ಆ್ಯಪ್ನಗರ

ಅಂಬಿ ವೈಕುಂಠ ಸಮಾರಾಧನೆಗಾದರೂ ರಮ್ಯಾ ಬರ್ತಾರಾ ನೋಡೋಣ ಎಂದ ಜಯಮಾಲಾ

ನಟಿ ರಮ್ಯಾ ಆರೋಗ್ಯದ ಸಮಸ್ಯೆಯಿಂದಾಗಿ ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ. ಇದಕ್ಕೆ ಬೇರೇನೂ ರಾಜಕೀಯ ಕಾರಣ ಇಲ್ಲ. ಹೆಣ್ಮಕ್ಕಳಿಗೆ ಹಲವಾರು ತೊಂದರೆ ಇರುತ್ತದೆ ಎಂದು ಜಯಮಾಲಾ ಹೇಳಿದರು.

Vijaya Karnataka Web 30 Nov 2018, 6:50 pm
ಉಡುಪಿ: ಹಿರಿಯ ನಟ ದಿ. ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ನಾವೆಲ್ಲ ಅಸಹಾಯಕರಾಗಿದ್ದೇವೆ. ಎಲ್ಲೇ ಸ್ಮಾರಕ ಮಾಡಲು ಹೋದರೂ ಒಂದು ವಿವಾದ ಸೃಷ್ಟಿಯಾಗುತ್ತಿದೆ. ಯಾಕೆ ಹೀಗೆ ಆಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ನಾವೆಲ್ಲರೂ ಭಾರತಿ ಪರವಾಗಿಯೇ ನಿಲ್ಲುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಮತ್ತು ಕನ್ನಡ ಸಂಸ್ಕಂತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.
Vijaya Karnataka Web jayamala


ಮೂಡನಿಡಂಬೂರು ಎಪಿಎಂಸಿ ಯಾರ್ಡ್ ಬಳಿ ಜಿಲ್ಲಾ ರಂಗ ಮಂದಿರ ಮತ್ತು ರಂಗಾಯಣ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾಧ್ಯಮದೊಂದಿಗೆ ಜಯಮಾಲಾ ಮಾತನಾಡಿದರು.

ವಿಷ್ಣುವರ್ಧನ್ ನಮ್ಮನ್ನಗಲಿ 9 ವರ್ಷಗಳೇ ಕಳೆದಿದೆ. ಭಾರತಿ ಅವರ ಬೇಸರ ಸಹಜ. ಭಾರತಿ ಕುಟುಂಬಕ್ಕೆ ನಾನು ಬೆಲೆ ಕೊಡುತ್ತೇನೆ. ವಿಷ್ಣುಗೆ ಮೈಸೂರು ಅಂದರೆ ಪ್ರಾಣ. ಭಾರತಿಯವರು ಕೂಡಾ ಮೈಸೂರಿನಲ್ಲೇ ಸ್ಮಾರಕ ಮಾಡುವಂತೆ ಕೇಳಿದ್ದಾರೆ. ವಿಷ್ಣು ಆಸೆ ಏನು ಅನ್ನೋದು ಅವರ ಕುಟುಂಬಕ್ಕೆ ಗೊತ್ತಿರುತ್ತೆ. ಈ ವಿಚಾರದಲ್ಲಿ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದರು.

ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಾ ಸಿನೆಮಾ ರಂಗದವರೇ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂಧಿಸಿ ಸಣ್ಣ ತಕರಾರು ಇರಬೇಕು. ಗುರುವಾರ ಮುನಿರತ್ನ, ಮಂಜು ಸಂಧಾನ ನಡೆಸಿದ್ದಾರೆ. ಈ ಬಗ್ಗೆ ಭಾರತಿ ಅವರಿಗೂ ಪತ್ರದ ಮೂಲಕ ತಿಳಿಸಿದ್ದಾರೆ ಎಂದರು.

ನಟಿ ರಮ್ಯಾ ಆರೋಗ್ಯದ ಸಮಸ್ಯೆಯಿಂದಾಗಿ ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ. ಇದಕ್ಕೆ ಬೇರೇನೂ ರಾಜಕೀಯ ಕಾರಣ ಇಲ್ಲ. ಹೆಣ್ಮಕ್ಕಳಿಗೆ ಹಲವಾರು ತೊಂದರೆ ಇರುತ್ತದೆ. ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದರೂ ಬರಬಹುದು ನೋಡೋಣ ಎಂದು ಹೇಳಿದರು.

ಅಂಬರೀಶ್ ಓರ್ವ ಮಹಾನ್ ನಾಯಕ. ನಿಜವಾದ ಜನ ನಾಯಕ. ಜನರ ಹೃದಯದಲ್ಲಿ ವಾಸ ಮಾಡಿದ ಮಹಾನ್ ನಟ. ಅಂಬರೀಶ್ ಸ್ಮಾರಕಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಮ್ಮಿಶ್ರ ಸರಕಾರದಿಂದ ಅಸಮಾಧಾನಗೊಂಡಿರುವ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈಗೆ ತೆರಳುತ್ತಿದ್ದಾರೆ ಎನ್ನುವ ವಿಚಾರ ತಳ್ಳಿ ಹಾಕಿದ ಸಚಿವೆ ರಾಜ್ಯ ಸರಕಾರ ಭದ್ರವಾಗಿದೆ. ಅಸಮಾಧಾನ ಎಲ್ಲ ಸುಳ್ಳು ಎಂದರು.

ಜಿಲ್ಲೆಯ ಟೋಲ್ ಗೇಟ್ ಸಮಸ್ಯೆಗೆ ಸಂಬಂಸಿ ಹಕ್ಕು ಚ್ಯುತಿ ಮಾಡದಂತೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಸಚಿವರು ಸೇರಿ ಕೇಂದ್ರಕ್ಕೆ ನಿಯೋಗ ತೆರಳಿ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಬೇಕಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ