ಆ್ಯಪ್ನಗರ

ಬನ್ನಂಜೆ ಗೋವಿಂದಾಚಾರ್ಯ ಅಸ್ತಂಗತ.. ವಿದ್ಯಾವಾಚಸ್ಪತಿಗಳ ಜೀವನ, ಸಾಧನೆಗಳತ್ತ ಒಂದು ನೋಟ..

ಉಡುಪಿ ಬನ್ನಂಜೆ ಗೋವಿಂದಾಚಾರ್ಯರವರು ಡಿಸೆಂಬರ್ 13ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಇವರು ಹಿರಿಯ ವಿದ್ವಾಂಸರಾಗಿದ್ದು, ಪದ್ಮಶ್ರೀ ಪುರಸ್ಕೃತರಾಗಿದ್ದರು

Vijaya Karnataka Web 13 Dec 2020, 3:22 pm

ಹೈಲೈಟ್ಸ್‌:

  • ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರು
  • ಸಂಸ್ಕೃತದಲ್ಲಿ ಸಾಹಿತ್ಯ ಕೃತಿ ರಚಿಸಿದ್ದ ಗೋವಿಂದಾಚಾರ್ಯರು
  • ವಿದ್ಯಾವಾಚಸ್ಪತಿ ಎಂದೇ ಬಿರುದಾಂಕಿತರಾಗಿದ್ದ ಶ್ರೀಯುತರು ಇನ್ನಿಲ್ಲ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ.. ವಿದ್ಯಾವಾಚಸ್ಪತಿಗಳಾದ ಗೋವಿಂದಾಚಾರ್ಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಉಡುಪಿ ಜಿಲ್ಲೆಯ ಅಂಬಾಲಪಾಡಿಯಲ್ಲಿ 1936ರಲ್ಲಿ ಜನಿಸಿದ ಗೋವಿಂದಾಚಾರ್ಯರು, ತಮ್ಮ ಪ್ರವಚನಗಳಿಂದಲೇ ಮನೆ ಮಾತಾದವರು.
ಮಾಧ್ವ ತತ್ವದಲ್ಲಿ ಅಮೋಘ ಪಾಂಡಿತ್ಯ ಹೊಂದಿದ್ದ ಗೋವಿಂದಾಚಾರ್ಯರು, ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯಿಗಳು. ಕನ್ನಡ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದ ಗೋವಿಂದಾಚಾರ್ಯರು ಹಲವು ಕೃತಿಗಳನ್ನೂ ರಚಿಸಿದ್ದಾರೆ. ದಿವಂಗತ ಕನ್ನಡ ಚಿತ್ರನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರುಗಳಾಗಿಯೂ ಬನ್ನಂಜೆ ಗೋವಿಂದಾಚಾರ್ಯರು ಗುರ್ತಿಸಿಕೊಂಡಿದ್ದರು.

ಹಿರಿಯ ವಿದ್ವಾಂಸ, ಉಡುಪಿ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

ಗೋವಿಂದಾಚಾರ್ಯರ ಕೃತಿಗಳು..

ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರು ಹಲವು ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳು ಇಂತಿವೆ:

  • ಕಾಳಿದಾಸನ ಶಾಕುಂತಲೆ
  • ಬಾಣಭಟ್ಟನ ಕಾದಂಬರಿ
  • ಶೂದ್ರಕನ ಮೃಚ್ಛಕಟಿಕ
ಇದಲ್ಲದೆ ಹಲವಾರು ಟಿಪ್ಪಣಿಗಳನ್ನೂ ಬನ್ನಂಜೆ ಗೋವಿಂದಾಚಾರ್ಯರು ಬರೆದಿದ್ದಾರೆ.

  • ತ್ರಿವಿಕ್ರಮ ಪಂಡಿತರ ವಾಯು ಸ್ತುತಿ
  • ವಿಷ್ಣು ಸ್ತುತಿಗೆ ಟಿಪ್ಪಣಿ
  • ಉಪ ನಿಷತ್ತುಗಳಿಗೆ ಟೀಕೆ
  • ಮಧ್ವಾಚಾರ್ಯರ ಯಮಕ ಭಾರತ ಕೃತಿಗೆ ಟಿಪ್ಪಣಿ
  • ಭಾಗವತ ತಾತ್ಪರ್ಯ ಕೃತಿಗೆ ಟಿಪ್ಪಣಿ
  • ತ್ರಿವಿಕ್ರಮಾಚಾರ್ಯದಾಸರ ಆನಂದ ಮಾಲಾ ಕೃತಿಗೆ ಟಿಪ್ಪಣಿ
ಇದಲ್ಲದೆ ಪುರುಷ ಸೂಕ್ತ, ಭಗವದ್ಗೀತೆ, ಶ್ರೀ ಸೂಕ್ತ, ಶಿವಸೂಕ್ತ, ನರಸಿಂಹ ಸ್ತುತಿ ಸೇರಿದಂತೆ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಉಪನಿಷತ್ತುಗಳನ್ನು ಕಲಿಸುವ ಶಿಕ್ಷಣ ಮರಳಿ ಬರಬೇಕಿದೆ : ಬನ್ನಂಜೆ ಗೋವಿಂದಾಚಾರ್ಯ

ಜಿವಿ ಅಯ್ಯರ್ ಅವರ ಸಂಸ್ಕೃತ ಚಲನಚಿತ್ರ ಶ್ರೀ ಶಂಕರಾಚಾರ್ಯ, ಶ್ರೀ ಮಧ್ವಾಚಾರ್ಯ ಹಾಗೂ ಶ್ರೀ ರಾಮಾನುಜಾಚಾರ್ಯ ಚಲನಚಿತ್ರಗಳಿಗೆ ಸಂಭಾಷಣೆಯನ್ನು ಬರೆದ ಹೆಗ್ಗಳಿಕೆ ಬನ್ನಂಜೆ ಗೋವಿಂದಾಚಾರ್ಯ ಅವರದ್ದು.

ಬನ್ನಂಜೆ ಇನ್ನು ‘ ಅಭಿನವ ಪಂಡಿತಾಚಾರ್ಯ ’

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ