ಆ್ಯಪ್ನಗರ

ಸರಕಾರಿ ಶಾಲೆಯಲ್ಲಿ ಉಚ್ಚ ಮಟ್ಟದ ಶಿಕ್ಷ ಣಕ್ಕೆ ನಾಂದಿ: ಸಂಸದೆ ಶೋಭಾ ಕರಂದ್ಲಾಜೆ

ಕೇಂದ್ರ ಸರಕಾರದ ಅಟಲ್‌ ಟಂಕರಿಂಗ್‌ ಪ್ರಯೋಗಾಲಯದಿಂದ ಗ್ರಾಮೀಣ ವಿದ್ಯಾರ್ಥಿಗಳು ಉಚ್ಚ ಮಟ್ಟದ ಶಿಕ್ಷ ಣ ಪಡೆಯುವಂತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ನುಡಿದರು.

Vijaya Karnataka 21 Feb 2019, 5:00 am
ಕುಂದಾಪುರ : ಕೇಂದ್ರ ಸರಕಾರದ ಅಟಲ್‌ ಟಂಕರಿಂಗ್‌ ಪ್ರಯೋಗಾಲಯದಿಂದ ಗ್ರಾಮೀಣ ವಿದ್ಯಾರ್ಥಿಗಳು ಉಚ್ಚ ಮಟ್ಟದ ಶಿಕ್ಷ ಣ ಪಡೆಯುವಂತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ನುಡಿದರು.
Vijaya Karnataka Web KDP-20AB-ATL1


ಕೋಟೇಶ್ವರದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಅಟಲ್‌ ಟಂಕರಿಂಗ್‌ ಪ್ರಯೋಗಾಲಯವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಎಲ್ಲಾ ಭಾಗದ ಮಕ್ಕಳ ಜ್ಞಾನ ಊರ್ಜಿತಗೊಳಿಸಲು ಅಟಲ್‌ ಟಿಂಕ್‌ರಿಂಗ್‌ ಪ್ರಯೋಗಾಲಯವನ್ನು ಕೇಂದ್ರ ಸರಕಾರದಿಂದ ಪ್ರಾರಂಭಿಸಲಾಗಿದೆ. ಈ ವ್ಯವಸ್ಥೆಯಿಂದ ಮಕ್ಕಳು ಮತ್ತಷ್ಟು ಹೊಸ ಹೊಸ ರೀತಿಯ ಯೋಚನೆಗಳನ್ನು ಮಾಡಬಹುದು. ಈ ರೀತಿಯ ಯೋಜನೆಯಿಂದ ಸರಕಾರಿ ಶಾಲಾ ಮಕ್ಕಳು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಂತೆ ಸರಳವಾಗಿ ಇಂಗ್ಲೀಷ್‌ ಮಾತನಾಡುವಂತಾಗಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷ ತೆ ವಹಿಸಿದ್ದರು. ಕುಂದಾಪುರಕ್ಷೇತ್ರ ಶಿಕ್ಷ ಣಾಧಿಕಾರಿ ಅಶೋಕ್‌ ಕಾಮತ್‌ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಯೋಜನೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್‌ ಸದಸ್ಯರಾದ ಶ್ರೀಲತಾ ಸುರೇಶ್‌ ಶೆಟ್ಟಿ, ಲಕ್ಷ್ಮೀ ಬಿಲ್ಲವ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಬಿಲ್ಲವ, ಕೋಟೇಶ್ವರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷ ಕ ಯೋಗಿ ನಾಯಕ್‌ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್‌ ಡೆನ್ನಿಸ್‌ ಬಾಂಜ್‌ ಸ್ವಾಗತಿಸಿದರು. ವೈಸ ಪ್ರಿನ್ಸಿಪಾಲ್‌ ಕರುಣಾಕರ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷ ಕಿ ಸುಗುಣಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಹರೀಶ್‌ಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ