ಆ್ಯಪ್ನಗರ

ಕಾಳಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಶಿಲಾಶಾಸನ ಪತ್ತೆ

ಕಾಳಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ 2ನೇ ದೇವರಾಯನ ಶಿಲಾಶಾಸನ ಪತ್ತೆಯಾಗಿದೆ ಎಂದು ಮೂಲ್ಕಿ ಸುಂದರರಾಮ್‌ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

Vijaya Karnataka Web 14 Feb 2018, 9:11 am
ಉಡುಪಿ: ಕುಂದಾಪುರ ತಾಲೂಕಿನ ಕಾಳಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ 2ನೇ ದೇವರಾಯನ ಶಿಲಾಶಾಸನ ಪತ್ತೆಯಾಗಿದೆ ಎಂದು ಮೂಲ್ಕಿ ಸುಂದರರಾಮ್‌ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.
Vijaya Karnataka Web inscription found in kalavar
ಕಾಳಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಶಿಲಾಶಾಸನ ಪತ್ತೆ


ಕಾಳಾವರದ ಶ್ರೀ ಮಹಾಲಿಂಗೇಶ್ವರ ಹಾಗೂ ಕಾಳಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ದೇವಾಲಯದ ಗರ್ಭಗೃಹದ ಸುತ್ತುಪೌಳಿಯ ನಂತರದ ಶುಕನಾಸದ ದ್ವಾರದ ಎಡ ಬಲಗಳಲ್ಲಿಎರಡು ಶಾಸನಗಳಿದ್ದು , ಪ್ರಸ್ತುತ ಶಾಸನ ಬಲಭಾಗದಲ್ಲಿಪತ್ತೆಯಾಗಿದೆ. ಶಾಸನ 1.37 ಮೀ. ಎತ್ತರವಿದ್ದು , 0.61 ಮೀ. ಅಗಲವಿದೆ. ಶಾಸನದ ಮೇಲ್ಭಾಗದ ಲಾಳಾಕೃತಿಯ ಪಟ್ಟಿಕೆಯಲ್ಲಿಸೂರ್ಯಚಂದ್ರ, ಮಧ್ಯದಲ್ಲಿಶಿವಲಿಂಗವಿದೆ. ಶಿವಲಿಂಗದ ಸುತ್ತ ಲಿಂಗಾಕೃತಿಯಲ್ಲಿಪ್ರಭಾವಳಿಯಿದೆ. ಶಿವಲಿಂಗದ ಬಲಭಾಗದಲ್ಲಿಪಾಣಿಪೀಠದ ಗೋಮುಖವಿದೆ.

ಶಾಸನವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿಬರೆಯಲಾಗಿದೆ. ಒಟ್ಟು38 ಸಾಲುಗಳಲ್ಲಿಬರೆದಿರುವ ಈ ಶಾಸನ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಸಂಗಮ ರಾಜಮನೆತನದ ಪ್ರಸಿದ್ಧ ದೊರೆ 2ನೇ ದೇವರಾಯನ ಆಳ್ವಿಕೆ ಸೇರಿದ ಶಾಸನವಾಗಿದೆ ಎಂದು ಅವರು ವಿವರಿಸಿದ್ದಾರೆ.

ಶಾಸನವು ಗಣಪತಿ, ಸರಸ್ವತಿ ಹಾಗೂ ಶಿವಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ. ಶಕ ವರುಷ 1360ನೇ ವರ್ತಮಾನ ಸಿದ್ಧಾರ್ಥಿ ಸಂವತ್ಸರದ ಕಾರ್ತಿಕ ಶುದ್ಧ 5 ಲು ಎಂದು ಕಾಲವನ್ನು ಉಲ್ಲೇಖಿಸಲಾಗಿದೆ. ಇದು ಕ್ರಿ.ಶಕ 23.10.1438ರ ಗುರುವಾರಕ್ಕೆ ಸರಿಹೊಂದುತ್ತದೆ. 2ನೇ ದೇವರಾಯನನ್ನು ಅರಿರಾಯ ವಿಭಾಡ, ಗಜಬೇಟೆಕಾರನೆಂಬ ಬಿರುದುಗಳೊಂದಿಗೆ ಶಾಸನ ಪರಿಚಯಿಸುತ್ತದೆ. ಆತನ ಆಳ್ವಿಕೆಯ ಕಾಲದಲ್ಲಿಚಂಡರಸ ಒಡೆಯರು ಬಾರಕೂರು ರಾಜ್ಯದ ರಾಜ್ಯಪಾಲರಾಗಿ ಆಳ್ವಿಕೆ ನಡೆಸುತ್ತಿದ್ದರೆಂದು ಶಾಸನದಿಂದ ತಿಳಿಯುತ್ತದೆ. ಶಾಸನದಲ್ಲಿತಿರುಮಲೆ ಭಂಡಾರಿ ನಾಯಕ ಮತ್ತು ಕಾಳಾವರದ ದುಗ್ಗಣ ನಾಯಕ ಎಂಬ ಇಬ್ಬರು ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ