ಆ್ಯಪ್ನಗರ

ಯುವ ವಿಜ್ಞಾನಿಗಳನ್ನು ಸೃಷ್ಟಿಸುವ ಇನ್‌ಸ್ಪೈರ್‌ ಅವಾರ್ಡ್‌

ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಲ್ಲಿ ಹುದುಗಿರುವ ವಿಜ್ಞಾನ ಪ್ರತಿಭೆ ಹೊರ ತರುವ ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿರುವ 'ಇನ್‌ಸ್ಪೈರ್‌ ಅವಾರ್ಡ್‌' ಕಾರ್ಯಕ್ರಮದಡಿ ಜಿಲ್ಲೆಯ 225 ಮಂದಿ ವಿದ್ಯಾರ್ಥಿಗಳಿಂದ 2 ದಿನಗಳ ಕಾಲ ನಡೆಯಲಿರುವ ವಿಜ್ಞಾನ ಮಾದರಿಗಳ ಪ್ರದರ್ಶನ ಗುರುವಾರ ಉಡುಪಿ ಸೈಂಟ್‌ ಸಿಸಿಲಿ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡಿತು.

Vijaya Karnataka 21 Dec 2018, 5:00 am
ಉಡುಪಿ : ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಲ್ಲಿ ಹುದುಗಿರುವ ವಿಜ್ಞಾನ ಪ್ರತಿಭೆ ಹೊರ ತರುವ ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿರುವ 'ಇನ್‌ಸ್ಪೈರ್‌ ಅವಾರ್ಡ್‌' ಕಾರ್ಯಕ್ರಮದಡಿ ಜಿಲ್ಲೆಯ 225 ಮಂದಿ ವಿದ್ಯಾರ್ಥಿಗಳಿಂದ 2 ದಿನಗಳ ಕಾಲ ನಡೆಯಲಿರುವ ವಿಜ್ಞಾನ ಮಾದರಿಗಳ ಪ್ರದರ್ಶನ ಗುರುವಾರ ಉಡುಪಿ ಸೈಂಟ್‌ ಸಿಸಿಲಿ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡಿತು.
Vijaya Karnataka Web inspirej


ರಾಜ್ಯ ಶಿಕ್ಷ ಣ ಸಂಶೋದನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಉಡುಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 148 ಶಾಲೆಗಳಿಂದ 225 ಮಂದಿ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಇದರಲ್ಲಿ ಕಾರ್ಕಳದಿಂದ 69, ಬ್ರಹ್ಮಾವರದಿಂದ 58, ಕುಂದಾಪುರದಿಂದ 39, ಬೈಂದೂರಿನಿಂದ 30 ಹಾಗೂ ಉಡುಪಿಯ 29 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಏನೆಲ್ಲಾ ಮಾಡೆಲ್‌ಗಳು?: ಈ ವಿಜ್ಞಾನ ಮಾದರಿಯಲ್ಲಿ ನಾನಾ ತಂತ್ರಜ್ಞಾನವನ್ನು ಪರಿಚಯಿಸುವ ವೈವಿಧ್ಯಮಯ ಮಾದರಿಗಳು ಕಾಣ ಸಿಕ್ಕವು. ಕಲುಷಿತ ವಾತಾವರಣದಿಂದ ಶುದ್ಧ ಗಾಳಿ ಪಡೆಯುವ ಕುರಿತು ಸಂಶೋಧಿಸಿರುವ ಯಂತ್ರ, ವಿದ್ಯಾರ್ಥಿ ಸುಮುಖ್‌ ತಯಾರಿಸಿದ ಸಮುದ್ರದಲ್ಲಿ ಸೋರಿಕೆಯಾದ ತೈಲವನ್ನು ಶುದ್ಧೀಕರಿಸುವ ಯಂತ್ರ, ಸಂಪತ್‌ ತಯಾರಿಸಿದ ಅಕ್ವಾಪೋನಿಕ್ಸ್‌ ಮಾದರಿಯಲ್ಲಿ ಮೀನು , ತರಕಾರಿ ಹಾಗೂ ಪಶು ಸಾಕಾಣಿಕೆ, ವಿದ್ಯಾರ್ಥಿನಿ ಸನಿಹ ಸಿದ್ದಪಡಿಸಿದ ಟ್ರಾಫಿಕ್‌ನಿಂದ ವಿದ್ಯುತ್‌ ತಯಾರಿಕೆ ಹಾಗೂ ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಅಪಘಾತ ತಡೆಯುವ ಮಾದರಿ, ಸಂಜನಾ ಆಚಾರ್ಯ ಅವರ ಜೈಂಟ್‌ ವೀಲ್‌ ಮಾದರಿಯಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಜಿತೇಶ್‌ ಸಿದ್ದಪಡಿಸಿರುವ ಕೊಳಚೆ ನೀರನ್ನು ನೈಸರ್ಗಿಕ ವಿಧಾನದಲ್ಲಿ ಶುದ್ಧೀಕರಿಸುವ ಮಾದರಿ, ವಿನ್ಯಾಸ್‌ ಶೆಟ್ಟಿ ಸಿದ್ಧಪಡಿಸಿದ ಸೈಕಲ್‌ ಬ್ರೇಕ್‌ನಿಂದ ವಿದ್ಯುತ್‌ ಉತ್ಪಾದನೆ ಮತ್ತು ಅದೇ ವಿದ್ಯುತ್‌ ಬಳಸಿಕೊಂಡು ಏರು ಪ್ರದೇಶದಲ್ಲಿ ಸ್ವಯಂ ಸೈಕಲ್‌ ಚಾಲನೆ ಹಾಗೂ ಸೋಲಾರ್‌ ವ್ಯವಸ್ಥೆಯಿಂದ ಚಲಿಸುವ ಸೈಕಲ್‌, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ಸೈರನ್‌, ಆದರ್ಶ ಶೆಟ್ಟಿ ಸಂಶೋಧಿಸಿದ ಟ್ರಾಷ್‌ ಕ್ಲೀನರ್‌ ಸಮುದ್ರದಲ್ಲಿ ತೇಲುವ ಪ್ಲಾಸ್ಟಿಕ್‌ ಮತ್ತು ಇತರ ತ್ಯಾಜ್ಯ ತೆಗೆಯಲಿದೆ. ಧನುಷ್‌ ಪೂಜಾರಿ ಸಿದ್ದಪಡಿಸಿದ ಮನೆ ಮೇಲೆ ಬೀಳುವ ನೀರಿನಿಂದ ವಿದ್ಯುತ್‌ ತಯಾರಿಕೆ ಮಾದರಿ, ಪ್ಲಾಸ್ಟಿಕ್‌ ಸುಡುವ ಓವನ್‌, ಸೌರಶಕ್ತಿ ಚಾಲಿತ ರೈಲು, ಕತ್ತಲಾದರೆ ಸ್ವಯಂ ಚಾಲಿತವಾಗಿ ಬೆಳಗುವ ಸೋಲಾರ್‌ ದಾರಿದೀಪ , ಎಟಿಎಂ ರೀತಿಯಲ್ಲಿ ಹಾಲು ಕೊಡುವ ಯಂತ್ರ, ಸ್ಮಾರ್ಟ್‌ ಸಿಟಿ ಯೋಜನೆ, ಭೂ ಕಂಪನ ಮುನ್ಸೂಚನೆ ವ್ಯವಸ್ಥೆ ಮೊದಲಾದ ಅನೇಕ ಮಾದರಿಗಳು ಗಮನ ಸೆಳೆದವು.

ರಾಜ್ಯ ಮಟ್ಟಕ್ಕೆ 22 ಮಂದಿ ವಿದ್ಯಾರ್ಥಿಗಳ ಆಯ್ಕೆ: ಪ್ರಸ್ತುತ ಈ ಇನ್‌ಸ್ಪೈರ್‌ ಅವಾರ್ಡ್‌ ಯೋಜನೆಗಾಗಿ ಜಿಲ್ಲೆಯ 970 ವಿದ್ಯಾರ್ಥಿಗಳು ತಮ್ಮ ಯೋಜನೆ ವಿವರಗಳನ್ನು ಆನ್‌ಲೈನ್‌ ಮೂಲಕ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಲ್ಲಿಸಿದ್ದು, ಅವರಲ್ಲಿ ಆಯ್ಕೆಯಾದ 225 ವಿದ್ಯಾರ್ಥಿಗಳ ಯೋಜನೆಗೆ ಕೇಂದ್ರ ಸರಕಾರ ತಲಾ 10,000 ರೂ.ಗಳನ್ನು ಬಿಡುಗಡೆಗೊಳಿಸಿದೆ. ಹೀಗೆ ಜಿಲ್ಲೆಯಿಂದ ಆಯ್ಕೆಯಾದ 225 ಮಂದಿ ವಿದ್ಯಾರ್ಥಿಗಳು ಈ ಹಣದಿಂದ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ಇವರಲ್ಲಿ ಶೇ.10 ಮಾದರಿ (22 ಮಂದಿ ವಿದ್ಯಾರ್ಥಿಗಳು)ಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಹ ಶೇ.10 ಮಾದರಿಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆರಿಸಲಾಗುವುದು ಎಂದು ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ ಪ್ರಿನ್ಸಿಪಾಲ್‌ ಭಾಗ್ಯಲಕ್ಷ್ಮಿ ಸಿ.ಬಿ.ತಿಳಿಸಿದರು.
ರಾಜ್ಯಮಟ್ಟದ ಸ್ಪರ್ಧೆ ಡಿ.28 ಹಾಗೂ 29ರಂದು ಮೈಸೂರಿನಲ್ಲಿ ನಡೆಯಲಿದೆ.


ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷ ತೆ ವಹಿಸಿದ್ದರು. ಸೈಂಟ್‌ ಸಿಸಿಲಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್‌ ಮೇಝಿ, ಮುಖ್ಯ ಶಿಕ್ಷಕಿ ಪ್ರೀತಿ ಕ್ರಾಸ್ತಾ, ಉಡುಪಿ ಬಿಇಓ ಉಮಾ, ಬ್ರಹ್ಮಾವರ ಬಿಇಓ ಆನಂದ್‌, ನೋಡಲ್‌ ಅಧಿಕಾರಿ ಶೋಭಾ ಶೆಟ್ಟಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಕಾರ್ಯದರ್ಶಿ ಪ್ರಕಾಶ್‌ ಉಪಸ್ಥಿತರಿದ್ದರು. ಡಯಟ್‌ನ ವೈಸ್‌ಪ್ರಿನ್ಸಿಪಾಲ್‌ ಚಂದ್ರಶೇಖರ್‌ ವಂದಿಸಿ, ಉಪನ್ಯಾಸಕ ಚಂದ್ರ ನಾಯ್ಕ್‌ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ