ಆ್ಯಪ್ನಗರ

ಕೋಟೇಶ್ವರದಲ್ಲಿ ಹೆಚ್ಚಿದ ಕಡಲ್ಕೊರೆತ, ಅಪಾಯದಂಚಿನಲ್ಲಿ ರಸ್ತೆ, ವಿದ್ಯುತ್‌ ಲೈನ್‌ಗಳು..!

ಪ್ರತೀ ವರ್ಷ ಮಳೆಗಾಲದಲ್ಲಿ ಕಡಲ ಕೊರೆತದ ಭೀತಿ ಎದುರಾಗುತ್ತಿದ್ದು ಅದರಂತೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮತ್ತೆ ಕಡಲ್ಕೊರೆತದ ಭೀತಿ ಉಂಟಾಗಿದೆ. ಹಳ ಅಳಿವೆ ಸಮೀಪದ ಕಿನಾರೆ ಬೀಚ್‌ನ ರೆಸ್ಟೋರೆಂಟ್‌ಗಳ ಗುಡಿಸಲುಗಳು ಆಪಾಯದಂಚಿನಲ್ಲಿದ್ದು, ಕುಸಿಯುವ ಸಾಧ್ಯತೆ ಇದೆ. ವಿದ್ಯುತ್ ಕಂಬಗಳು ಕೂಡ ಕುಸಿಯುವ ಹಂತದಲ್ಲಿದೆ.

Vijaya Karnataka Web 4 Aug 2020, 5:54 pm
ಉಡುಪಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಡುಪಿ ಜಿಲ್ಲೆಯ ಕೋಟೇಶ್ವರ, ಬೀಜಾಡಿ, ಗೋಪಾಡಿ ಕಡಲತೀರದ ಪ್ರದೇಶಗಳಲ್ಲಿ ಕಡಲ ಕೊರೆತ ಉಂಟಾಗಿ ಸುಮುದ್ರ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
Vijaya Karnataka Web Sea udupi

ಬಿಜೆಪಿಗೆ ಧೈರ್ಯವಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ: ದಿನೇಶ್ ಗುಂಡೂರಾವ್ ಸವಾಲ್‌

ಪ್ರತೀ ವರ್ಷ ಮಳೆಗಾಲದಲ್ಲಿ ಕಡಲ ಕೊರೆತದ ಭೀತಿ ಎದುರಾಗುತ್ತಿದ್ದು ಅದರಂತೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮತ್ತೆ ಕಡಲ್ಕೊರೆತದ ಭೀತಿ ಉಂಟಾಗಿದೆ. ಹಳ ಅಳಿವೆ ಸಮೀಪದ ಕಿನಾರೆ ಬೀಚ್‌ನ ರೆಸ್ಟೋರೆಂಟ್‌ಗಳ ಗುಡಿಸಲುಗಳು ಆಪಾಯದಂಚಿನಲ್ಲಿದ್ದು, ಕುಸಿಯುವ ಸಾಧ್ಯತೆ ಇದೆ. ವಿದ್ಯುತ್ ಕಂಬಗಳು ಕೂಡ ಕುಸಿಯುವ ಹಂತದಲ್ಲಿದೆ.

ಸಿಎಂ ಸಂಪರ್ಕ ಹಿನ್ನೆಲೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕ್ವಾರಂಟೈನ್‌

ಕಡಲ ತಡೆಗೋಡೆಗಳಿಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿವೆ. ಸಮೀಪದಲ್ಲೇ ಇರುವ ಕೋಟೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಅಳಿವೆ ಸಮೀಪದ ಆರಾಧ್ಯಾ ಫ್ಯಾನ್ಸಿ ಶಾಪ್‌ ಬಳಿ ಕಡಲ ನೀರು ರಸ್ತೆಗೆ ಸರಾಗವಾಗಿ ನುಗ್ಗುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಅಲ್ಲದೇ ನೀರಿನ ಮಟ್ಟವು ದಿನೇ ದಿನೇ ಏರಿಕೆಯಾಗುತ್ತಿದೆ.

ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶವಿದ್ದರೂ ಕಡಲಿಗಿಳಿಯಲೊಪ್ಪದ ಕಡಲ

ಕಡಲ್ಕೊರೆತದಿಂದ ಆತಂಕಕ್ಕೆ ಒಳಗಾಗಿರುವ ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಡೆಗೋಡೆ ನಿರ್ಮಾಣ ಮಾಡಲು ಅತಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ