ಆ್ಯಪ್ನಗರ

ನಿಲ್ಲದ ನೀರಿನ ಬವಣೆ: ಡ್ರಜ್ಜಿಂಗ್‌, ಶ್ರಮದಾನ ಜೋರು

ನಗರಕ್ಕೆ ನೀರುಣಿಸುವ ಬಜೆ ಡ್ಯಾಂ ಸಂಪೂರ್ಣ ಖಾಲಿಯಾಗಿರುವ ಪರಿಣಾಮ ನೀರಿನ ಬವಣೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. 35 ವಾರ್ಡ್‌ಗಳನ್ನು ವಿಂಗಡಿಸಿ 6 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರೂ ನೀರಿನ ಸಮಸ್ಯೆ ಮಾತ್ರ ತಗ್ಗಿಲ್ಲ. ನಗರದ ಎತ್ತರ ಪ್ರದೇಶದಲ್ಲಿರುವ ಜನರ ಸಂಕಷ್ಟ ಕೇಳುವಂತಿಲ್ಲ.

Vijaya Karnataka 13 May 2019, 5:00 am
ಉಡುಪಿ: ನಗರಕ್ಕೆ ನೀರುಣಿಸುವ ಬಜೆ ಡ್ಯಾಂ ಸಂಪೂರ್ಣ ಖಾಲಿಯಾಗಿರುವ ಪರಿಣಾಮ ನೀರಿನ ಬವಣೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. 35 ವಾರ್ಡ್‌ಗಳನ್ನು ವಿಂಗಡಿಸಿ 6 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರೂ ನೀರಿನ ಸಮಸ್ಯೆ ಮಾತ್ರ ತಗ್ಗಿಲ್ಲ. ನಗರದ ಎತ್ತರ ಪ್ರದೇಶದಲ್ಲಿರುವ ಜನರ ಸಂಕಷ್ಟ ಕೇಳುವಂತಿಲ್ಲ.
Vijaya Karnataka Web irrigation water drozing lounging effort
ನಿಲ್ಲದ ನೀರಿನ ಬವಣೆ: ಡ್ರಜ್ಜಿಂಗ್‌, ಶ್ರಮದಾನ ಜೋರು


ಮೇ 6 ರಿಂದ ನಿರಂತರ ಡ್ರಜ್ಜಿಂಗ್‌ ಪ್ರಕ್ರಿಯೆ ನಡೆಯುತ್ತಿದ್ದು, ಶಾಸಕ ಕೆ. ರಘುಪತಿ ಭಟ್‌ ಮುಂದಾಳತ್ವದಲ್ಲಿ ಶ್ರಮದಾನವೂ ನಡೆಯುತ್ತಿದೆ. ಆದರೂ ನೀರಿನ ಬವಣೆ ನಿಗಿಸುವಲ್ಲಿ ಬಜೆ ಕೈ ಚೆಲ್ಲಿದೆ.

ಸದ್ಯ ಡ್ಯಾಂ ಜಾಕ್‌ವಾಲ್‌ನಲ್ಲಿ 1.20 ನೀರಿನ ಮಟ್ಟವಿದ್ದು, ನೀರು ಹಾರಿದು ಬರುತ್ತಿದ್ದಂತೆ ಪಂಪ್‌ ಮಾಡಲಾಗುತ್ತಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ ತಡರಾತ್ರಿವರೆಗೂ ಪಂಪ್‌ ಮಾಡಲಾಗಿದೆ. ನೀರಿನ ಪೂರೈಕೆಯಾಗದೇ ಇರುವ ಬಗ್ಗೆ ನಗರಸಭೆಗೆ 27 ದೂರು ಬಂದಿದ್ದು, ಎಲ್ಲ ದೂರುಗಳನ್ನು ಸ್ವೀಕಾರ ಮಾಡಿ ಪರಿಶೀಲನೆ ಮಾಡಲಾಗಿದೆ.

ಭಾನುವಾರ ಪೂರೈಕೆಯಾಗಬೇಕಿದ್ದ 5 ನೇ ವಿಭಾಗಗಳಲ್ಲಿ ಅರ್ಧದಷ್ಟು ನೀರು ಭಾಗಗಳಿಗೆ ನೀರು ಪೂರೈಕೆಯಾಗಿಲ್ಲ. ಈ ನಿಟ್ಟಿನಲ್ಲಿ ಮೇ 13 ರಂದು ಬಾಕಿ ಉಳಿದಿರುವ ಅರ್ಧದಷ್ಟು ವಾರ್ಡ್‌ಗಳು ಹಾಗೂ 6 ನೇ ವಿಭಾಗದ ಪ್ರದೇಶಗಳಿಗೆ ನೀರು ನೀಡಲಾಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್‌, ವಸತಿ ಸಮುಚ್ಛಯಗಳು ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದು ಖಾಸಗಿಯಾಗಿ ನೀರು ಪಡೆದುಕೊಳ್ಳಲು ಟ್ಯಾಂಕರ್‌ ನೀರು ಸಿಗುತ್ತಿಲ್ಲ ಎನ್ನುವುದು ಹೋಟೆಟೆಲ್‌, ವಸತಿ ಸಮುಚ್ಛಯಗಳ ಮಾಲೀಕರ ಅಳಲು. ದೊಡ್ಡಣಗುಡ್ಡೆ ವಸತಿ ಸಮುಚ್ಛಯದಲ್ಲಿ ನೀರಿನ ಹಾಹಾಕಾರವಾಗಿದೆ. ಇಲ್ಲಿಗೆ ನೀರು ಬಾರದೆ 11 ದಿನಗಳೇ ಕಳೆದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ