ಆ್ಯಪ್ನಗರ

ಎಸ್‌.ಕೆ.ಎಫ್‌ ಎಲಿಕ್ಷ ರ್‌ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಬೆಳುವಾಯಿ ಬನ್ನಡ್ಕದ ಎಸ್‌.ಕೆ.ಎಫ್‌. ಉತ್ಪಾದಿತ ಶುದ್ಧ ಕುಡಿಯುವ ನೀರಿನ ಘಟಕ ದಾನಶಾಲೆ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಭಾಧಿನುಧಿವಾರ ಉದ್ಘಾಟನೆ ನಡೆಯಿತು.

Vijaya Karnataka 2 Jul 2019, 5:00 am
ಕಾರ್ಕಳ: ಬೆಳುವಾಯಿ ಬನ್ನಡ್ಕದ ಎಸ್‌.ಕೆ.ಎಫ್‌. ಉತ್ಪಾದಿತ ಶುದ್ಧ ಕುಡಿಯುವ ನೀರಿನ ಘಟಕ ದಾನಶಾಲೆ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಭಾನುವಾರ ಉದ್ಘಾಟನೆ ನಡೆಯಿತು.
Vijaya Karnataka Web KRL-1KV-GAT


ಜೈನ ಧರ್ಮ ಜೀರ್ಣೋದ್ಧಾರ ಸಂಘ ಕಾರ‍್ಯದರ್ಶಿ ಎಂ.ಕೆ. ವಿಜಯ ಕುಮಾರ್‌ ಉದ್ಘಾಟಿಸಿದರು. ಒಳ್ಳೆಯ ನೀರು ದೊರೆಯುವಿಕೆ ಇಲ್ಲದಿರುವುದರಿಂದ, ಜನರು ನೀರಿನ ಬಾಟ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಮಾಮೂಲಿಯಾಗಿದೆ. ಜೈನರು ಬಹಳ ಪ್ರಾಚೀನ ಕಾಲದಿಂದಲೂ, ನೀರನ್ನು ಬಟ್ಟೆಯಿಂದ ಸೋಸಿಯೇ ಕುಡಿಯುವ ಪರಂಪರೆಯನ್ನು ಅನುಚಾನವಾಗಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತಾಗಿದೆ ಎಂದರು.

ಜೈನ್‌ ಮಿಲನ್‌ ಹಾಗೂ ಎಸ್‌.ಕೆ.ಎಫ್‌ ಸಮೂಹದ ಪ್ರವರ್ತಕ ಜಿ. ರಾಮಕೃಷ್ಣ ಆಚಾರ್‌ ಅವರನ್ನು ಎಂ.ಕೆ. ವಿಜಯ ಕುಮಾರ್‌ ಅಭಿನಂದಿಸಿದರು. ಎಸ್‌.ಕೆ.ಎಫ್‌. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಶುದ್ಧ ಪರಿಸರದ ಜತೆಗೆ ಶುದ್ಧ ಕುಡಿಯುವ ನೀರಿನ ಉದ್ದೇಶದಿಂದ ಪ್ಲಾಸ್ಟಿಕ್‌ ಬಾಟ್ಲಿ ನೀರಿನಿಂದ ಜನರಿಗೆ ಮುಕ್ತಿಕೊಡುವ ದಿಸೆಯಿಂದ, ನೀರನ್ನು ಸ್ವಂತ ಮೂಲದಿಂದ ಶುದ್ಧ ಕುಡಿಯುವ ನೀರನ್ನು ಪಡೆಯುವುದರ ಜತೆಗೆ ಆಹಾರ, ಖಾದ್ಯಗಳನ್ನು ತಯಾರಿಸಿ, ಜನರ ಆರೋಗ್ಯ ಕಾಪಾಡುವಲ್ಲಿ, ಜೈನ ಧರ್ಮ ಜೀರ್ಣೋದ್ಧಾರ ಸಂಘದ ಕೊಡುಗೆಯನ್ನು ಜಿ. ರಾಮಕೃಷ್ಣ ಆಚಾರ್‌ ಪ್ರಶಂಸಿಸಿದರು.

ಕಾಂತೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಜೈನ ಧರ್ಮ ಜೀರ್ಣೋದ್ಧಾರ ಸಂಘದ ಕೋಶಾಧಿಕಾರಿ ಬಾರಾಡಿ ಬೀಡು ಡಾ. ಜೀವಂಧರ ಬಲ್ಲಾಳ್‌ ಅಧ್ಯಕ್ಷ ತೆ ವಹಿಸಿದ್ದರು. ಜೈನ ಧರ್ಮ ಜೀರ್ಣೋದ್ಧಾರ ಸಂಘದ ಜತೆ ಕಾರ್ಯದರ್ಶಿ ಎ. ಮೋಹನ ಪಡಿವಾಳ್‌ ಕಾರ್ಕಳ ಟಿ.ಎ.ಪಿ.ಸಿ.ಎಂ ಉಪಾಧ್ಯಕ್ಷ ಕಡ್ತಲ ಸಂಪತ್‌ ಕುಮಾರ್‌ ಜೈನ್‌, ಶಿರ್ಲಾಲಿನ ಅನಂತರಾಜ ಪೂವಣಿ, ಮೂಡುಮಾರ್ನಾಡಿನ ಅಹಿಂಸಾ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥಾಪಕ ವರ್ದಮಾನ್‌ ಜೈನ್‌, ಮಾಧ್ಯಮ ಸಂಪರ್ಕ ಕೇಂದ್ರ ಸಂಚಾಲಕ ಸಾಂತ್ರಬೆಟ್ಟು ಆದಿರಾಜ ಅಜ್ರಿ, ವಲಯ 8 ಜೈನ್‌ ಮಿಲನ್‌ ನಿರ್ದೇಶಕ ಅಂಡಾರು ಮಹಾವೀರ ಹೆಗ್ಡೆ, ಕಾರ್ಕಳ ಜೈನ್‌ ಮಿಲನ್‌ ಘಟಕ ಅಧ್ಯಕ್ಷೆ ಶಶಿಕಲಾ ಕುಮಾರಯ್ಯ ಹೆಗ್ಡೆ ಉಪಸ್ಥಿತರಿದ್ದರು.

ಜೈನ್‌ ಮಿಲನ್‌ ಕಾರ‍್ಯಕಾರಿ ಸಮಿತಿ ಸದಸ್ಯ ಶಿಕ್ಷ ಕ ಯೋಗರಾಜ ರಾಜ್‌ ಶಾಸ್ತ್ರಿ ಕಾರ‍್ಯಕ್ರಮ ನಿರೂಪಿಸಿದರು. ಎಸ್‌.ಕೆ.ಎಫ್‌ ಪರಿಸರ ವ್ಯವಸ್ಥಾಪಕ ಮಂದಾರ ರಾಜೇಶ ಭಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ