ಆ್ಯಪ್ನಗರ

ಉಡುಪಿ ವಿದ್ಯಾರ್ಥಿನಿ ರಂಜಿತಾಳ ಕೊಲೆ ಪ್ರಕರಣ: ಆರೋಪಿ ಯೋಗೀಶ್‍ಗೆ ಜೀವಾವಧಿ ಶಿಕ್ಷೆ

ಕಳೆದ 7 ವರ್ಷದ ಹಿಂದೆ ವಿದ್ಯಾರ್ಥಿನಿ ರಂಜಿತಾಳನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಬುಧವಾರ ಮಹತ್ತರ ಆದೇಶ ಹೊರಡಿಸಿದೆ.

Vijaya Karnataka Web 16 Sep 2020, 7:05 pm
ಉಡುಪಿ: ಕಳೆದ 7 ವರ್ಷದ ಹಿಂದೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿ ರಂಜಿತಾಳನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಬುಧವಾರ ಮಹತ್ತರ ಆದೇಶ ಹೊರಡಿಸಿದೆ.
Vijaya Karnataka Web court verdict


ಮಲ್ಪೆ ಠಾಣಾ ವ್ಯಾಪ್ತಿಯ ಕಡೆಕಾರು ಗ್ರಾಮದ ಪಟೇಲ್ ತೋಟ ನಿವಾಸಿ ಯೋಗೀಶ್ (32) ಶಿಕ್ಷೆಗೊಳಗಾದ ಆರೋಪಿ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾ. ಸುಬ್ರಹ್ಮಣ್ಯ ಜೆ., ಆರೋಪಿ ಯೋಗೀಶ್‍ನ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಸೆ. 14 ರಂದು ದೋಷಿಯೆಂದು ಘೋಷಿಸಿದ್ದರು. ಬುಧವಾರಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದ ಅವರು ಬುಧವಾರ ವಿಚಾರಣೆ ನಡೆಸಿ ಜೀವಿತಾವಧಿ ಶಿಕ್ಷೆ ವಿಧಿಸಿದ್ದಾರೆ.

ತಾಯ್ನಾಡು ಉಡುಪಿಗೆ ಹೊರಟಿದ್ದ ಮಹಿಳೆ ಕುವೈಟ್ ನಲ್ಲಿ ಸಿಐಡಿ ವಶಕ್ಕೆ

ಘಟನೆ ಏನು: ಮೃತ ಯುವತಿ ರಂಜಿತಾ (19) ವಿದ್ಯಾರ್ಥಿನಿಯಾಗಿದ್ದು, ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಆರೋಪಿ ಯೋಗೀಶ ರಂಜಿತಾಳನ್ನು ಮದುವೆಯಾಗಲು ಇಷ್ಟಪಟ್ಟುಕೊಂಡಿದ್ದ. ರಂಜಿತಾ ದಾರಿಯಲ್ಲಿ ಸಿಕ್ಕಾಗ ಅಡ್ಡಗಟ್ಟಿ ಚುಡಾಯಿಸುವುದು, ಅನೈತಿಕ ಮಾತುಗಳನ್ನು ಆಡುವುದು, ಮೈ ಕೈ ಮುಟ್ಟುವುದು, ಕೆಟ್ಟ ಸನ್ನೆಗಳನ್ನು ಮಾಡುತ್ತಿದ್ದ. ಇದನ್ನು ರಂಜಿತಾ ವಿರೋಧಿಸಿದಾಗ ನೀನು ಒಬ್ಬಳೇ ಸಿಕ್ಕಿದಾಗ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಕಿರುಕುಳ ನೀಡಿದ್ದ.

ಇದರಿಂದ ಮನನೊಂದ ರಂಜಿತಾ 2013, ಸೆ. 28 ರಂದು ಮಲ್ಪೆ ಠಾಣೆಯಲ್ಲಿ ಯೋಗೀಶನ ವಿರುದ್ಧ ದೂರು ನೀಡಿದ್ದಳು. ದೂರ ಕೊಟ್ಟಿರುವ ಬಗ್ಗೆ ಯೋಗೀಶ್ ದ್ವೇಷ ಇಟ್ಟುಕೊಂಡಿದ್ದ. 2013 ನ. 27, ಬೆಳಗ್ಗೆ 9.30 ಕ್ಕೆ ಕಡೆಕಾರು ಗ್ರಾಮದ ಪಟೇಲ್ ತೋಟದಲ್ಲಿ ರಂಜಿತಾ ತನ್ನ ಗೆಳತಿಯ ಜತೆಗೆ ಮಾತನಾಡುತ್ತಿದ್ದಳು. ಅಲ್ಲೇ ಪಕ್ಕದಲ್ಲಿ ವಾಸವಿದ್ದ ಆರೋಪಿ ಯೋಗೀಶ ತನ್ನ ಮನೆಯಿಂದ ಚೂರಿ ಹಿಡಿದುಕೊಂಡು ರಂಜಿತಾಳ ಹಿಂಬದಿಯಿಂದ ತಿವಿದು ಗಾಯಗೊಳಿಸಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ಉಡುಪಿಯಲ್ಲಿ ಸೆ. 21ರಿಂದ ಆರೋಗ್ಯ ಸೇವೆ ಸ್ಥಗಿತ: ಸರಕಾರಕ್ಕೆ ಎಚ್ಚರಿಕೆ ಕೊಟ್ಟ ಸರಕಾರಿ ವೈದ್ಯರು

ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಮಾರುತಿ ಜಿ. ನಾಯಕ್ ವಿಚಾರಣೆ ನಡೆಸಿ 2014, ಫೆ. 14 ರಂದು ಆರೋಪಿ ವಿರುದ್ಧ ದೋಷರೋಷಣ ಪಟ್ಟಿ ಸಲ್ಲಿಕೆ ಮಾಡಿದ್ದರು. 2013, ಡಿ. 1 ರಂದು ಆರೋಪಿಯನ್ನು ಬಂಧಿಸಿದ್ದು, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದವು. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ. ಜಿಲ್ಲಾ ಸರಕಾರಿ ಹಿರಿಯ ಅಭಿಯೋಜಕಿ ಶಾಂತಿ ಬಾಯಿ ಸರಕಾರದ ಪರವಾಗಿ ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ