ಆ್ಯಪ್ನಗರ

ಉಡುಪಿ: ಶಂಕಿತ ಕೊರೊನಾ ವೈರಸ್‌ ವ್ಯಕ್ತಿ ಆರೋಗ್ಯದಲ್ಲಿ ಚೇತರಿಕೆ

ಶಂಕಿತ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ತಾಲೂಕಿನ ಮುನಿಯಾಲಿನ 75 ಹರೆಯದ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ರೋಗಿಯ ಗಂಟಲಿನ ದ್ರವ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ.

Vijaya Karnataka Web 7 Mar 2020, 7:14 am
ಉಡುಪಿ: ಶಂಕಿತ ಕೊರೊನಾ ವೈರಸ್‌ನ ಪರೀಕ್ಷೆ ಹಿನ್ನೆಲೆಯಲ್ಲಿಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಕಾರ್ಕಳ ತಾಲೂಕಿನ ಮುನಿಯಾಲಿನ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
Vijaya Karnataka Web face mask


ಇಸ್ರೇಲ್‌ ಪ್ರವಾಸ ಮುಗಿಸಿ ಊರಿಗೆ ಆಗಮಿಸಿದ್ದ 75 ಹರೆಯದ ವ್ಯಕ್ತಿಗೆ ಕೆಮ್ಮು ಹಾಗೂ ಶೀತದ ತೊಂದರೆಯಿಂದಾಗಿ ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಯ ಗಂಟಲಿನ ದ್ರವ (ಥ್ರೋಟ್‌ ಸ್ವಾಬ್‌)ವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

ಶನಿವಾರ ಬೆಂಗಳೂರಿನಿಂದ ವರದಿ ಕೈ ಸೇರಲಿದೆ. ವರದಿಯ ಆಧಾರದ ಮೇಲೆ ವ್ಯಕ್ತಿಯನ್ನು ಮನೆಗೆ ಕಳುಹಿಸುವ ಬಗ್ಗೆ ಚಿಂತಿಸಲಾಗುವುದೆಂದು ಜಿಲ್ಲಾಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಉಡುಪಿಯಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆ!

ಕಾಸರಗೋಡು ಜಿಲ್ಲೆಯ 52 ಮಂದಿ ಮೇಲೆ ನಿಗಾ
ಕಾಸರಗೋಡು: ಕೊರನಾ ವೈರಸ್‌ ಹಲವು ದೇಶಗಳಲ್ಲಿಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೋಗ ಹರಡುವುದನ್ನು ತಡೆಯುವುದಕ್ಕಾಗಿ ಮುಂಜಾಗ್ರತೆ ಮುಂದುವರಿಯುವುದಾಗಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‌ಬಾಬು ತಿಳಿಸಿದ್ದಾರೆ.

ದಾವಣಗೆರೆ: ಕೊರೊನಾ ಪರಿಣಾಮ, 2 ರೂ ಮಾಸ್ಕ್‌ ದರ 10ಕ್ಕೆ ಏರಿಕೆ!

ಕಾಸರಗೋಡು ಜಿಲ್ಲೆಯಲ್ಲಿ 52 ಮಂದಿ ಅವರವರ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಆಸ್ಪತ್ರೆಗಳಲ್ಲಿ ಯಾರೂ ನಿಗಾದಲ್ಲಿಲ್ಲ. ವಿದೇಶಗಳಿಂದ ಆಗಮಿಸುವವರನ್ನು ನಿಗಾದಲ್ಲಿರಿಸಲಾಗುವುದು. ಅವರಲ್ಲಿ ಕೆಮ್ಮು, ಸೀನು, ಜ್ವರ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳಿಗಾಗಿ ಎಲ್ಲಾಇಲಾಖೆಗಳಿಗೆ ಆರೋಗ್ಯ ಇಲಾಖೆ ಜಾಗ್ರತೆ ನಿರ್ದೇಶ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ