ಆ್ಯಪ್ನಗರ

ದಲಿತರ ಅನುದಾನ ದುರುಪಯೋಗ: ದಲಿತ ಸಂಘಟನೆ ಆಕ್ರೋಶ

ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ಮೀಸಲಿಟ್ಟ ಅನುದಾನ ದುರುಪಯೋಗವಾಗುತ್ತಿರುವ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಆಕ್ರೋಶ ವ್ಯಕ್ತಪಡಿಸಿದೆ.

Vijaya Karnataka 21 Jan 2019, 5:00 am
ಕುಂದಾಪುರ: ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ಮೀಸಲಿಟ್ಟ ಅನುದಾನ ದುರುಪಯೋಗವಾಗುತ್ತಿರುವ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಆಕ್ರೋಶ ವ್ಯಕ್ತಪಡಿಸಿದೆ.
Vijaya Karnataka Web news/udupi/dalitha
ದಲಿತರ ಅನುದಾನ ದುರುಪಯೋಗ: ದಲಿತ ಸಂಘಟನೆ ಆಕ್ರೋಶ


ಬೈಂದೂರು ಶಾಸಕರು ದಲಿತ ಸಮುದಾಯದ ಯುವಕರನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಪಂಗಡಗಳ ಅನುದಾನವನ್ನು ಮನಬಂದಂತೆ ಬಳಸಿಕೊಂಡು ಸಂವಿಧಾನ ವಿರೋಧಿ ಮನೋಭಾವ ಪ್ರದರ್ಶಿಸುತ್ತಿದ್ದಾರೆ. ಬೈಂದೂರು ಕ್ಷೇತ್ರದ ಅಂಪಾರು ಗ್ರಾಮದ ಕಂಚಾರು ಎಂಬಲ್ಲಿ ರಸ್ತೆ ಕಾಮಗಾರಿ ನೆಪದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಅನುದಾನ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ದಲಿತರ ಕಲ್ಯಾಣಕ್ಕೆ ಬಳಕೆಯಾಗಬೇಕಾಗಿದ್ದ ಅನುದಾನ ಖಾಸಗಿ ಗೇರು ಬೀಜ ಕಾರ್ಖಾನೆಯವರ ಅನುಕೂಲಕ್ಕಾಗಿ ರಸ್ತೆ ಕಾಮಗಾರಿ ಆರಂಭಿಸಿರುವುದು ಇಲಾಖೆಯ ನಿರ್ಲಕ್ಷ ್ಯತನಕ್ಕೆ ಸಾಕ್ಷಿಯಾಗಿದೆ.

ಕುಂದಾಪುರ ಕ್ಷೇತ್ರದ ಕಾಳಾವರ ಗ್ರಾಮದ ವಕ್ವಾಡಿ ಕಳ್ಳಿಗುಡ್ಡೆ ಎಂಬಲ್ಲಿ ಅನುದಾನವನ್ನು ಅನ್ಯರಿಗೆ ಅನುಕೂಲವಾಗಲು ಬಳಸಿಕೊಳ್ಳಲಾಗಿದೆ. ಬೈಂದೂರು ಮತ್ತು ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ದಲಿತರ ಅನುದಾನದ ದುರ್ಬಳಕೆ ನಡೆಯುತ್ತಿದ್ದರೂ ಶಾಸಕರು ಮೌನ ವಹಿಸಿದ್ದಾರೆ. ಆಡಳಿತ ಕಣ್ಮುಚ್ಚಿ ಕುಳಿತಿದೆ. ಜಿಲ್ಲಾಡಳಿತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಸಮಿತಿಯ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ