ಆ್ಯಪ್ನಗರ

ವೈದ್ಯರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಾಥ್‌

ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ವೈದ್ಯರ ನಡುವಿನ ತಿಕ್ಕಾಟ ಮುಂದುವರಿದಿರುವಂತೆಯೇ ಸೋಮವಾರ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕರೆ ನೀಡಿದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಉಡುಪಿಯ ಖಾಸಗಿ ಆಸ್ಪತ್ರೆಗಳು ಓಪಿಡಿ ಸೇವೆ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದವು.

Vijaya Karnataka 18 Jun 2019, 5:00 am
ಉಡುಪಿ: ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ವೈದ್ಯರ ನಡುವಿನ ತಿಕ್ಕಾಟ ಮುಂದುವರಿದಿರುವಂತೆಯೇ ಸೋಮವಾರ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕರೆ ನೀಡಿದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಉಡುಪಿಯ ಖಾಸಗಿ ಆಸ್ಪತ್ರೆಗಳು ಓಪಿಡಿ ಸೇವೆ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದವು.
Vijaya Karnataka Web manipala


ಉಡುಪಿಯ ಸುಮಾರು 24 ಖಾಸಗಿ ಆಸ್ಪತ್ರೆಗಳು ಹಾಗೂ 100ರಷ್ಟು ಅಲೋಪತಿ, ಯುನಾನಿ, ಆಯುರ್ವೇದ ಕ್ಲಿನಿಕ್‌ಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಪರಿಣಾಮ ಬಹಳಷ್ಟು ರೋಗಿಗಳು ಸರಕಾರಿ ಸೇವೆಯ ಮೊರೆ ಹೋಗಬೇಕಾಯಿತು.

ಉಡುಪಿಯ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ (ಓಪಿಡಿ)ದಲ್ಲಿ ಸೇವೆ ನೀಡದ ಕಾರಣ, ಸಣ್ಣ ಪುಟ್ಟ ಆರೋಗ್ಯ ತೊಂದರೆಗಳಿಗಾಗಿ ಆಸ್ಪತ್ರೆಗೆ ಆಗಮಿಸಿದ ಹೆಚ್ಚಿನ ರೋಗಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್‌ ಹೋದರೆ, ಇನ್ನು ಕೆಲವರು ಅನಿವಾರ್ಯವಾಗಿ ಸರಕಾರಿ ಆಸ್ಪತ್ರೆಯ ಮೊರೆ ಹೋಗ ಬೇಕಾಯಿತು.

ಐಎಂಎ ಉಡುಪಿ ಘಟಕದ ಅಧ್ಯಕ್ಷ ಡಾ. ಗುರುಮೂರ್ತಿ ನೀಡಿದ ಮಾಹಿತಿ ಪ್ರಕಾರ, ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಮಾತ್ರ ಸ್ಥಗಿತಗೊಳಿಸಲಾಗಿದ್ದು, ಒಳರೋಗಿ, ಅಪಘಾತದಂತಹ ತುರ್ತು ಚಿಕಿತ್ಸೆ, ಹೆರಿಗೆ ಮೊದಲಾದ ಸೇವೆಗಳನ್ನು ಯಥಾಪ್ರಕಾರ ಮುಂದುವರಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸಿಎಂ ಜತೆ ವೈದ್ಯರ ಮಾತುಕತೆ ಫಲಪ್ರದವಾದರೆ, ವೈದ್ಯರು ಮುಷ್ಕರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಒಂದು ವೇಳೆ ಮಾತುಕತೆ ಮುರಿದು ಬಿದ್ದರೆ, ಭಾರತೀಯ ವೈದ್ಯಕೀಯ ಸಂಘದ ಸೂಚನೆಯಂತೆ ಮಂಗಳವಾರವೂ ಮುಷ್ಕರ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ಸೇವೆ ಅಬಾಧಿತ: ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ಬಂದ್‌ಗೊಳಿಸಿದ ಕಾರಣ, ನಿರೀಕ್ಷೆಯಂತೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಜಿಲ್ಲಾ ಸರ್ಜನ್‌ ಡಾ. ಮಧುಸೂದನ ನಾಯಕ್‌ ಪ್ರಕಾರ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳು ಎಂದಿನಂತೆ ಕಾರ್ಯಾಚರಿಸಿವೆ. ಸೋಮವಾರ ಹಾಗೂ ಶುಕ್ರವಾರ ಜಿಲ್ಲಾಸ್ಪತ್ರೆಗೆ ಉಳಿದ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುವುದರಿಂದ, ಸೋಮವಾರ ವೈದ್ಯರ ಮುಷ್ಕರದ ಬಿಸಿಯಿಂದಾಗಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೂ ಆಸ್ಪತ್ರೆಯ ನೋಂದಣಿ ಕೌಂಟರ್‌, ಒಪಿಡಿಗಳಲ್ಲಿ ರೋಗಿಗಳ ಸರತಿ ಕಂಡು ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ