ಆ್ಯಪ್ನಗರ

ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಉಡುಪಿ ಬಾಲಕನಿಂದ ಕಲೆಯ ಮ್ಯಾಜಿಕ್‌..!

ಕೊರೊನಾ ವೈರಸ್‌ ಬಗ್ಗೆ ಜನಕ್ಕೆ ಎಷ್ಟೇ ಗೊತ್ತಿದ್ದರೂ ಅವರು ನಿರ್ಲಕ್ಷ್ಯ ತೋರಿಸುವುದನ್ನು ಬಿಡುತ್ತಿಲ್ಲ. ಜನರಲ್ಲಿನ ಈ ಅಸಡ್ಡೆಯನ್ನು ತೊಲಗಿಸಲು ಉಡುಪಿಯ ಬಾಲಕ ಜಾದೂ, ಕಲೆಯ ಮೊರೆ ಹೋಗಿದ್ದು, ವಿಶೇಷ ಕಲಾಕೃತಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Vijaya Karnataka Web 26 Apr 2020, 8:38 pm
  • ಎಸ್.ಜಿ.ಕುರ್ಯ,ಉಡುಪಿ
ಆವೆ ಮಣ್ಣಿನಲ್ಲಿ ಕೊರೊನಾ ಶಿಲ್ಪದ ಭಯಾನಕತೆ, ಗೃಹಬಂಧನದ ಸಂಕೇತವುಳ್ಳ ಕಲಾಕೃತಿ ಮೂಲಕ ಉಡುಪಿ ಬಾಲಕನೊಬ್ಬ ಜನಜಾಗೃತಿಯಲ್ಲಿ ತೊಡಗಿದ್ದಾನೆ.‌ ಕಟಪಾಡಿಯ ಎಸ್‌ವಿಎಸ್ ಆಂಗ್ಲ ಮಾಧ್ಯಮ‌ ಪ್ರೌಢ ಶಾಲೆಯ 8ನೇ ತರಗತಿ‌ ವಿದ್ಯಾರ್ಥಿ ಪ್ರಥಮ್ ಕಾಮತ್, ಕೊರೊನಾ ವೈರಸನ್ನು ಆವೆ ಮಣ್ಣಿನಲ್ಲಿ ಪಡಿಮೂಡಿಸಿ ಅದಕ್ಕೆ ನೂರಾರು ಬೆಂಕಿಕಡ್ಡಿ ಅಳವಡಿಸಿ ಜನರಿಗೆ ಕೊರೊನಾ ಲಾಕ್ ಡೌನ್ ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ.
Vijaya Karnataka Web UDUPI BOY


ಗೃಹಬಂಧನದಲ್ಲಿ ಗಂಡ, ಹೆಂಡತಿ,‌ ಮಕ್ಕಳಿರುವ ಸನ್ನಿವೇಶಕ್ಕೆ ತಕ್ಕಂತೆ ಸಮಾಜದ ಜನತೆಗೆ ಸ್ಟೇ ಹೋಂ ಸ್ಟೇ ಸೇಫ್ ಸಂದೇಶಕ್ಕೆ ಬೆಂಕಿಕಡ್ಡಿ, ಸ್ಟ್ರಾ ಬಳಸಿದ್ದಾರೆ. ಅಗತ್ಯ, ಅನಿವಾರ್ಯವಿದ್ದರಷ್ಟೇ ಮನೆಯಿಂದ ಹೊರಬರಬೇಕೆನ್ನುವ ಕಿವಿ ಮಾತನ್ನೂ ಹೇಳಿದ್ದಾರೆ. ಮಾಸ್ಕ್ ಧಾರಣೆ, ಸಾಮಾಜಿಕ‌ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆಯ‌‌ ಅಗತ್ಯ,‌ವೈಯಕ್ತಿಕ‌ ಸ್ವಚ್ಛತೆಯ ಮಹತ್ವ, ಸಾರ್ವಜನಿಕವಾಗಿ ಉಗುಳದಂತೆ ಸಂದೇಶದ ಬೀಜ ಬಿತ್ತಿದ್ದಾರೆ.

ಉಡುಪಿಯ ದೃಶ್ಯ ಸ್ಕೂಲ್ ಆಟ್ಸ್೯ನಲ್ಲಿ‌ ಡ್ರಾಯಿಂಗ್, ವೆಂಕಿ ಪಲಿಮಾರು ಅವರಲ್ಲಿ ಕ್ಲೇ‌ ಮಾಡೆಲಿಂಗ್,‌ ಸತೀಶ್ ಹೆಮ್ಮಾಡಿ ಅವರಲ್ಲಿ ಜಾದೂ ಕಲಿಯುತ್ತಿರುವ ಪ್ರಥಮ್ ಕಾಮತ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಜಾದೂ ಕಲಿಕೆ, ಯೂ ಟ್ಯೂಬ್ ಮೂಲಕ ಬಾಟಲ್ ಪೈಂಟಿಂಗ್, ಕೊರೊನಾ ವಿರುದ್ಧ ಡ್ರಾಯಿಂಗ್ ರಚನೆಯಿಂದ ಅಮೂಲ್ಯ ಸಮಯ ಸದ್ಭಳಕೆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಹೊಸ ಕಲಿಕೆಯ ಇಚ್ಛಾಶಕ್ತಿಯುಳ್ಳವರಿಗೆ ಪ್ರೇರಣೆಯಾಗಿದ್ದಾರೆ.

ಕರ್ನಾಟಕಕ್ಕೆ ಕೊರೊನಾದಿಂದ ಬಿಗ್‌ ರಿಲೀಫ್‌..! ಭಾನುವಾರ ಕೇವಲ 3 ಪಾಸಿಟಿವ್‌‌, 24 ಜನ ಡಿಸ್ಚಾರ್ಜ್‌

ಚಟುವಟಿಕೆಯ ನಡುವೆ ಬಿಡುವಿನಲ್ಲಿ ಕಟ್ಲೆಟ್, ಫ್ರೈಡ್ ರೈಸ್, ಬೆಂಡೆ ಫ್ರೈ, ಕೋಲ್ಡ್ ಕಾಫಿ, ಮೊಟ್ಟೆ ಮಸಾಲಾ ಮಾಡುವುದನ್ನು ಕಲಿತು ಉತ್ತಮ ಬಾಣಸಿಗನಾಗುವ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಕಲಾ‌ ಪ್ರದರ್ಶನದ ಗಳಿಕೆಯಲ್ಲಿ ಒಂದು ಪಾಲನ್ನು ಕೊರೊನಾ ವೈರಸ್ ತಡೆಗಟ್ಟಿ, ಸಂಕಷ್ಟಕ್ಕೀಡಾದ ಜನರಿಗೆ‌ ನೆರವಾಗಲು ಸ್ಥಾಪಿಸಿದ ಪಿಎಂ ಕೇರ್ಸ್ ನಿಧಿಗೆ ಸಲ್ಲಿಸಿದ್ದಾರೆ. ಜನತಾ ಕರ್ಫ್ಯೂವಿನಲ್ಲಿ ಜನರ‌ ಸಹಭಾಗಿತ್ವಕ್ಕೆ ಪ್ರೇರಣೆಯ ಜಾದೂ ಸಂದೇಶ ನೀಡಿದ್ದರು.

ಕೊರೊನಾಗಾಗಿ ಪುಟ್ಟ ಪೋರ ಕೂಡಿಟ್ಟಿದ್ದು ಕೊಟ್ಟೇ ಬಿಟ್ಟ..! ಸಿಎಂ ಪರಿಹಾರ ನಿಧಿಗೆ ಬಾಲಕ ಕೊಡುಗೆ

ಮೊಬೈಲ್, ಟಿವಿಯಿಂದ‌ ದೂರವಿದ್ದು ಡ್ರಾಯಿಂಗ್, ಸಂಗೀತ, ಮ್ಯಾಜಿಕ್, ಗಾರ್ಡನಿಂಗ್ ಇತ್ಯಾದಿಗಳಲ್ಲಿ ತೊಡಗಿ ಸಮಯ ಸದ್ಭಳಕೆ ಮಾಡಬೇಕು.‌ ಧನಾತ್ಮಕ‌ ಚಿಂತನೆಯಿಂದ ರಜಾ ದಿನಗಳನ್ನು ಖುಷಿ, ನೆಮ್ಮದಿಯಿಂದ ಕಳೆಯುವಂತಹ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಜಾದೂಗಾರ, ಕಲಾವಿದ ಪ್ರಥಮ್‌ ಕಾಮತ್‌ ಕಟಪಾಡಿ ಹೇಳಿದ್ದಾರೆ.

ಕೊರೊನಾ ಬಲೆಯಲ್ಲಿ ಏಷ್ಯಾದ ಅತಿದೊಡ್ಡ ಸ್ಲಂ..! ಮಿಷನ್‌ ಧಾರಾವಿ ಸಕ್ಸಸ್‌ ಆಗುತ್ತಾ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ