ಆ್ಯಪ್ನಗರ

ಸ್ವಾತಂತ್ರ್ಯ ದಿನಾಚರಣೆಗೆ ಬಂತು ತ್ರಿವರ್ಣ ಬಣ್ಣದ ಮಾಸ್ಕ್: ಮಾರಾಟಕ್ಕೆ ದೇಶಪ್ರೇಮಿಗಳ ವಿರೋಧ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತ್ರಿವರ್ಣ ಬಣ್ಣದ ಮಾಸ್ಕ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದನ್ನು ಧರಿಸಬೇಡಿ ಹಾಗೂ ಮಾರಾಟ ಮಾಡಬೇಡಿ ಎಂದು ದೇಶಪ್ರೇಮಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ. ಮಾತ್ರವಲ್ಲದೇ ಇದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ವಿಷಯ. ತ್ಯಾಗ, ಬಲಿದಾನದ ಸಂಕೇತವಾದ ತಿರಂಗಾ ಬಣ್ಣದ ಮಾಸ್ಕ್‌ನ್ನು ಧರಿಸಬೇಡಿ ಎಂದು ಮನವಿ ಮಾಡಿದ್ದಾರೆ.

Vijaya Karnataka Web 14 Aug 2020, 1:22 pm
ಜಗದೀಶ ದೇವಾಡಿಗ ಮುಳ್ಳಿಕಟ್ಟೆ
Vijaya Karnataka Web ಸಾಂದರ್ಭಿಕ ಚಿತ್ರ

ಉಡುಪಿ: ಆ.15ರಂದು 74ನೇ ಸ್ವಾತಂತ್ರ್ಯ ದಿನ ಆಚರಿಸಲು ದೇಶ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಸ್ವಾತಂತ್ರ್ಯ ದಿನವನ್ನು ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಏತನ್ಮಧ್ಯೆ ಮಾರುಕಟ್ಟೆಗೆ ತಿರಂಗಾ ಬಣ್ಣದ ಬಗೆಬಗೆಯ ಮಾಸ್ಕ್‌ಗಳು ಲಗ್ಗೆ ಇಟ್ಟಿವೆ.

ಆದರೆ ರಾಷ್ಟ್ರ ಧ್ವಜದ ಅವಹೇಳನ, ಸುಡುವುದು ಮತ್ತು ಧ್ವಜವನ್ನು ವಿರೂಪಗೊಳಿಸುವುದು ರಾಷ್ಟ್ರದ್ರೋಹ. ಕೊರೊನಾ ಹಿನ್ನೆಲೆಯಲ್ಲಿಮಾರುಕಟ್ಟೆಗೆ ಲಗ್ಗೆ ಇಟ್ಟ ತ್ರಿವರ್ಣದ ಮಾಸ್ಕ್‌ಗಳು ಒಂದು ದಿವಸಕ್ಕೆ ಮಾತ್ರ ಸೀಮಿತಗೊಂಡಿರುತ್ತದೆ. ಆದರೆ ಬಳಿಕ ಈ ಧರಿಸಿದ ಮಾಸ್ಕ್‌ಗಳು ಎಲ್ಲೆಂದರಲ್ಲಿಎಸೆಯಲ್ಪಡುತ್ತವೆ. ರಾಷ್ಟ್ರ ಧ್ವಜವನ್ನು ಕೇವಲ ಬಾವುಟವಾಗಿ ಬಳಸಬೇಕೇ ವಿನಃ ಮುಖ ಕವಚವಾಗಿ ಧರಿಸುವುದು, ಕರವಸ್ತ್ರವಾಗಿ ಉಪಯೋಗಿಸುವುದು ಎಷ್ಟು ಸರಿ?. ಇದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ವಿಷಯ. ತ್ಯಾಗ, ಬಲಿದಾನದ ಸಂಕೇತವಾದ ತಿರಂಗಾ ಬಣ್ಣದ ಮಾಸ್ಕ್‌ನ್ನು ಧರಿಸಬೇಡಿ ಎಂದು ದೇಶಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟಿದ್ದು, ಸಾಕಷ್ಟು ಜನರು ಬೆಂಬಲಿಸಿದ್ದಾರೆ.

ಪೆಟ್ಟುಗಳ ಸಹಿಸಿ.. ಒಡೆದಷ್ಟೂ ಗಟ್ಟಿಯಾಗಿ ಕಟ್ಟಿಕೊಳ್ಳುವ ಬಹುಸಂಸ್ಕೃತಿಯ ದಿಟ್ಟ ಭಾರತ
ಬಂಡಲು ಗಟ್ಟಲೆ ತ್ರಿವರ್ಣ ಬಣ್ಣದ ಮಾಸ್ಕ್‌ ದಿಲ್ಲಿಯಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ರೀತಿಯ ಮಾಸ್ಕ್‌ಗಳು ಬಗೆಬಗೆಯ ರೀತಿಯಲ್ಲಿದೊರೆಯುತ್ತವೆ. ಅಂಗಡಿಗಳಲ್ಲಿದಾಸ್ತಾನಿದ್ದು ವ್ಯಾಪಾರಕ್ಕೆ ಸಿದ್ಧಗೊಂಡಿದೆ. ರಾಷ್ಟ್ರ ಧ್ವಜವನ್ನು ಮಾಸ್ಕ್‌ ರೂಪದಲ್ಲಿಧರಿಸಲು ಹೊರಟಿರುವುದು ಸರಿಯಲ್ಲ. ಇದು ಖಂಡನೀಯ. ಈ ಬಗ್ಗೆ ಸೂಕ್ತ ಕ್ರಮವನ್ನು ಸರಕಾರ ಈ ಕೂಡಲೇ ಕೈಗೊಳ್ಳಬೇಕು. ಯಾರು ಕೂಡ ತ್ರಿವರ್ಣ ಧ್ವಜದ ಮಾಸ್ಕ್‌ ಧರಿಸದೆ ದೇಶಪ್ರೇಮ ತೋರ್ಪಡಿಸಿ.
ರಾಘವೇಂದ್ರ ಪೂಜಾರಿ ಹುಬ್ಬಾಳಬೆಟ್ಟು, ಸಾಲಾಡಿ

ಫ್ಯಾಷನ್‌ ಜನರ ಜೀವನಾಡಿಯಂತಾಗಿದೆ. ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆ ವ್ಯವಸ್ಥೆ ಇಂದು ಸ್ಪರ್ಧೆಗೆ ಇಳಿದು ಬಿಟ್ಟಿದೆ. ಉತ್ಪನ್ನಗಳನ್ನು ಹೊರ ತರಲು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಕೊರೊನಾ ವೈರಸ್‌ನಿಂದ ಮಾಸ್ಕ್‌ಗೆ ಬಹು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಮಾಸ್ಕ್‌ ತಯಾರಕರು ರಾಷ್ಟ್ರಧ್ವಜವನ್ನು ಬಿಟ್ಟಿಲ್ಲ. ಎಗ್ಗಿಲ್ಲದೇ ತಿರಂಗಾ ಬಣ್ಣದ ಮಾಸ್ಕ್‌ಗಳು ಮಾರುಕಟ್ಟೆಯಲ್ಲಿದಾಸ್ತಾನುಗೊಂಡಿದೆ. ಮಾಸ್ಕ್‌ ರೂಪದಲ್ಲಿಬಂದಿರುವುದು ನೋವು ತಂದಿದೆ. ವಿಶ್ವ ಹಿಂದೂ ಪರಿಷತ್‌ ಇದನ್ನು ಖಂಡಿಸುತ್ತದೆ. ಯಾರು ಕೂಡ ಈ ರೀತಿಯ ಮಾಸ್ಕ್‌ಗಳನ್ನು ಧರಿಸಬೇಡಿ. ಜಿಲ್ಲಾಡಳಿತ ತಿರಂಗಾ ಮಾಸ್ಕ್‌ ಮಾರುವುದಕ್ಕೆ ನಿರ್ಬಂಧ ವಿಧಿಸಬೇಕು.
ಗುರುಪ್ರಸಾದ್‌ ಶೆಟ್ಟಿ ಯಡೇರಿ, ಧರ್ಮಪ್ರಚಾರಕ್‌ ಪ್ರಮುಖ್‌, ವಿಶ್ವ ಹಿಂದೂ ಪರಿಷತ್‌, ಉಡುಪಿ ಜಿಲ್ಲೆ

ತ್ರಿವರ್ಣ ಧ್ವಜದ ಮಾಸ್ಕ್‌ ಮಾರಾಟ ಮಾಡುವುದಾಗಲಿ ಧರಿಸುವುದಾಗಲಿ ಕಾನೂನು ಬಾಹಿರ. ಫ್ಲ್ಯಾಗ್‌ ಕೋಡ್‌ನಲ್ಲಿ ಅವಕಾಶ ಇರುವುದಿಲ್ಲ. ಫ್ಲ್ಯಾಗ್‌ ಕೋಡ್‌ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸಲಾಗುವುದು.
ಜಿ.ಜಗದೀಶ್‌, ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ