ಆ್ಯಪ್ನಗರ

ಮತ್ತೆ ವಾಯುಭಾರ ಕುಸಿತ: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ

ಮುಂಗಾರಿನ ಆರ್ಭಟದಿಂದ ಕಂಗೆಟ್ಟಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಿಂಗಾರು ಮಳೆಗೂ ನಲುಗಿ ಹೋಗಿದೆ.

Vijaya Karnataka Web 24 Oct 2019, 3:34 pm
ಮಂಗಳೂರು: ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದರ ಪರಿಣಾಮವಾಗಿ ರಾಜ್ಯದ ಕರಾವಳಿ, ಮಲೆನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.
Vijaya Karnataka Web Rain 1200


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರವು ಹೆಚ್ಚಿನ ಮಳೆ ಬೀಳುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಸೂಚನೆ ನೀಡಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಅಬ್ಬರಿಸುತ್ತಿರುವ ಹಿಂಗಾರು: ತುಂಬಿ ತುಳುಕುತ್ತಿವೆ ರಾಜ್ಯದ ಜಲಾಶಯಗಳು

ಉಡುಪಿ ಜಿಲ್ಲೆ: ಸರಾಸರಿ 81.20 ಮಿ. ಮೀ. ಮಳೆ

ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರ , ಜನಜೀವನ ಅಸ್ತವ್ಯಸ್ತ

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 81.20 ಮಿ. ಮೀ. ಮಳೆ ದಾಖಲಾಗಿದೆ. ಬುಧವಾರದಿಂದ ಗುರುವಾರ ಬೆಳಗ್ಗೆ ತನಕ ಉಡುಪಿ ತಾಲೂಕಿನಲ್ಲಿ 97.1 ಮಿ. ಮೀ., ಕುಂದಾಪುರ: 86.4 ಮಿ. ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 59.7 ಮಿ. ಮೀ. ಮಳೆ ಬಿದ್ದಿದೆ. ಹೆಬ್ರಿ ತಾಲೂಕಿನ ವರಂಗ ಗ್ರಾಮದ ವನಜಾ ಪೂಜಾರ್ತಿ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಿಂದ 20,000 ರೂ. ನಷ್ಟವಾಗಿದೆ. ಗುರುವಾರ ಬೆಳಗ್ಗಿನಿಂದ ವಿರಾಮದ ನಡುವೆ ಭಾರೀ ಮಳೆಯಾಗಿದ್ದು ನದಿ, ತೋಡುಗಳೆಲ್ಲಾ ತುಂಬಿ ಹರಿಯುತ್ತಿವೆ. ಮುಂಗಾರು ಮಳೆ ನಿಂತ ಬಳಿಕ ಬಾವಿಗಳಲ್ಲಿ ತಗ್ಗಿದ್ದ ನೀರಿನ ಮಟ್ಟ 5ರಿಂದ 10 ಅಡಿ ಮೇಲಕ್ಕೇರಿದೆ.

ಬಂಗಾಳ ಕೊಲ್ಲಿಯಲ್ಲೂ ವಾಯು ಭಾರ ಕುಸಿತವಾಗಿರುವುದು ಹಿಂಗಾರು ಮಳೆ ಜೋರಾಗಲು ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ