ಆ್ಯಪ್ನಗರ

ಕಾಪು ಹೊಸ ಮಾರಿಗುಡಿಗೆ ಕಂದಾಯ ಕಾರ್ಯದರ್ಶಿ ಭೇಟಿ

ಪುನರ್‌ ನಿರ್ಮಾಣಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿಗೆ ಮಂಗಳವಾರ ಕರ್ನಾಟಕ ರಾಜ್ಯ ಕಂದಾಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ ಹಾಗೂ ಪತ್ನಿ ಗೀತಾ ಬಡೇರಿಯಾ ದಂಪತಿ ಭೇಟಿ ನೀಡಿ, ಜೀರ್ಣೋದ್ಧಾರದ ಸಿದ್ಧತೆ ಪರಿಶೀಲಿಸಿದರು.

Vijaya Karnataka 23 Jan 2019, 8:30 pm
ಕಟಪಾಡಿ : ಪುನರ್‌ ನಿರ್ಮಾಣಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿಗೆ ಮಂಗಳವಾರ ಕರ್ನಾಟಕ ರಾಜ್ಯ ಕಂದಾಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ ಹಾಗೂ ಪತ್ನಿ ಗೀತಾ ಬಡೇರಿಯಾ ದಂಪತಿ ಭೇಟಿ ನೀಡಿ, ಜೀರ್ಣೋದ್ಧಾರದ ಸಿದ್ಧತೆ ಪರಿಶೀಲಿಸಿದರು.
Vijaya Karnataka Web KAPU


ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಜೀರ್ಣೋದ್ಧಾರದ ರೂಪುರೇಷೆ ಬಗ್ಗೆ ಮತ್ತು ದೇಗುಲದ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ದೇಗುಲದ ತಂತ್ರಿ ವೇ.ಮೂ. ಕುಮಾರಗುರು ತಂತ್ರಿ ಮತ್ತು ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಅವರು ದೇಗುಲದ ಪರವಾಗಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಬಡೇರಿಯಾ, ಸುಮಾರು 35 ಕೋ.ರೂ. ವೆಚ್ಚದಲ್ಲಿ ಕಾಪು ಹೊಸ ಮಾರಿಗುಡಿಯ ಜೀರ್ಣೋದ್ದಾರಕ್ಕೆ ಯೋಜನೆ ರೂಪಿಸಲಾಗಿದ್ದು ಎಲ್ಲರ ಸಹಭಾಗಿತ್ವದೊಂದಿಗೆ ಜೀರ್ಣೋದ್ಧಾರ ಕಾರ್ಯ ಮಾದರಿಯಾಗಿ ನಡೆಯುವ ವಿಶ್ವಾಸವಿದೆ. ಮುಜರಾಯಿ ಇಲಾಖೆಯ ಮೂಲಕವೂ ಇದಕ್ಕೆ ಬೇಕಾದ ಸಂಪೂರ್ಣ ಸಹಕಾರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. 1999-2000ರಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗಿನಿಂದಲೂ ಕಾಪು ಮಾರಿಗುಡಿ ಜತೆಗೆ ಉತ್ತಮ ಸಂಪರ್ಕ ಇಟ್ಟುಕೊಂಡು ಬಂದಿದ್ದೇನೆ. ಕರಾವಳಿ ಜಿಲ್ಲೆಗಳ ಶಕ್ತಿಪೀಠಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು, ನಂಬಿದವರನ್ನು ಯಾವತ್ತೂ ಕೂಡ ಕೈ ಬಿಟ್ಟಿಲ್ಲ. ಮಾರಿಗುಡಿ ಕೂಡ ಅದಕ್ಕೆ ಹೊರತಾಗಿಲ್ಲ ಎಂದರು.

ಕಾಪು ಹೊಸಮಾರಿಗುಡಿಯ ಆಡಳಿತಾಧಿಕಾರಿ ಪ್ರವೀಣ್‌ ಬಿ.ನಾಯಕ್‌, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್‌ ಹೆಗ್ಡೆ ಕಲ್ಯ, ಕೋಶಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ಪ್ರಚಾರ ಸಮಿತಿಯ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಬಾಲಾಜಿ, ಸಮಿತಿ ಪದಾಧಿಕಾರಿಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್‌. ಪಾಲನ್‌, ಹರೀಶ್‌ ನಾಯಕ್‌, ಪ್ರಭಾತ್‌ ಶೆಟ್ಟಿ, ರಘುರಾಮ ಶೆಟ್ಟಿ, ಜಯರಾಮ ಆಚಾರ್ಯ, ಜಗದೀಶ್‌ ಬಂಗೇರ, ಚಂದ್ರಶೇಖರ್‌ ಅಮೀನ್‌, ದೇಗುಲದ ಪ್ರಬಂಧಕ ಗೋವರ್ಧನ ಶೇರಿಗಾರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ