ಆ್ಯಪ್ನಗರ

ಪುದು ಗ್ರಾಪಂ ಸದಸ್ಯನ ಕೊಲೆ ಯತ್ನ: ಇಸ್ಮಾಯಿಲ್ ಸಹಿತ ಐವರ ಬಂಧನ

ಪ್ರಕರಣದ ಸೂತ್ರಧಾರಿ ಮೊಹಮ್ಮದ್ ಇಸ್ಮಾಯಿಲ್ (45), ಆತನ ಸಹೋದರ ಮೊಹಮ್ಮದ್ ಗೌಸ್ (35), ಮೊಹಮ್ಮದ್ ಕೈಸರ್ (60), ಮುನೀದ್ (25) ಹಾಗೂ ಅನ್ಸಾರ್ (25) ಬಂಧಿತರು. ರಿಯಾಝ್‍ನ ಗ್ರಾಮ ಪಂಚಾಯಿತಿ ಸದಸ್ಯತ್ವ ಹಾಗೂ ಹಳೆ ದ್ವೇಷದಿಂದಲೇ ಕೊಲೆಗೆ ಸುಪಾರಿ ಕೊಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಆರೋಪಿಗಳ ಬಂಧನವಾಗಬೇಕಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka Web 11 Jun 2019, 4:49 pm
ಉಡುಪಿ: ಬಂಟ್ವಾಳ ಫರಂಗಿಪೇಟೆಯ ಪುದು ಗ್ರಾ.ಪಂ. ಸದಸ್ಯ ಹಾಗೂ ಮೀನಿನ ವ್ಯಾಪಾರಿ ಕೆ. ಮೊಹಮ್ಮದ್ ರಿಯಾಝ್ (34) ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಫರಂಗಿಪೇಟೆಯ ಮೊಹಮ್ಮದ್ ಇಸ್ಮಾಯಿಲ್ ಸಹಿತ ಐವರನ್ನು ಉಡುಪಿ ಜಿಲ್ಲಾ ಪೊಲೀಸರು ಬೆಂಗಳೂರಿನಲ್ಲಿ ಸೋಮವಾರ ಬಂಧಿಸಿದ್ದಾರೆ.
Vijaya Karnataka Web Crime


ಪ್ರಕರಣದ ಸೂತ್ರಧಾರಿ ಮೊಹಮ್ಮದ್ ಇಸ್ಮಾಯಿಲ್ (45), ಆತನ ಸಹೋದರ ಮೊಹಮ್ಮದ್ ಗೌಸ್ (35), ಮೊಹಮ್ಮದ್ ಕೈಸರ್ (60), ಮುನೀದ್ (25) ಹಾಗೂ ಅನ್ಸಾರ್ (25) ಬಂಧಿತರು.

ರಿಯಾಝ್‍ನ ಗ್ರಾಮ ಪಂಚಾಯಿತಿ ಸದಸ್ಯತ್ವ ಹಾಗೂ ಹಳೆ ದ್ವೇಷದಿಂದಲೇ ಕೊಲೆಗೆ ಸುಪಾರಿ ಕೊಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಆರೋಪಿಗಳ ಬಂಧನವಾಗಬೇಕಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಜೂ. 7 ರ ಬೆಳಗ್ಗಿನ ಜಾವ ರಿಯಾಝ್ ಇತರ ಮೂವರೊಂದಿಗೆ ಮಲ್ಪೆ ಬಂದರಿಗೆ ಬಂದಿದ್ದರು. ಮಂಗಳೂರಿನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳ ತಂಡ ರಿಯಾಝ್ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 3 ತಂಡ ರಚಿಸಿ ವಿಚಾರಣೆ ಮುಂದುವರಿಸಿ, ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಬಂಧನ ಹೇಗೆ?: ಫರಂಗಿಪೇಟೆಯ ಮಳಿಗೆ ಹಾಗೂ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿ ಕೆ. ಮೊಹಮ್ಮದ್ ರಿಯಾಝ್ ಹಾಗೂ ಇಸ್ಮಾಯಿಲ್‍ನ 2 ಗುಂಪಿನ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಗುಂಪಿನಲ್ಲಿ ಅನೇಕರಿದ್ದರೂ ರಿಯಾಝ್ ಗ್ರಾ.ಪಂ. ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ರಿಯಾಜ್ ಅವರನ್ನೇ ಟಾರ್ಗೆಟ್ ಮಾಡಿ ಕೊಲೆಗೆ ಸಂಚು ರೂಪಿಸಲಾಗಿತ್ತು. ಹಿಂದಿನ ಜಗಳದ ಅನುಮಾನದ ಮೇರೆಗೆ ಪೊಲೀಸರು ಇಸ್ಮಾಯಿಲ್‍ಗೆ ನೋಟಿಸ್ ಕೊಟ್ಟಿದ್ದು, ವಿಚಾರಣೆ ವೇಳೆ ಸುಪಾರಿ ಕೊಟ್ಟಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಮೂವರು ಪೊಲೀಸ್ ಕಸ್ಟಡಿಗೆ: ಉಡುಪಿ ಜಿಲ್ಲಾ ಪೊಲೀಸರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಬಂಧನ ಮಾಡಿದ್ದು, ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಈ ಪೈಕಿ ಇಸ್ಮಾಯಿಲ್, ಗೌಸ್ ಹಾಗೂ ಮುನೀದ್ ಎಂಬುವವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಮಲ್ಪೆ ಠಾಣೆ ಪೊಲೀಸ್ ಉಪನಿರೀಕ್ಷಕ ಮಧು ಬಿ.ಈ., ಪ್ರಕರಣದ ತನಿಖಾಕಾರಿಯಾಗಿದ್ದು, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ