ಆ್ಯಪ್ನಗರ

ಪರಿಶ್ರಮ, ಛಲದಿಂದ ಗುರಿ ಮುಟ್ಟಲು ಸಾಧ್ಯ

ದೃಢ ಛಲ ಹಾಗೂ ಪರಿಶ್ರಮ ನಮ್ಮನ್ನು ಗುರಿ ಮುಟ್ಟಿಸುತ್ತದೆ. ಪಾಠ-ಆಟಗಳೆರಡೂ ವಿದ್ಯಾರ್ಥಿ ದೆಸೆಯಲ್ಲಿ ಅತೀ ಮುಖ್ಯವಾದುದು. ಇವೆರಡಕ್ಕೂ ಅದರದ್ದೇ ಆದ ಮಹತ್ವವಿದೆ ಎಂದು ಮಾಜಿ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ತಾರೆ ರಶ್ಮೀ ಯತಿರಾಜ್‌ ಹೇಳಿದ್ದಾರೆ.

Vijaya Karnataka 27 Mar 2018, 5:00 am
ನಿಟ್ಟೆ: ದೃಢ ಛಲ ಹಾಗೂ ಪರಿಶ್ರಮ ನಮ್ಮನ್ನು ಗುರಿ ಮುಟ್ಟಿಸುತ್ತದೆ. ಪಾಠ-ಆಟಗಳೆರಡೂ ವಿದ್ಯಾರ್ಥಿ ದೆಸೆಯಲ್ಲಿ ಅತೀ ಮುಖ್ಯವಾದುದು. ಇವೆರಡಕ್ಕೂ ಅದರದ್ದೇ ಆದ ಮಹತ್ವವಿದೆ ಎಂದು ಮಾಜಿ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ತಾರೆ ರಶ್ಮೀ ಯತಿರಾಜ್‌ ಹೇಳಿದ್ದಾರೆ.
Vijaya Karnataka Web basket ball tournament in nitte
ಪರಿಶ್ರಮ, ಛಲದಿಂದ ಗುರಿ ಮುಟ್ಟಲು ಸಾಧ್ಯ


ನಿಟ್ಟೆ ಶಿಕ್ಷ ಣ ಸಂಸ್ಥೆಯ ಕ್ರೀಡಾ ವಿಭಾಗವು ನಿಟ್ಟೆ ಕ್ಯಾಂಪನ್‌ನ ಬಿ.ಸಿ. ಆಳ್ವ ಸ್ಮಾರಕ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಜಸ್ಟೀಸ್‌ ಕೆ.ಎಸ್‌. ಹೆಗ್ಡೆ ಸ್ಮಾರಕ ದಕ್ಷಿಣ ವಲಯ ಆಹ್ವಾನಿತ ಬಾಸ್ಕೆಟ್‌ಬಾಲ್‌(ಪುರುಷರ ಹಾಗೂ ಮಹಿಳೆಯರ) ಪಂದ್ಯಾವಳಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪರಿಶ್ರಮಕ್ಕೆ ತಕ್ಕ ಪ್ರೋತ್ಸಾಹ ಸಿಕ್ಕಾಗ ಸಾಧನೆಯ ಮಾರ್ಗ ಸುಗಮವೆನಿಸುತ್ತದೆ. ನಿಟ್ಟೆಯಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಂದರ್ಭ ಕ್ರೀಡಾ ಶಿಕ್ಷ ಕ ಹುಸೇನ್‌, ಸ್ಪೆಷಲ್‌ ಆಫೀಸರ್‌ ಅರವಿಂದ ಹೆಗ್ಡೆ ಅವರ ಪ್ರೋತ್ಸಾಹ ಎಂದಿಗೂ ಮರೆಯಲಾರದ ನೆನಪುಗಳು ಎಂದರು.

ನಿಟ್ಟೆ ಡೀಮ್ಡ್‌ ಟು ಬಿ ವಿವಿಯ ಪ್ರೊ ಚಾನ್ಸಿಲರ್‌ (ಅಡ್ಮಿನಿಸ್ಪ್ರೇಶನ್‌) ಎನ್‌. ವಿಶಾಲ್‌ ಹೆಗ್ಡೆ ಮಾತನಾಡಿ, ಹಿಂದಿನಿಂದಲೂ ನಿಟ್ಟೆ ವಿದ್ಯಾಸಂಸ್ಥೆ ಕ್ರೀಡೆಗೆ ಉತ್ತಮ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ಕ್ರೀಡಾ ಉತ್ಸಾಹ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಿದೆ. ಕ್ರೀಡೆಯಿಂದ ಆರೋಗ್ಯವೃದ್ಧಿ ಸಾಧ್ಯ ಎಂದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್‌ ಡಾ. ನಿರಂಜನ್‌ ಎನ್‌. ಚಿಪ್ಳೂಣ್ಕರ್‌ ಶುಭ ಹಾರೈಸಿದರು. ಅಧ್ಯಕ್ಷ ತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‌ನ ರಿಜಿಸ್ಟ್ರಾರ್‌ ಪ್ರೊ. ಎ. ಯೋಗೀಶ್‌ ಹೆಗ್ಡೆ ಮಾತನಾಡಿ, ತಾಂತ್ರಿಕ ಶಿಕ್ಷ ಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕ್ರೀಡಾಸಕ್ತಿ ಬಹುಮುಖ್ಯವಾಗಿ ಇರಬೇಕು. ಕ್ರೀಡಾಸಕ್ತನಾಗಿದ್ದರೆ ಮಾನಸಿಕ ಉಲ್ಲಾಸ ಹಾಗೂ ದೈಹಿಕ ಆರೋಗ್ಯಗಳೆರಡರಲ್ಲೂ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದರು.

ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಿನ್ಸಿಪಾಲ್‌ ಪ್ರಶಾಂತ್‌ ಹೊಳ್ಳ, ನಿಟ್ಟೆ ಕ್ಯಾಂಪಸ್‌ನ ಸ್ಪೆಷಲ್‌ ಆಫೀಸರ್‌ ಅರವಿಂದ ಹೆಗ್ಡೆ, ಸ್ಟೂಡೆಂಟ್‌ ವೆಲ್ಫೇರ್‌ ಆಫೀಸರ್‌ ಶೇಖರ್‌ ಪೂಜಾರಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸುಶ್ಮಾ ಪ್ರಾರ್ಥಿಸಿದರು. ದೈಹಿಕ ಶಿಕ್ಷ ಕ ಮುರಳೀಧರ ಶರ್ಮ ಸ್ವಾಗತಿಸಿದರು. ದೈಹಿಕ ಶಿಕ್ಷ ಣ ಸಲಹೆಗಾರ ಗಣೇಶ್‌ ಪೂಜಾರಿ ಪರಿಚಯಿಸಿದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಉಪನ್ಯಾಸಕ ರೋಶನ್‌ ಫರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷ ಣ ಅಧಿಕಾರಿ ಶ್ಯಾಮ್‌ಸುಂದರ್‌ ವಂದಿಸಿದರು.

ಪಂದ್ಯಾವಳಿಯಲ್ಲಿ ಎಸ್‌ಆರ್‌ಎಂ ಯುನಿವರ್ಸಿಟಿ, ಪಾವೈ ಎಂಜಿನಿಯರಿಂಗ್‌ ಕಾಲೇಜಿನ ತಂಡಗಳು ಸೇರಿದಂತೆ ದಕ್ಷಿಣ ಭಾರತದ ನಾನಾ ರಾಜ್ಯಗಳ 14 ಪುರುಷರ ತಂಡಗಳ ಹಾಗೂ 8 ಮಹಿಳಾ ತಂಡಗಳ ಸುಮಾರು 300 ಆಟಗಾರರು ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ