ಆ್ಯಪ್ನಗರ

ಸುಗಮ ಆಡಳಿತಕ್ಕಾಗಿ ದೇವರ ಮೊರೆ, ಉಚ್ಚಿಲ‌ ಶ್ರೀಮಹಾಲಕ್ಷ್ಮಿ‌ಯ ದರ್ಶನ ಪಡೆದ ಬಿಎಸ್ ವೈ

ಎರಡೂವರೆ ವರ್ಷಗಳ ಆಡಳಿತದಲ್ಲಿ ಯಾವುದೇ ಸಮಸ್ಯೆಗಳು ತಲೆದೋರದಂತೆ ಉಚ್ಚಿಲ‌ ಶ್ರೀಮಹಾಲಕ್ಷ್ಮಿ ತಾಯಿ ಅನುಗ್ರಹಿಸು ಎಂದು ಬಿಎಸ್ ವೈ ದೇವರ ಬಳಿ ಭಕ್ತಿ, ತನ್ಮಯತೆಯಿಂದ ಪ್ರಾರ್ಥಿಸಿದರು. ಮೂವತ್ತೆರಡು ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ನಾಗಸ್ವರ, ಡೋಲು ನಾದದೊಂದಿಗೆ ಸಿಎಂ ಅವರನ್ನು ಸ್ವಾಗತಿಸಲಾಯಿತು.

Vijaya Karnataka Web 19 Jan 2021, 11:31 am
ಉಡುಪಿ: ಎರಡೂವರೆ ವರ್ಷಗಳ ಆಡಳಿತ ಯಾವುದೇ ಅಡ್ಡಿ, ಆತಂಕವಿಲ್ಲದೆ ನಡೆಸಲು ಅನುಗ್ರಹಿಸುವಂತೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ‌ ಶ್ರೀಮಹಾಲಕ್ಷ್ಮಿ‌ ದೇವರ ಬಳಿ ಭಕ್ತಿ, ತನ್ಮಯತೆಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಪ್ರಾರ್ಥನೆ, ಪೂಜೆ ಸಲ್ಲಿಸಿದರು.
Vijaya Karnataka Web ಬಿಎಸ್ ವೈ


ದೇವಳದ ಜೀರ್ಣೋದ್ಧಾರಕ್ಕೆ ಐದು ಕೋಟಿ ರೂ.ಬಿಡುಗಡೆ, ಹತ್ತು ಕೋಟಿ ರೂ. ಮಂಜೂರಾತಿಗಾಗಿ ದೇವಳದ ಅರ್ಚಕ ರಾಘವೇಂದ್ರರವರು ಬಿಎಸ್ ವೈ ಅವರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಇನ್ನಷ್ಟು ಕೊಡುಗೆ ಶ್ರೀಮಹಾಲಕ್ಷ್ಮಿಗೆ ಸಲ್ಲಲಿ. ಉದ್ಘಾಟನೆಗೂ ನೀವೇ ಬರಬೇಕು ಎಂದರು. ಬ್ರಾಹ್ಮಣರ ಅಭಿವೃದ್ಧಿಗೆ ಅನುದಾನ ಸ್ವಾಗತಾರ್ಹ ಇನ್ನೂ ಹತ್ತು ವರ್ಷ ಆಡಳಿತ ನಡೆಸಲು ಮಹಾಲಕ್ಷ್ಮಿ ಅನುಗ್ರಹಿಸಲಿ ಎಂದರು.
ಉದ್ಧವ್ ಠಾಕ್ರೆ ಹೇಳಿಕೆ ಉದ್ಧಟತನದ ಪ್ರದರ್ಶನ, ಬಿಎಸ್‌ವೈ ಕಿಡಿ

ಮೂವತ್ತೆರಡು ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ನಾಗಸ್ವರ, ಡೋಲು ನಾದದೊಂದಿಗೆ ಸಿಎಂ ಯಡಿಯೂರಪ್ಪ ಅವರನ್ನು ಸ್ವಾಗತಿಸಲಾಯಿತು.
ಬಿಎಸ್‌ವೈಯಿಂದ ಲೋಕಾಯುಕ್ತ ಪೊಲೀಸರ ದುರುಪಯೋಗ, ಕಾಂಗ್ರೆಸ್ ಆರೋಪ

ದೇವಳ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ನಾಡೋಜ ಡಾ.ಜಿ.ಶಂಕರ್, ದಕ ಮೊಗವೀರ ಮಹಾಜನ ಸಂಘದ ಅಧ್ಯಜ್ಷ ಜಯ ಸಿ.ಕೋಟ್ಯಾನ್, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿ.ಪಂ.ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ.ಸದಸ್ಯೆ ಶಿಲ್ಪಾ ಜಿ‌. ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕೂಮಾರ್ ಶೆಟ್ಟಿ ಉಪಸ್ಥಿತರಿದ್ದರು.

ದಕ ಮೊಗವೀರ ಮಹಾಜನ ಸಂಘದ ವತಿಯಿಂದ ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ಅವರನ್ನು ಬೆಳ್ಳು ಗಣಪತಿ ನೀಡಿ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ