ಆ್ಯಪ್ನಗರ

ಮಾಧಿನವ ಪ್ರಧಿಯತ್ನದಿಂದ ಮಾತ್ರ ನೆಧಿಮ್ಮದಿ ಪ್ರಾಧಿಪ್ತಿ: ಡಾ. ಹೆಗ್ಗಡೆ

ಶಾಶ್ವತ ನೆಮ್ಮದಿ ಅಂಗಡಿಯಲ್ಲಿ ಸಿಗುವುದಾದರೆ ಶ್ರೀಮಂತರು ದುಡ್ಡು ಕೊಟ್ಟು ಖರೀದಿಸುತ್ತಿದ್ದರು. ಆದರೆ ನೆಮ್ಮದಿ ಸಿಗುವುದು ಕೇವಲ ಮನುಷ್ಯ ಪ್ರಯತ್ನದಿಂದ ಮಾತ್ರ ಎಂದು ಧರ್ಮಸ್ಥಳದ ಧರ್ಮಾಧಿಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Vijaya Karnataka 8 Jun 2019, 8:58 pm
ಬ್ರಹ್ಮಾವರ : ಶಾಶ್ವತ ನೆಮ್ಮದಿ ಅಂಗಡಿಯಲ್ಲಿ ಸಿಗುವುದಾದರೆ ಶ್ರೀಮಂತರು ದುಡ್ಡು ಕೊಟ್ಟು ಖರೀದಿಸುತ್ತಿದ್ದರು. ಆದರೆ ನೆಮ್ಮದಿ ಸಿಗುವುದು ಕೇವಲ ಮನುಷ್ಯ ಪ್ರಯತ್ನದಿಂದ ಮಾತ್ರ ಎಂದು ಧರ್ಮಸ್ಥಳದ ಧರ್ಮಾಧಿಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
Vijaya Karnataka Web heggade


ಅವರು ಉಪ್ಪಿನಕೋಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆಯ ಬ್ರಹ್ಮಾವರ ತಾಲೂಕು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಸಂತೋಷ ನೆಮ್ಮದಿ ಸಿಗಬೇಕಾದ್ರೆ ಜನರು ಕರ್ಮವನ್ನು ಸರಿಯಾಗಿ ಮಾಡಬೇಕು. ಕರ್ಮವೇ ಇಲ್ಲದೆ ದೇವರ ಅನುಗ್ರಹ ಸಿಗುವುದಿಲ್ಲ. ಯಾವ ಕರ್ತವ್ಯ ನಾವು ಮಾಡಬೇಕು ಅವನ್ನು ನಾವೇ ಮಾಡಬೇಕು ಎಂದರು.

ಮಹಿಳೆಯರು ಪರಿವರ್ತನೆಯಾದರೆ ಸಂಸಾರ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡಿ ತೋರಿಸಿದೆ. ಈ ಕುರಿತು ಬೇರೆ ಉದಾಹರಣೆಗಳು ಬೇಕಿಲ್ಲ. ಮನೆಯ ಮೂಲೆಯಲ್ಲಿದ್ದ ಮಹಿಳೆಯರು ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿದ ಬಳಿಕ ಉನ್ನತ ಸ್ಥಾನಗಳಿಗೆ ಏರಿದ್ದಾರೆ ಎಂದರು.

ವೇದಿಕೆಯಲ್ಲಿ ಕಟ್ಟಡ ಮಾಲೀಕ ಜಗನ್ನಾಥ ಪೂಜಾರಿ ಜಿಲ್ಲಾಧ್ಯಕ್ಷ ನವೀನ್‌, ಯೋಜನಾಧಿಕಾರಿ ದಿನೇಶ್‌, ಕಾರ್ಯನಿರ್ವಾಹಕ ನಿದೇರ್ಶಕ ಎಲ್‌.ಎಚ್‌ ಮಂಜುನಾಥ್‌, ಪ್ರಾದೇಶಿಕ ನಿರ್ದೇಶಕ ಮಹಾವೀರ್‌ ಆಜ್ರಿ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ