ಆ್ಯಪ್ನಗರ

ಮಲ್ಪೆ: ಮೀನು ವ್ಯಾಪಾರಕ್ಕೆ ಬಂದಿದ್ದ ಗ್ರಾ. ಪಂ ಸದಸ್ಯನ ಮೇಲೆ ದುಷ್ಕರ್ಮಿಗಳ ದಾಳಿ

ರಿಯಾಝ್ ಅವರ ವಾಹನವನ್ನು ಮಂಗಳೂರಿನಿಂದಲೇ ಹಿಂಬಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮುಖ ಮುಚ್ಚಿಕೊಂಡು ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ರಿಯಾಝ್ ಅವರ ಕುತ್ತಿಗೆಗೆ ಗಾಯವಾಗಿದ್ದು, ಕೈ ಬೆರಳು ತುಂಡಾಗಿದೆ.

Vijaya Karnataka Web 7 Jun 2019, 11:03 am
ಉಡುಪಿ: ಮೀನು ವ್ಯಾಪಾರಕ್ಕಾಗಿ ಮಲ್ಪೆ ಬಂದರಿಗೆ ಬಂದಿದ್ದ ಮಂಗಳೂರು ಫರಂಗಿಪೇಟೆ ಗ್ರಾ.ಪಂ. ಸದಸ್ಯನೋರ್ವರನ್ನು ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೆ ಪ್ರಯತ್ನಿಸಿರುವ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.
Vijaya Karnataka Web Murder attaempt


ಮಂಗಳೂರು ಫರಂಗಿಪೇಟೆಯ ರಿಯಾಝ್ (32) ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾ.ಪಂ. ಸದಸ್ಯನಾಗಿದ್ದ ಇವರು ಫರಂಗಿಪೇಟೆಯಲ್ಲಿ ಕೋಳಿ ಹಾಗೂ ಮೀನಿನ ವ್ಯಾಪಾರ ಮಾಡಿಕೊಂಡಿದ್ದರು. ಮೀನಿನ ವ್ಯಾಪಾರಕ್ಕಾಗಿ ಎಂದಿನಂತೆ ಶುಕ್ರವಾರ ಬೆಳಗ್ಗಿನ ಜಾವ ಇತರೆ ಮೂವರೊಂದಿಗೆ ಮೀನಿನ ವಾಹನದಲ್ಲಿ ಮಲ್ಪೆಗೆ ಬಂದಿದ್ದರು. ಬಂದರಿನಲ್ಲಿ ಇತರರು ವಾಹನದಿಂದ ಇಳಿದು ಹೋಗಿದ್ದು, ರಿಯಾಝ್ ಮಾತ್ರ ವಾಹನದಲ್ಲೇ ಉಳಿದುಕೊಂಡಿದ್ದರು.

ರಿಯಾಝ್ ಅವರ ವಾಹನವನ್ನು ಮಂಗಳೂರಿನಿಂದಲೇ ಹಿಂಬಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮುಖ ಮುಚ್ಚಿಕೊಂಡು ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ರಿಯಾಝ್ ಅವರ ಕುತ್ತಿಗೆಗೆ ಗಾಯವಾಗಿದ್ದು, ಕೈ ಬೆರಳು ತುಂಡಾಗಿದೆ.

ಸ್ಥಳಕ್ಕೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಎಎಸ್‍ಐ ಮಧು ಬಿ.ಇ. ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ