ಆ್ಯಪ್ನಗರ

ಉಡುಪಿಯಲ್ಲಿ ಮಾಸ್ಕ್‌ ಧರಿಸದೇ ಓಡಾಡಿದರೆ ದಂಡ: ಜಿಲ್ಲಾಧಿಕಾರಿ ಎಚ್ಚರಿಕೆ

ಕೊರೊನಾ ವೈರಸ್‌ ನಿಯಂತ್ರಿಸುವ ಸಲುವಾಗಿ ಉಡುಪಿಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್‌ ಧರಿಸದೆ ಓಡಾಡಿದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 18 Jun 2020, 8:15 pm
ಉಡುಪಿ: ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿದ್ದು, ಇನ್ನೂ ಕೂಡಾ ಸಾಕಷ್ಟು ಮಂದಿ ಮಾಸ್ಕ್‌ ಹಾಕದೇ ಹೊರಗಡೆ ಓಡಾಡುತ್ತಿರುವುದು ತಿಳಿದಿದೆ. ಮಾಸ್ಕ್‌ ಧರಿಸದ ಪ್ರಕರಣದಲ್ಲಿ ಈ ತನಕ 27 ಸಾವಿರ ರೂ. ದಂಡ ವಸೂಲಿ ಮಾಡಿದ್ದು, ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ದಂಡ ವಿಧಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web Coronavirus 8


ಅವರು ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್‌ ದಿನಾಚರಣೆ ಅಂಗವಾಗಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಕೊರೊನಾ ವಿರುದ್ಧದ ಹೋರಾಟ ನಿರಂತರವಾಗಿದ್ದು, ಚಿಕಿತ್ಸೆಗೆ ಸೂಕ್ತ ಔಷಧ ಕಂಡು ಹಿಡಿಯುವ ತನಕವೂ ಮುಗಿಯುವುದಿಲ್ಲ. ಮಾಸ್ಕ್‌ ಬಳಕೆಯಿಂದ ಶೇ. 50 ರಷ್ಟು ಸೋಂಕು ಹರಡದಂತೆ ತಡೆಗಟ್ಟಲು ಸಾಧ್ಯವಿದೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡೇ ಬರಬೇಕು. ಸಾಮಾಜಿಕ ಅಂತರ್‌ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೊರೊನಾದಿಂದ ಚೇತರಿಸಿಕೊಂಡ ಉಡುಪಿ, ಜಿಲ್ಲೆಯಲ್ಲೀಗ ಕೇವಲ 96 ಆಕ್ಟಿವ್‌ ಕೇಸ್‌!

ಜಿಲ್ಲೆಯ ಬಸ್‌ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೈ ತೊಳೆಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿ ಮುಂದೆ ಅಳವಡಿಸಿಕೊಳ್ಳಬೇಕು. ಸ್ಯಾನಿಟೈಸರ್‌ ಬಳಕೆಗಿಂತ ಕೈ ತೊಳೆಯುವುದು ಹೆಚ್ಚು ಸುರಕ್ಷಿತ ಕ್ರಮವೆಂದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆ ಕಂಡು ಸಾವಿರ ಗಡಿ ದಾಟುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಅದೇ ರೀತಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆಯಲ್ಲೂ ನಾವೇ ಮೂಂಚೂಣಿಯಲ್ಲಿದ್ದೇವೆ. ಸದ್ಯ 130 ಮಂದಿಯಷ್ಟೇ ಆಸ್ಪತ್ರೆಯಲ್ಲಿದ್ದು, ನಾಲ್ಕೈದು ದಿನದೊಳಗೆ ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚೀನಾ ಗಡಿತಂಟೆ: ಉದ್ವಿಗ್ನ ಸ್ಥಿತಿ ಶಮನಕ್ಕೆ ಉಭಯ ದೇಶಗಳ ಚರ್ಚೆಯಾಗಿದೆ ಎಂದ ವಿದೇಶಾಂಗ ಇಲಾಖೆ

ಕೊರೊನಾ ವೈರಸ್‌ನ ಬಗ್ಗೆ ಅನಗತ್ಯವಾಗಿ ಆತಂಕ ಪಡಬೇಕಿಲ್ಲ. ಆದರೆ ಹೊರ ರಾಜ್ಯಗಳಿಂದ ಬರುವವರಿಂದ ಅಂತರ್‌ ಕಾಪಾಡಿಕೊಳ್ಳಬೇಕು. ರಾಜ್ಯದಲ್ಲಿಕ್ವಾರಂಟೈನ್‌ ಮಾರ್ಗಸೂಚಿ ಬದಲಾಗಿದ್ದು, ಉಡುಪಿಯಲ್ಲಿ ಮಾತ್ರ ಹೋಂ ಕ್ವಾರಂಟೈನ್‌ ಮಾಡಿ ಮನೆಯನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಸೀಲ್‌ಡೌನ್‌ ಆದ ಮನೆಯವರು ಹೊರಗಡೆ ಸುತ್ತಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಅಂತರ್‌ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಜಾಗೃತಿ ಜಾಥಾದಲ್ಲಿ ಛತ್ರಿ/ಕೊಡೆಯನ್ನು ಹಿಡಿದುಕೊಂಡು ಪಾದಯಾತ್ರೆ ಮಾಡಲಾಯಿತು. ಸುಮಾರು 50 ಮಂದಿಗಷ್ಟೇ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಎಲ್ಲರೂ ಕೊಡೆ ಹಿಡಿದುಕೊಂಡು ಸಾಗಿ ಬಂದರು. ನಗರಸಭೆಯಿಂದ ಹೊರಟು ತ್ರಿವೇಣಿ ಸರ್ಕಲ್‌ ಮೂಲಕ ತಿರುಗಿ ಕೆಎಂ ಮಾರ್ಗ, ಹಳೆ ಡಯಾನಾ ಸರ್ಕಲ್‌, ಕೋರ್ಟ್‌ ರಸ್ತೆ ಮಾರ್ಗವಾಗಿ ಜೋಡುಕಟ್ಟೆಯಲ್ಲಿ ಮೆರವಣಿಗೆ ಸಮಾಪ್ತಿಯಾಯಿತು. ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ನಮ್ಮ ಜಿಲ್ಲೆಯ ವೈಶಿಷ್ಟತೆ, ಆಹಾರ ಪದ್ಧತಿ, ಇಲ್ಲಿನ ವಾತಾವರಣದಿಂದಾಗಿ ಬಹುತೇಕ ಮಂದಿ ಕೊರೊನಾ ಯುದ್ಧ ಗೆದ್ದಿದ್ದಾರೆ ಎಂದರು.

ಇಎಂಐ ಬಡ್ಡಿ ಮನ್ನಾ ಪ್ರಕರಣ: ಕೇಂದ್ರ ಸರ್ಕಾರ ಕೈಚೆಲ್ಲುವಂತಿಲ್ಲ ಎಂದ ಸುಪ್ರೀಂ!

ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಡಿವೈಎಸ್ಪಿ ಟಿ.ಆರ್‌. ಜೈಶಂಕರ್‌, ಪೌರಾಯುಕ್ತ ಆನಂದ ಚಿ. ಕಲ್ಲೋಳಿಕರ್‌, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡಾ, ಕೋವಿಡ್‌ ನೋಡೆಲ್‌ ಅಧಿಕಾರಿ ಡಾ. ಪ್ರಶಾಂತ್‌ ಭಟ್‌, ಕಂದಾಯ ಅಧಿಕಾರಿ ಧನಂಜಯ, ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ