ಆ್ಯಪ್ನಗರ

ಬೆಳ್ಳೆ: ಅಕ್ರಮ ಕೆಂಪುಕಲ್ಲು ಕೋರೆಗೆ ದಾಳಿ: ಲಾರಿ, ಟ್ರಿಲ್ಲರ್‌ ವಶ

ಬೆಳ್ಳೆ ಗ್ರಾಮದ ಕುಂತಳನಗರದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಮಂಗಳವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Vijaya Karnataka 5 Jun 2019, 5:00 am
ಕಟಪಾಡಿ: ಬೆಳ್ಳೆ ಗ್ರಾಮದ ಕುಂತಳನಗರದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಮಂಗಳವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Vijaya Karnataka Web UDP-04HA GANI


ಇಲ್ಲಿನ 213/5 ಮತ್ತು 214/1 ಸರ್ವೇ ನಂಬರಿನ ಪಟ್ಟಾ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಲಿಖಿತವಾಗಿ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಗಣಿ-ಭೂ ವಿಜ್ಞಾನ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದ ಕೆಂಪು ಕಲ್ಲುಗಳು, ಅರ್ಧ ಕಲ್ಲುಗಳನ್ನು ತುಂಬಿದ್ದ ಲಾರಿ, 2 ಟ್ರಿಲ್ಲರ್‌ ಮತ್ತು 2 ಟ್ರ್ಯಾಲಿಗಳನ್ನು ವಶಕ್ಕೆ ಪಡೆದುಕೊಂಡು ಶಿರ್ವ ಪೊಧಿಲೀಸರ ವಶಕ್ಕೆ ಒಪ್ಪಿಸಲಾಗಿದೆ. ದಾಳಿ ಸಂದರ್ಭ ಸ್ಥಳದಲ್ಲಿಯಿಧಿದ್ದ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.

213/5ರ ಜಾಗದಲ್ಲಿ 0.50 ಎಕಧಿರೆ ಜಾಗದಲ್ಲಿ 9,49,000 ರೂ. ರಾಜಸ್ವದಷ್ಟು, ಹಾಗೂ 214/1ರ ಜಾಗದಲ್ಲಿ 0.28 ಎಕರೆ ಜಾಗದಲ್ಲಿ 6500 ಎಂಟಿ ಕಲ್ಲು ಗಣಿಗಾರಿಕೆ ನಡೆಸಿರುವುದನ್ನು ದಾಖಲಿಸಲಾಗಿದೆ. ಅನುಮತಿ ಪಡೆಯದೆ, 10 ಲಕ್ಷ ಕ್ಕೂ ಮೀರಿ ರಾಜಸ್ವ ಕಟ್ಟದೆ ಅಕ್ರಮ ಗಣಿಗಾರಿಕೆ ನಡೆದಿದೆ.

ಬುಧವಾರ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಬಗ್ಗೆ ಗಣಿ ಅಧಿಕಾರಿಗಳು ಪ್ರಕ್ರಿಯೆ ನಡೆಸುತ್ತಿದ್ದಾರೆ

ಗಣಿ ಇಲಾಖೆ ವಿಜ್ಞಾನಿಗಳಾದ ರಾಣ್ಜೀ ನಾಯ್ಕ್‌, ಮಹೇಶ್‌, ಕಂದಾಯ ಪರಿವೀಕ್ಷ ಕ ರವಿಶಂಕರ್‌, ಬೆಳ್ಳೆ ಗ್ರಾಮ ಕರಣಿಕ ಪ್ರದೀಪ್‌, ಸಹಾಯಕ ಸ್ಟ್ಯಾನಿ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡು ಮಹಜರು ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ