ಆ್ಯಪ್ನಗರ

ಮೊಳಹಳ್ಳಿ: ಎರಡು ಚಿರತೆ ಬೋನಿಗೆ

ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದ ಎರಡು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ಇಲ್ಲಿನ ಇರ್ಜಿಕೊಡ್ಲು ಪರಿಸರದಲ್ಲಿ ಮೂರು ಚಿರತೆಗಳ ತಂಡ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಕುರಿತು ಸ್ಥಳೀಯರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ತಂಡ ಕಾರ್ಯಾಚರಣೆಗಿಳಿದಿತ್ತು.

Vijaya Karnataka 28 Dec 2018, 5:00 am
ಕುಂದಾಪುರ: ತಾಲೂಕಿನ ಮೊಳಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದ ಎರಡು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ಇಲ್ಲಿನ ಇರ್ಜಿಕೊಡ್ಲು ಪರಿಸರದಲ್ಲಿ ಮೂರು ಚಿರತೆಗಳ ತಂಡ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಕುರಿತು ಸ್ಥಳೀಯರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ತಂಡ ಕಾರ್ಯಾಚರಣೆಗಿಳಿದಿತ್ತು.
Vijaya Karnataka Web 27ab-mol5


ಚಿರತೆ ಬೇಟೆಗಾಗಿ ಆಯಾ ಕಟ್ಟಿನ ಸ್ಥಳದಲ್ಲಿ ಬೋನು ಇರಿಸಲಾಗಿದ್ದು ಡಿ.25ರಂದು ರಾತ್ರಿ ಒಂದು ಚಿರ ತೆ, ಡಿ.26ರಂದು ಇನ್ನೊಂದು ಚಿರತೆ ಪ್ರತ್ಯೇಕ ಬೋನಿಗೆ ಬಿದ್ದಿದೆ. ಮೊಳಹಳ್ಳಿ ಪರಿಸರದಲ್ಲಿ 15ಕ್ಕೂ ಹೆಚ್ಚು ದನ, 20ಕ್ಕೂ ಹೆಚ್ಚು ಸಾಕು ನಾಯಿ ಈ ಚಿರತೆಗಳು ಬಲಿ ಪಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆ ಹಾವಳಿಯಿಂದ ಪರಿಸರದಲ್ಲಿ ಓಡಾಡಲು ಭಯಪಡುತ್ತಿದ್ದ ನಾಗರಿಕರು ಎರಡು ಚಿರತೆಗಳು ಬೋನಿಗೆ ಬಿದ್ದಿರುವುದರಿಂದ ನಿಟ್ಟಿಸಿರು ಬಿಟ್ಟಿದ್ದಾರೆ. ಎರಡು ಚಿರತೆಗಳನ್ನು ಅಭಯಾರಣ್ಯಕ್ಕೆ ರವಾನಿಸಲಾಗಿದೆ. ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಗೋಪಾಲ್‌ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸಂತೋಷ ದೇವಾಡಿಗ, ಅರಣ್ಯ ರಕ್ಷ ಕ ಸಂತೋಷ ಜೋಗಿ, ಲಕ್ಷ ್ಮಣ, ಉಪವಲಯ ಅರಣ್ಯಾಧಿಕಾರಿ ಹರೀಶ್‌ ಮೊದಲಾದವರು ಕಾರ್ಯಾಚರಣೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ