ಆ್ಯಪ್ನಗರ

ಮೀನುಗಾರಿಕೆಗೆ ಪ್ರಕೃತಿಯ ಮುನಿಸು: ಗಾಳಿ, ಮಳೆಯಿಂದಾಗಿ ಬಂದರಿನಲ್ಲೇ ಉಳಿದ ಬೋಟ್‌ಗಳು

ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಹವಾಮಾನದಲ್ಲಿ ಪದೇ ಪದೇ ಬದಲಾವಣೆ ಆಗುತ್ತಿದ್ದು, ವಿಪರೀತ ಗಾಳಿಯ ಪರಿಣಾಮ ಸಮುದ್ರದ ನೀರಿನ ಒತ್ತಡ ಹೆಚ್ಚಾಗಿದೆ. ಮತ್ಸ್ಯಕ್ಕಾಗಿ ಬಲೆ ಬೀಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಮೀನುಗಾರಿಕೆಗೆ ಹೋದವರು ಕೂಡಾ ಅರ್ಧಕ್ಕೆ ನಿಲ್ಲಿಸಿ ವಾಪಸ್‌ ಬಂದಿದ್ದಾರೆ. ಮಲ್ಪೆ ಬಂದರಿನಲ್ಲಿ ಈಗಾಗಲೇ ಶೇ.70 ಕ್ಕೂ ಅಧಿಕ ಬೋಟ್‌ಗಳು ಲಂಗರು ಹಾಕಿವೆ. ಕೆಲ ಬೋಟ್‌ಗಳನ್ನು ಕಾರವಾರ ಬಂದರು ಸಹಿತ ಸಮುದ್ರಕ್ಕೆ ಸಮೀಪದಲ್ಲಿನ ಬಂದರಿನಲ್ಲಿ ಆಶ್ರಯ ಕಲ್ಪಿಸಿದ್ದೇವೆ ಎಂದು ಮೀನುಗಾರರು ತಿಳಿಸಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka 14 Sep 2022, 7:36 pm

ಹೈಲೈಟ್ಸ್‌:

  • ತಿಂಗಳ ಹಿಂದೆಯಷ್ಟೇ ಮೀನುಗಾರಿಕಾ ಋುತು ಆರಂಭವಾಗಿತ್ತು
  • ಕಳೆದೆರಡು ವರ್ಷಗಳ ಕೋವಿಡ್‌-19 ಸೋಂಕಿನಿಂದ ಸರಿಯಾಗಿ ಮೀನುಗಾರಿಕೆ ನಡೆದಿರಲಿಲ್ಲ
  • ಈ ಬಾರಿ ಪ್ರಾಕೃತಿಕ ವೈಪರೀತ್ಯ, ಪ್ರಕ್ಷುಬ್ಧಗೊಳ್ಳುತ್ತಿರುವ ವಾತಾವರಣದಿಂದಾಗಿ ಮೀನುಗಾರಿಕೆಗೆ ಹೊಡೆತ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web boat
ಸಾಂದರ್ಭಿಕ ಚಿತ್ರ
ಅಜಿತ್‌ ಆರಾಡಿ
ಉಡುಪಿ:
ಕಳೆದ ಕೆಲ ದಿನಗಳಿಂದ ಭಾರೀ ಗಾಳಿ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮೀನುಗಾರಿಕೆಗೆ ಅಡ್ಡಿಯಾಗಿದೆ. ಇದರ ಪರಿಣಾಮದಿಂದ ಮತ್ಸ್ಯ ಬೇಟೆಗೆ ಹೊರಟಿದ್ದ ಬೋಟ್‌ಗಳೆಲ್ಲ ಹಿಂತಿರುಗಿ ಬಂದು ಬಂದರಿನಲ್ಲಿ ಲಂಗರು ಹಾಕಿವೆ.
ವಾರದ ಹಿಂದೆ ಮೀನುಗಾರಿಕೆಗೆ ತೆರಳಿ ಮತ್ಸ್ಯ ಬೇಟೆಯಾಡಿ ದಡದತ್ತ ಬಂದಿರುವ ಬೋಟ್‌ಗಳು ಮರಳಿ ಮೀನುಗಾರಿಕೆಗೆ ತೆರಳಲು ಹವಾಮಾನ ಅಡ್ಡಿಯಾಗಿದೆ. ಮೀನುಗಾರಿಕಾ ಋುತು ಆರಂಭದಲ್ಲೇ ಪ್ರಕೃತಿ ಕೈ ಕೊಟ್ಟಿರುವ ಪರಿಣಾಮ ಮತ್ಸ್ಯೋದ್ಯಮಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

ಕರಾವಳಿಯಲ್ಲಿ ತೂಫಾನ್‌, ಭಾರಿ ಮಳೆ: ಮೀನುಗಾರಿಕೆಗೆ ಆರಂಭದಲ್ಲೇ ವಿಘ್ನ, ಬಂದರಿನಲ್ಲೇ ಉಳಿದ ಬೋಟ್‌ಗಳು
ಮಳೆಗಾಲದ 2 ಅವಧಿಯ ಮತ್ಸ್ಯ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದು, ತಿಂಗಳ ಹಿಂದೆಯಷ್ಟೇ ಮೀನುಗಾರಿಕಾ ಋುತು ಆರಂಭವಾಗಿತ್ತು. ಕಳೆದೆರಡು ವರ್ಷಗಳ ಕೋವಿಡ್‌-19 ಸೋಂಕಿನಿಂದ ಸರಿಯಾಗಿ ಮೀನುಗಾರಿಕೆ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆ ಇತ್ತು. ಆದರೆ ಪ್ರಾಕೃತಿಕ ವೈಪರೀತ್ಯ, ಪ್ರಕ್ಷುಬ್ಧಗೊಳ್ಳುತ್ತಿರುವ ವಾತಾವರಣದಿಂದಾಗಿ ಮೀನುಗಾರಿಕೆ ಉದ್ದಿಮೆಗೆ ಹೊಡೆತ ಬಿದ್ದಿದೆ.

ಹೆಚ್ಚಿದ ನೀರಿನ ಒತ್ತಡ: ಕಳೆದ ಕೆಲ ದಿನಗಳಿಂದ ಹವಾಮಾನದಲ್ಲಿ ಪದೇ ಪದೇ ಬದಲಾವಣೆ ಆಗುತ್ತಿದ್ದು, ವಿಪರೀತ ಗಾಳಿಯ ಪರಿಣಾಮ ಸಮುದ್ರದ ನೀರಿನ ಒತ್ತಡ ಹೆಚ್ಚಾಗಿದೆ. ಮತ್ಸ್ಯಕ್ಕಾಗಿ ಬಲೆ ಬೀಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಮೀನುಗಾರಿಕೆಗೆ ಹೋದವರು ಕೂಡಾ ಅರ್ಧಕ್ಕೆ ನಿಲ್ಲಿಸಿ ವಾಪಸ್‌ ಬಂದಿದ್ದಾರೆ. ಮಲ್ಪೆ ಬಂದರಿನಲ್ಲಿ ಈಗಾಗಲೇ ಶೇ.70 ಕ್ಕೂ ಅಧಿಕ ಬೋಟ್‌ಗಳು ಲಂಗರು ಹಾಕಿವೆ. ಕೆಲ ಬೋಟ್‌ಗಳನ್ನು ಕಾರವಾರ ಬಂದರು ಸಹಿತ ಸಮುದ್ರಕ್ಕೆ ಸಮೀಪದಲ್ಲಿನ ಬಂದರಿನಲ್ಲಿ ಆಶ್ರಯ ಕಲ್ಪಿಸಿದ್ದೇವೆ ಎಂದು ಮೀನುಗಾರರು ತಿಳಿಸಿದ್ದಾರೆ.

ಎರಡು ತಿಂಗಳ ನಿಷೇಧದ ಬಳಿಕ ಕರಾವಳಿಯಲ್ಲಿ ಮೀನುಗಾರಿಕೆ ಋತು ಶುರು: ಮತ್ಸ್ಯ ಬೇಟೆಗೆ 1500ಕ್ಕೂ ಹೆಚ್ಚು ಬೋಟ್‌ಗಳು ಸಜ್ಜು
'ಸೆಪ್ಟೆಂಬರ್ 14 ರ ವರೆಗೆ ಗೋವಾ, ಮಹಾರಾಷ್ಟ್ರ, ಗುಜರಾತ್‌ ಸಹಿತ ಕರಾವಳಿಯಲ್ಲಿ ಭಾರೀ ಗಾಳಿ ಮಳೆಯಾಗುವ ಲಕ್ಷಣವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲ ದಿನಗಳಿಂದ ಮಳೆ ಗಾಳಿಯಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು, ಮೀನುಗಾರಿಕೆ ಬೋಟ್‌ ಸಮುದ್ರಕ್ಕೆ ಇಳಿಯದಂತಾಗಿದ್ದು, ಬಂದರಿನಲ್ಲಿ ಲಂಗರು ಹಾಕಿವೆ' ಎಂದು ಮೀನುಗಾರಿಕೆ ಇಲಾಖೆ ಉಡುಪಿ ಜಿಲ್ಲಾ ಜಂಟಿ ನಿರ್ದೇಶಕ ಗಣೇಶ್‌ ಕೆ. ಹೇಳಿದ್ದಾರೆ.


'ಹವಾಮಾನದಲ್ಲಿ ವೈಪರೀತ್ಯದಿಂದಾಗಿ ಕಳೆದ ಕೆಲ ದಿನಗಳಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮುದ್ರದಲ್ಲಿನ ನೀರಿನ ಒತ್ತಡ ಜಾಸ್ತಿಯಾಗುತ್ತಿದ್ದು, ಬೋಟ್‌ ನಿಯಂತ್ರಣದಲ್ಲಿಟ್ಟು ಬಲೆ ಬೀಸುವುದಕ್ಕೂ ಕಷ್ಟವಾಗುತ್ತಿದೆ. ಸಮುದ್ರ ತಿಳಿಯಾಗುವ ಲಕ್ಷಣವಿದ್ದು, ಒಂದೆರಡು ದಿನಗಳಲ್ಲಿ ಮೀನುಗಾರಿಕೆಗೆ ತೆರಳುವ ಸಾಧ್ಯತೆ ಇದೆ' ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಹೇಳಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ