ಆ್ಯಪ್ನಗರ

ಅಪಾಯದಂಚಿನಲ್ಲಿ ಮರವಂತೆ ಕರಾವಳಿ ತಡೆಗೋಡೆ, ರಸ್ತೆ

ಸ್ಥಳೀಯರು ಶ್ರಮದಾನದ ಮೂಲಕ ಸಂಚಾರಕ್ಕೆ ರಸ್ತೆ ನಿರ್ಮಿಸಿದ್ದರು. ಕಳೆದೆರಡು ದಿನಗಳಿಂದ ಹೆಚ್ಚಿದ ಕಡಲ ಆರ್ಭಟಕ್ಕೆ ತಡೆಗೋಡೆ ಕಲ್ಲುಗಳು ಕುಸಿದಿದ್ದು, ಸಂಚಾರಕ್ಕೆ ರೂಪಿಸಿಕೊಂಡಿದ್ದ ರಸ್ತೆಯಲ್ಲಿ ಬಿರುಕು ಮೂಡಿದೆ.

Vijaya Karnataka 24 Nov 2021, 7:45 pm
ಕುಂದಾಪುರ: ಮರವಂತೆ ಗ್ರಾಮದ ಮರವಂತೆ ಕರಾವಳಿ ಎಂಬಲ್ಲಿ ಕಡಲ ಆರ್ಭಟಕ್ಕೆ ತಡೆಗೋಡೆ ಮತ್ತು ಸಂಪರ್ಕ ರಸ್ತೆ ಅಪಾಯಕ್ಕೆ ಸಿಲುಕಿದೆ.
Vijaya Karnataka Web ಮರವಂತೆ ಬೀಚ್‌
ಮರವಂತೆ ಬೀಚ್‌


ಉಡುಪಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತದ ಪ್ರಕೋಪಕ್ಕೆ ಇಲ್ಲಿನ ಸಂಪರ್ಕ ರಸ್ತೆ ಸಮುದ್ರ ಪಾಲಾಗಿತ್ತು. ಕಡಲ್ಕೊರೆತ ತಡೆಗೆ ತೀರದಲ್ಲಿ ಕಲ್ಲು ಜೋಡಣೆ ನಡೆದಿದ್ದು, ಸ್ಥಳೀಯರು ಶ್ರಮದಾನದ ಮೂಲಕ ಸಂಚಾರಕ್ಕೆ ರಸ್ತೆ ನಿರ್ಮಿಸಿದ್ದರು. ಕಳೆದೆರಡು ದಿನಗಳಿಂದ ಹೆಚ್ಚಿದ ಕಡಲ ಆರ್ಭಟಕ್ಕೆ ತಡೆಗೋಡೆ ಕಲ್ಲುಗಳು ಕುಸಿದಿದ್ದು, ಸಂಚಾರಕ್ಕೆ ರೂಪಿಸಿಕೊಂಡಿದ್ದ ರಸ್ತೆಯಲ್ಲಿ ಬಿರುಕು ಮೂಡಿದೆ.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ಔಷಧೀಯ ಗುಣದ ಘೋಲ್ ಫಿಶ್

ಮುಂಗಾರು ಆರಂಭದಲ್ಲಿ ಭೀಕರ ಕಡಲ್ಕೊರೆತಕ್ಕೆ ರಸ್ತೆ ಕೊಚ್ಚಿ ಹೋಗಿ ಮನೆಗಳು ಅಪಾಯಕ್ಕೆ ಸಿಲುಕಿದ್ದವು. ಕಡಲ್ಕೊರೆತ ತಡೆಗೆ ಹಾಕಲಾದ ಕಲ್ಲುಗಳೀಗ ಕುಸಿದಿದೆ. ರಸ್ತೆಯೂ ಅಪಾಯಕ್ಕೆ ಸಿಲುಕಿದೆ. ಶಾಸಕರು, ತಹಸೀಲ್ದಾರರು ಸಹಿತ ಸಂಬಂಧಿತರಿಗೆ ಮನವಿ ಸಲ್ಲಿಸಿದ್ದೇವೆ. ಕೂಡಲೇ ಸ್ಪಂದಿಸಿ ತುರ್ತು ಸುರಕ್ಷತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸೈಡ್‌ವಾಲ್‌ ಬದಿ ಕುಸಿತ

ಮರವಂತೆ ಕರಾವಳಿಯ ದಕ್ಷಿಣ ದಿಕ್ಕಿನಲ್ಲಿ ಸಮುದ್ರ ಕೊರೆತ ತಡೆಯಲು ಈ ಹಿಂದೆ ನಿರ್ಮಿಸಲಾಗಿರುವ ಸೈಡ್‌ವಾಲ್‌ ಬದಿಯಲ್ಲಿಕುಸಿದಿದೆ. ಇದರಿಂದ ಸಂಪರ್ಕ ರಸ್ತೆ ಅಪಾಯಕ್ಕೆ ಸಿಲುಕಿದೆ. ಸೈಡ್‌ವಾಲ್‌ ಬದಿಯಲ್ಲಿ ಸಾಗುವ ಸಂಪರ್ಕ ರಸ್ತೆ ಜರ್ಜರಿತಗೊಂಡಿದೆ. ಸಾಕಷ್ಟು ಮನವಿ ಸಲ್ಲಿಸಿದ್ದರೂ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸಂಸ್ಕಾರ, ಸಂಸ್ಕೃತಿಯಿಂದ ಮುಂದಿನ ಪೀಳಿಗೆಗೊಬ್ಬ ಮೋದಿ ಹುಟ್ಟಿ ಬರಲಿ: ಅದಮಾರು ಶ್ರೀ

ಶಿಕ್ಷಣ, ಪಠ್ಯ ಪುಸ್ತಕದ ಅಧ್ಯಯನದೊಂದಿಗೆ ಹಿರಿಯರಿಗೆ ಗೌರವ ಕೊಡುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಈ ಮೂಲಕ ಋುಷಿ, ಮುನಿಗಳ ಸಂಸ್ಕೃತಿಯ ನಾಡಾಗಿರುವ ನಮ್ಮ ದೇಶದಲ್ಲಿಮುಂದಿನ ಪೀಳಿಗೆಗೊಬ್ಬ ಮೋದಿ ಹುಟ್ಟಿ ಬರಲಿ ಎಂದು ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಅವರು, ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ದೀಪಾರ್ಚನ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪು ಭತ್ತ ಖರೀದಿಗೆ ಸಿಗದ ಅನುಮತಿ; ಖರೀದಿ ಕೇಂದ್ರದಲ್ಲಿ ನೋಂದಣಿಗೆ ಬದಲಾಗಬೇಕಿದೆ ಸರ್ಕಾರದ ಆದೇಶ!

ನನ್ನ ಗುರುಗಳಾದ ಶ್ರೀ ವಿಬುಧೇಶತೀರ್ಥರು ದೇಶದಲ್ಲೆಡೆ ಅದಮಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಈಗ ಅವುಗಳ ಉನ್ನತೀಕರಣವನ್ನು ಗೌರವ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಮಾಡುತ್ತಿದ್ದಾರೆ. ಅದಮಾರಿನ ವಿದ್ಯಾರ್ಥಿಗಳ ಹಿತಕ್ಕಾಗಿ ಅರ್ಚನಾ ಅವರ ಶ್ರಮವೂ ಅಗಣಿತ. ವಿದ್ಯಾರ್ಥಿಗಳ ಹಾರೈಕೆ ಪ್ರದೀಪ್‌ ಹಾಗೂ ಅರ್ಚನಾ ಅವರ ಮೇಲೆ ಸದಾ ಇರಲಿ ಎಂದು ತಿಳಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ 2015ರಲ್ಲಿ ಸುಮಾರು 400 ವಿದ್ಯಾರ್ಥಿಗಳಿದ್ದು, ಇಂದು 1,400 ಕ್ಕೇರಿದೆ. ಉತ್ತಮ ಶಿಕ್ಷಣವೇ ಸಂಸ್ಥೆಯ ಗುರಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಂಡು ನರೇಂದ್ರ ಮೋದಿ ಅವರಂತಾಗಬೇಕು ಎಂದು ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ