ಆ್ಯಪ್ನಗರ

ಯಕ್ಷಗಾನದ ಸ್ವರೂಪ, ಆಕೃತಿಯೇ ವಿಭಿನ್ನ: ಚಿನ್ನಪ್ಪ ಗೌಡ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ಯಕ್ಷ ಗಾನ ಕಲೆಯ ಸಾಹಿತ್ಯ, ಬಣ್ಣ ಹಾಗೂ ಮಾತುಗಾರಿಕೆಗೆ ತೂಕವಿದ್ದು, ಸೃಜನಶೀಲತೆಯೇ ಪರಂಪರೆಯನ್ನು ಇನ್ನೂ ಜೀವಂತವಾಗಿಟ್ಟಿದೆ. ಯಕ್ಷಗಾನ ನಾಟಕವಲ್ಲ, ಸಂಗೀತ ಕಛೇರಿಯಲ್ಲ. ಯಕ್ಷಗಾನದ ಸ್ವರೂಪ, ಆಕೃತಿಯೇ ವಿಭಿನ್ನ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ತಿಳಿಸಿದ್ದಾರೆ.

Vijaya Karnataka 13 May 2019, 5:00 am
ಉಡುಪಿ: ಯಕ್ಷ ಗಾನ ಕಲೆಯ ಸಾಹಿತ್ಯ, ಬಣ್ಣ ಹಾಗೂ ಮಾತುಗಾರಿಕೆಗೆ ತೂಕವಿದ್ದು, ಸೃಜನಶೀಲತೆಯೇ ಪರಂಪರೆಯನ್ನು ಇನ್ನೂ ಜೀವಂತವಾಗಿಟ್ಟಿದೆ. ಯಕ್ಷಗಾನ ನಾಟಕವಲ್ಲ, ಸಂಗೀತ ಕಛೇರಿಯಲ್ಲ. ಯಕ್ಷಗಾನದ ಸ್ವರೂಪ, ಆಕೃತಿಯೇ ವಿಭಿನ್ನ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ತಿಳಿಸಿದ್ದಾರೆ.
Vijaya Karnataka Web 12


ಉಡುಪಿ ಯಕ್ಷ ಗಾನ ಕಲಾರಂಗದ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ತೆಂಕುತಿಟ್ಟು ಯಕ್ಷಗಾನದ ಸಂಯುಕ್ತ ಪ್ರತಿಭೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಅಭಿನಂದನೆ, ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷ ಗಾನದ ಪರಂಪರೆಯ ಚೌಕಟ್ಟಿನೊಳಗೆ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ಇತ್ತೀಚೆಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಮದುಮಗಳನ್ನು ಕರೆದು ತರುವಾಗ ಯಕ್ಷ ಗಾನ ವೇಷಧಾರಿಗಳನ್ನು ಬಳಸಿದ್ದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದ್ದವು. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ನಾವು ಮಾಡುವ ಪ್ರಯೋಗ ಯಕ್ಷ ಗಾನ ಪರಂಪರೆಯನ್ನು ಯಾವ ರೀತಿ ಗಟ್ಟಿಗೊಳಿಸುತ್ತಿದೆ ಎನ್ನುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಸ್ವೀಕರಿಸಿದ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮಾತನಾಡಿ, ಯಕ್ಷ ಗಾನವೊಂದರ ಪ್ರಸಂಗ ಹಾಗೂ ಪ್ರದರ್ಶನದಲ್ಲೇ ಹಿರಿಮೆ ಗರಿಮೆಯನ್ನು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ. ಕಥೆಯಲ್ಲಿ ಸತ್ವವಿದ್ದು, ಜನರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇರಬೇಕು. ಅಂತಹ ಕಥೆಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ ಎಂದರು.

ಹಿರಿಯ ಯಕ್ಷ ಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್‌ ಮಾತನಾಡಿದರು. ಕಟೀಲು ಮೇಳಗಳ ವ್ಯವಸ್ಥಾಪಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ಡಾ. ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಎಂ.ಎಲ್‌. ಸಾಮಗ, ಯಕ್ಷ ಗಾನ ಕಲಾರಂಗದ ಉಪಾಧ್ಯಕ್ಷ ಗಂಗಾಧರ್‌ ರಾವ್‌, ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್‌ ಉಪಸ್ಥಿತರಿದ್ದರು.

ಯಕ್ಷ ಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿದರು. ಕಲಾರಂಗದ ಜಂಟಿ ಕಾರ್ಯದರ್ಶಿ ನಾರಾಯಣ ಹೆಗಡೆ ಕಾರ‍್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ