾರದಿಂದ ಉಪವಾಸ ಆರಂಭಿಸಿರುವ ವಿಷಯ ನಾನಾ ತಿರುವು ಪಡೆದುಕೊಂಡಿದೆ.
Vijaya Karnataka Web ಸುಬ್ರಹ್ಮಣ್ಯ ಮಠಾಧೀಶರ ನಿರಶನಕ್ಕೆ ಅಷ್ಟ ಮಠಾಧೀಶರ ಕಳವಳ


ಶ್ರೀಗಳ ಉಪವಾಸದ ಬಗ್ಗೆ ಉಡುಪಿಯ ಅಷ್ಟ ಮಠಗಳು ಕಳವಳ ವ್ಯಕ್ತಪಡಿಸಿದ್ದು, ಶ್ರೀಗಳ ಬೆಂಬಲಕ್ಕೆ ನಿಂತಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ನಡುವಿನ ಸಾಮರಸ್ಯಕ್ಕೆ ಧಕ್ಕೆ ಆಗಿದ್ದು, ಇದಕ್ಕೆ ಸರಕಾರದ ಹಸ್ತಕ್ಷೇಪವೇ ಕಾರಣ ಎಂದು ಪೇಜಾವರ ಶ್ರೀಗಳು ಆರೋಪಿಸಿದ್ದಾರೆ.

‘‘ಮಠದ ವಿರುದಟಛಿ ಅಪಪ್ರಚಾರದಿಂದ ನೊಂದು ಉಪವಾಸ ಆರಂಭಿಸಿರುವ ಸುಬ್ರಹ್ಮಣ್ಯ ಶ್ರೀಗಳಿಗೆ ನಮ್ಮ ಸಹಾನುಭೂತಿ ಹಾಗೂ ಬೆಂಬಲವಿದೆ. ಆದರೆ ಶ್ರೀಗಳ ನಿರಶನ ಅಷ್ಟ ಮಠಾಧೀಶರಿಗೆ ಕಳವಳ ಮೂಡಿಸಿದ್ದು, ಶ್ರೀಗಳು ಉಪವಾಸ ಕೈ ಬಿಡುವಂತೆ ಅವರ ಮನವೊಲಿಸಲು ದೇವಳದ ಆಡಳಿತ ಮುಂದಾಗಬೇಕು,’’ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾನುವಾರ ಉಡುಪಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಹೇಳಿದರು.

‘‘ಮಠ ಹಾಗೂ ದೇವಾಲಯದ ನಡುವೆ ಸಾಮರಸ್ಯವಿರಬೇಕು. ಶ್ರೀಗಳು ಸಹಕಾರಕ್ಕೆ ಸಿದಟಛಿರಿದ್ದಾರೆ. ದೇವಸ್ಥಾನದ ಮಂದಿ ಕೂಡಾ ಸ್ಪಂದಿಸಿ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಅ.16ರಂದು ಅಥವಾ ನವರಾತ್ರಿ ಮುಗಿಸಿ ಕುಕ್ಕೆಗೆ ಬಂದು ಉಭಯ ಕಡೆಯವರನ್ನು ಭೇಟಿ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನ ನಡೆಸುತ್ತೇನೆ,’’ ಂದರು. ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಮಾನಸಿಕ ಹಿಂಸೆ ಒಪ್ಪುವುದಿಲ್ಲ ಸುಬ್ರಹ್ಮಣ್ಯ: ಉಡುಪಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಭಾನುವಾರ ಕುಕ್ಕೆ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠಕ್ಕೆ ಅಷ್ಟ ಮಠಾಧೀಶರ ಪರವಾಗಿ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದರು. ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಕ್ಷೇಮ ವಿಚಾರಿಸಿದರು. ‘‘ಶ್ರೀಗಳಿಗೆ ಮಾನಸಿಕ ಹಿಂಸೆ ನೀಡುವುದನ್ನು ಒಪ್ಪುವುದಿಲ್ಲ,’’ ಎಂದರು.

ಸರಕಾರದ ಹಸ್ತಕ್ಷೇಪ ಕಾರಣ

‘‘ಈ ಭಿನ್ನಾಭಿಪ್ರಾಯಗಳಿಗೆಲ್ಲ ದೇವಳದ ಆಡಳಿತದಲ್ಲಿ ಸರಕಾರದ ಮಧ್ಯ ಪ್ರವೇಶವೇ ಕಾರಣ. ದೇವಸ್ಥಾನ ಸ್ವತಂತ್ರವಾಗಿ ನಡೆಯಬೇಕು. ಆಡಳಿತದಲ್ಲಿ ಯಾವುದೇ ಪಕ್ಷಗಳಿರಲಿ, ದೇವಸ್ಥಾನದ ವಿಚಾರದಲ್ಲಿ ಎಲ್ಲಾ ಸಹಕಾರ ನೀಡುವುದು ಅಗತ್ಯ,’’ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

ದೇವಳದ ಆಡಳಿತ, ಈ ಹಿಂದೆ ವಿದ್ಯಾಭೂಷಣರು ಪೀಠಾಧಿ ಪತಿಗಳಾಗಿದ್ದಾಗ ದೇವಳದಿಂದ ಮಠಕ್ಕೆ ಕೊಡುತ್ತಿದ್ದ ಪ್ರಾಮುಖ್ಯತೆಯನ್ನಾದರೂ, ಕೊಡಬೇಕಲ್ಲವೇ? ದೇವಳದಿಂದ ಮಠಕ್ಕೆ ಇಷ್ಟರವರೆಗೆ ಸಿಗುತ್ತಿದ್ದ ಅವಕಾಶ ಕಡಿಮೆಯಾಗುತ್ತಿದೆ. ದೇವಳ ಹಾಗೂ ಮಠದೊಂದಿಗೆ ಅನೋನ್ಯತೆ ಇರಬೇಕು
- ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ

ಸರ್ಪ ಸಂಸ್ಕಾರ ತಡೆ ಸಲ್ಲ

ಸರ್ಪ ಸಂಸ್ಕಾರವನ್ನು ಮಠ ಅಥವಾ ದೇವಸ್ಥಾನದಲ್ಲಿ ನಡೆಸುವುದು ಭಕ್ತರಿಗೆ ಬಿಟ್ಟ ವಿಷಯ. ಆದರೆ ಮಠದಲ್ಲಿ ಮಾಡುವುದನ್ನು ತಡೆದು ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಮಠದಲ್ಲಿ ನಡೆಸಿದರೆ ಜನರಿಗೆ ಅನುಕೂಲವೇ ಹೊರತು, ಹಾನಿ ಇಲ್ಲ. ಅದು ಸಮಾಜ ವಿರೋಧಿ ಕಾರ್ಯವಾಗದು. ಬದಲಿಗೆ ದೇವಸ್ಥಾನಕ್ಕೆ ಒತ್ತಡ ಕಡಿಮೆಯಾಗಿ ಒಳಿತಾಗುತ್ತದೆ. ಆದರೆ ಇದಕ್ಕೆ ಸಂಬಂಧವೇ ಇಲ್ಲದ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ. ದೇವಸ್ಥಾನ ಹಾಗೂ ಮಠದ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯದೆ ಉಪವಾಸ ನಿಲ್ಲಿಸೋದಿಲ್ಲ ಎಂದು ಸುಬ್ರಹ್ಮಣ್ಯ ಶ್ರೀಗಳು ತಿಳಿಸಿದ್ದಾರೆ. ಮಠದಿಂದ ದೇವಳಕ್ಕೆ ಏನಾದರೂ ಅನ್ಯಾಯವಾಗಿದ್ದರೆ ಸುಬ್ರಹ್ಮಣ್ಯ ಶ್ರೀಗಳ ಮೇಲೆ ಒತ್ತಡ ತಂದು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಪೇಜಾವರ ಶ್ರೀಗಳು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ