ಆ್ಯಪ್ನಗರ

ಉಡುಪಿ ಜಿ.ಪಂ. ಸಿಬ್ಬಂದಿಯ ಕೊರೊನಾ ಪರೀಕ್ಷಾ ವರದಿಯಲ್ಲಿ ಗೊಂದಲ

ಕೋವಿಡ್‌ -19 ಪರೀಕ್ಷಾ ವರದಿಯಲ್ಲಿ ಪಾಸಿಟಿವ್‌ ಬಂದಿದ್ದ ಉಡುಪಿಯ ಯುವಕನ್ನು ಎರಡು ದಿನಗಳ ಬಳಿಕ ಜಿಲ್ಲಾಡಳಿತ ಮನೆಯಿಂದ ಐಸೋಲೇಷನ್‌ ವಾರ್ಡಿಗೆ ದಾಖಲಿಸಿದೆ.

Vijaya Karnataka Web 28 May 2020, 11:07 am
ಕಟಪಾಡಿ: ಕೋವಿಡ್‌ -19 ಪರೀಕ್ಷಾ ವರದಿಯಲ್ಲಿ ಪಾಸಿಟಿವ್‌ ಬಂದಿದ್ದ ಉಡುಪಿ ಜಿಪಂ ಸ್ವಚ್ಛತಾ ಅಭಿಯಾನ ವಿಭಾಗದ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನನ್ನು ಪಾಸಿಟಿವ್ ವರದಿ ಬಂದ ಎರಡು ದಿನಗಳ ಬಳಿಕ ಜಿಲ್ಲಾಡಳಿತ ಮನೆಯಿಂದ ಐಸೋಲೇಷನ್‌ ವಾರ್ಡಿಗೆ ದಾಖಲಿಸಿದೆ.
Vijaya Karnataka Web ಕೊರೊನಾ ಪರೀಕ್ಷಾ ವರದಿಯಲ್ಲಿ ಗೊಂದಲ


ಪಾಸಿಟಿವ್‌ ವರದಿ ಬಂದ ತಕ್ಷಣ ಇವರನ್ನು ಪ್ರತ್ಯೇಕಿಸಿ ಆಸ್ಪತ್ರೆಗೆ ದಾಖಲಿಸದೆ ಮನೆಯವರೊಂದಿಗೆ ಎರಡು ದಿನ ಉಳಿಸಿಕೊಳ್ಳಲಾಗಿತ್ತು. ಇದಕ್ಕೆ ಕಾರಣ ಪ್ರಥಮ ವರದಿಯಲ್ಲಿ ಕಂಡು ಬಂದ ಗೊಂದಲ ಎನ್ನಲಾಗಿದೆ. ಆದರೂ ಇದೀಗ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಮೇ 17ರಂದು ಇವರಲ್ಲಿ ರೋಗದ ಗುಣಲಕ್ಷಣಗಳು ಕಂಡುಬಂದಿದ್ದ ಹಿನ್ನಲೆಯಲ್ಲಿ ಮೇ 19ಕ್ಕೆ ಗಂಟಲು ಸ್ರಾವದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮೇ 24ರಂದು ಬಂದಿದ್ದ ವರದಿಯು ಪಾಸಿಟಿವ್‌ ಆಗಿತ್ತು. ಪರಿಕ್ಷಾ ವರದಿ ಬಂದಾಗ ಇವರಲ್ಲಿ ಯಾವುದೇ ರೋಗದ ಲಕ್ಷ್ಮಣಗಳು ಇರಲಿಲ್ಲ. ಜತೆಗೆ ಯಾವುದೇ ಟ್ರಾವೆಲ್ಲಿಂಗ್‌ ಹಿಸ್ಟರಿ ಇಲ್ಲದ ಕಾರಣ ವರದಿಯ ಬಗ್ಗೆ ಸಂಶಯ ಹುಟ್ಟಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಟ್ರೂನಟ್‌ ಯಂತ್ರದ ಮೂಲಕ ಪರೀಕ್ಷಿಸಿದಾಗ ಅದರಲ್ಲಿ ನೆಗೆಟಿವ್‌ ವರದಿ ಬಂದಿತ್ತು.

ವ್ಯತಿರಕ್ತ ವರದಿಗಳ ಗೊಂದವಿದ್ದ ಕಾರಣ ಆ ವ್ಯಕ್ತಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿದರೆ ಸೋಂಕು ತಗಲಬಹುದು ಎಂಬ ಕಾರಣಕ್ಕಾಗಿ ಮನೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಮತ್ತೊಮ್ಮೆ ಅವರ ಗಂಟಲು ಸ್ರಾವದ ಪ್ರರೀಕ್ಷೆಗೆ ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು , ಆ ವರದಿಯಲ್ಲಿ ಪಾಸಿಟಿವ್‌ ಬಂದರೆ ಮಾತ್ರಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗುವುದು. ನೆಗೆಟಿವ್‌ ಬಂದರೆ ಮನೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯನ್ನು ಕಾಲನಿಯಲ್ಲೇ ಮನೆಯವರೊಂದಿಗೆ ಉಳಿಸಿಕೊಂಡಿರುವ ವಿಷಯ ಬಹಿರಂಗವಾಗುತ್ತಲೇ ಸ್ಥಳೀಯರು ಆತಂಕ್ಕೊಳಗಾಗಬಾರದು ಎಂಬ ಕಾರಣಕ್ಕೆ ಬುಧವಾರ ಮಧ್ಯಾಹ್ನ ಕೋವಿಡ್‌ ಆಸ್ಪತ್ರೆಯ ಬದಲು ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದ ಆದೇಶದಂತೆ ಈ ಪರಿಸರವನ್ನು ಕಂಟೈನ್‌ಮೆಂಟ್‌ ವಲಯವಾಗಿ ಪರಿವರ್ತಿಸಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಒಂದು ವೇಳೆ ಈಗ ಕಳುಹಿಸಿರುವ ವರದಿ ನೆಗೆಟಿವ್‌ ಬಂದರೆ, ಸರಕಾರದ ಹೊಸ ಮಾರ್ಗಸೂಚಿಯಂತೆ ಇವರನ್ನು ಮನೆಗೆ ಕಳುಹಿಸಲು ಅವಕಾಶ ಇದೆ. ಆಗ ಕಂಟೈನ್‌ಮೆಂಟ್‌ ಝೋನ್‌ ಕೂಡಾ ತೆರವಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ